
ಇವರೇ ನೋಡಿ ಈ ಬಾರಿಯ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳು – ವೈರಲ್ ಆಗುತ್ತಿದೆ ಸ್ಪರ್ಧಿಗಳ ಪಟ್ಟಿ, ಯಾರೆಲ್ಲ ಇದ್ದಾರೆ ಗೊತ್ತಾ?
- ಮನರಂಜನೆ
- September 5, 2023
- No Comment
- 98
ನ್ಯೂಸ್ ಆ್ಯರೋ : ಕಿರುತೆರೆ ಪರದೆಯಲ್ಲಿ ಸಂಚಲನ ಸೃಷ್ಟಿರುವ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇನ್ನೇನು ಕೆಲವೇ ದಿನದಲ್ಲಿ ಮತ್ತೆ ಆರಂಭವಾಗಲಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್ ಬಾಸ್ ಆರಂಭವಾಗಿದೆ. ಈ ನಡುವೆ ಕನ್ನಡ ಬಿಗ್ ಬಾಸ್ ಹೊಸ ಸೀಸನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾರಿಯ ಸ್ಪರ್ಧಿಗಳ ಪಟ್ಟಿಯೊಂದು ವೈರಲ್ ಆಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಈ ಬಾರಿ ಓಟಿಟಿ ಇಲ್ಲ!
ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ ನಲ್ಲಿ ಓಟಿಟಿ ಎಂಬ ವಿಭಾಗವಿತ್ತು ಆದರೆ ಈ ಬಾರಿ 10ನೇ ಸೀಸನ್ ಆರಂಭವಾಗಲಿದ್ದು ಓಟಿಟಿ ಇಲ್ಲದೆ ಟಿವಿ ಬಿಗ್ ಬಾಸ್ ನೇರವಾಗಿ ಆರಂಭವಾಗಲಿದೆಯಂತೆ. ಈಗಾಗಲೇ ಸೀಸನ್ 10ರ ಸಿದ್ಧತೆ ಆರಂಭವಾಗಿದೆ. ಬಿಗ್ ಬಾಸ್ ಹೊಸ ಪ್ರೋಮೋ ಕೂಡ ಸಕ್ಕತ್ ಸದ್ದು ಮಾಡುತ್ತಿದೆ. ಈ ಬಾರಿ ಇವರೆಲ್ಲ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯಿದೆ.
ಯಾರೆಲ್ಲ ಸ್ಪರ್ಧಿಸಲಿದ್ದಾರೆ ಗೊತ್ತಾ?
ಮೇಘನಾ ಶೆಟ್ಟಿ
‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘನಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲು ನಟಿಸುತ್ತಿದ್ದಾರೆ. ಈಗಾಗಲೇ ಅವರ ನಟನೆಯ ‘ದಿಲ್ ಪಸಂದ್’ ಹಾಗೂ ‘ತ್ರಿಬಲ್ ರೈಡಿಂಗ್’ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇವರು ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಸುನೀಲ್ ರಾವ್
ಮೋಹಕ ತಾರೆ ರಮ್ಯಾ ಹಾಗೂ ಅಜಯ್ ರಾವ್ ಅವರೊಂದಿಗೆ ಸೇರಿ ಸುನೀಲ್ ರಾವ್ ನಟಿಸಿರುವ ‘ಎಕ್ಸ್‌ಕ್ಯೂಸ್ ಮಿ’ ಕನ್ನಡದಲ್ಲಿ ಸಕ್ಕತ್ ಸದ್ದು ಮಾಡಿದ್ದ ಚಿತ್ರ. ಆದರೆ ಆನಂತರ ಸುನೀಲ್ ರಾವ್ ಅವರು ಚಿತ್ರರಂಗದಲ್ಲಿ ನಾಯಕನಾಗಿ ಹೆಚ್ಚು ಸಕ್ಸಸ್ ಕಂಡಿಲ್ಲ. ಸದ್ಯ, ಉದ್ಯಮಿಯಾಗಿರುವ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಬಿಗ್ ಬಾಸ್ ಹೊಸ ಲೀಸ್ಟ್ ನಲ್ಲಿ ಇವರ ಹೆಸರೂ ಕೂಡ ತಳುಕು ಹಾಕುತ್ತಿದೆ.
ನಿನಾದ್ ಹಾಗೂ ನಮ್ರತ
ನಟನೆ ಹಾಗೂ ಗಾಯನದಲ್ಲಿ ರಾಜ್ಯದಾದ್ಯಂತ ಸುದ್ದಿಯಾಗಿರುವ ನಿನಾದ್ ಹಾಗೂ ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಆಗಮಿಸಿ ಬಳಿಕ ‘ನಾಗಿಣಿ’ ಸೀರಿಯಲ್ ಮೂಲಕ ಯಶಸ್ವಿಯಾಗಿ ಇದೀಗ ಸಿನಿಮಾಗಳಲ್ಲೂ ನಟಿಸುತ್ತಿರುವ ನಮ್ರತ ಅವರ ಹೆಸರೂ ಕೂಡ ಬಿಗ್ ಬಾಸ್ ಹೊಸ ಪಟ್ಟಿಯಲ್ಲಿ ಸೇರಿಕೊಂಡಿದೆ.
ರಕ್ಷಕ್ ಬುಲೆಟ್
ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರರಾಗಿರುವ ರಕ್ಷಕ್ ಬುಲೆಟ್ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ. ‘ಗುರು ಶಿಷ್ಯರು’ ಸಿನಿಮಾ ಮೂಲಕ ನಟನೆ ಆರಂಭಿಸಿರುವ ರಕ್ಷಕ್ ತಮ್ಮ ಅತಿಯಾದ ಮಾತು ಹಾಗೂ ವರ್ತನೆಯಿಂದ ಟ್ರೋಲ್ ಗಳಿಗೆ ಆಹಾರವಾದವರು. ಇದೀಗ ರಕ್ಷಕ್ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಇನ್ನುಳಿದಂತೆ ರ‍್ಯಾಪರ್-ಸಿಂಗರ್ ಇಶಾನಿ, ಇಡೀ ಕರ್ನಾಟಕವನ್ನೇ ಮಾತಿನ ಮೂಲಕ ಮರಳು ಮಾಡಿದ್ದ ಡ್ರೋನ್ ಪ್ರತಾಪ್, ಸೋಶಿಯಲ್ ಮೀಡಿಯಾ ಸ್ಟಾರ್ ಗಳಾದ ಶಿಲ್ಪಾ ಗೌಡ, ಭೂಮಿಕ ಬಸವರಾಜ್, ಬಿಂದು ಗೌಡ ಕೂಡ ಈ ಬಾರಿಯ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಅಧಿಕೃತ ಪಟ್ಟಿಯಲ್ಲದಿದ್ದರೂ, ಈ ಎಲ್ಲಾ ಸ್ಪರ್ಧಿಗಳ ಬಗ್ಗೆ ಬಾರೀ ಚರ್ಚೆಯಾಗುತ್ತಿದೆ. ಮುಂದಿನ ಅಕ್ಟೋಬರ್ ಮೊದಲ ವಾರ ಬಿಗ್ ಬಾಸ್ 10 ಆರಂಭವಾಗಲಿದೆಯಂತೆ.