ದ್ವಿತೀಯ ಪಿಯು ಮರು ಮೌಲ್ಯಮಾಪನ ನಿಯಮದಲ್ಲಿ ಬದಲಾವಣೆ – ಹೇಗಿದೆ ಹೊಸ ವ್ಯವಸ್ಥೆ?

ದ್ವಿತೀಯ ಪಿಯು ಮರು ಮೌಲ್ಯಮಾಪನ ನಿಯಮದಲ್ಲಿ ಬದಲಾವಣೆ – ಹೇಗಿದೆ ಹೊಸ ವ್ಯವಸ್ಥೆ?

ನ್ಯೂಸ್ ಆ್ಯರೋ‌ : ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ ಒಂದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಂಕ ಬದಲಾವಣೆಯೊಂದಿಗೆ ಕಟ್ಟಿದ ಶುಲ್ಕವನ್ನು ಮರು ಪಾವತಿಸಲಾಗುತ್ತಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಮೊದಲು ಕನಿಷ್ಠ 6 ಅಂಕ ಹೆಚ್ಚು ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಬದಲಾವಣೆಯ ಅಂಕ ನೀಡುತ್ತಿತ್ತು. ಕರ್ನಾಟಕ ಪದವಿ ಪೂರ್ವ ಶಿಕ್ಷಣ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಿಯಮಗಳು -1997ಕ್ಕೆ ತಿದ್ದುಪಡಿ ತರಲಾಗಿದ್ದು, ಒಂದು ಅಂಕ ಹೆಚ್ಚಾದರೂ ಬದಲಾದ ಅಂಕಗಳನ್ನು ನೀಡುವ ನಿಯಮ ಜಾರಿಗೆ ತರಲಾಗಿದೆ. ಹೊಸ ನಿಯಮದ ಪ್ರಕಾರ 1,925 ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಮರು ಮೌಲ್ಯಮಾಪನದ ಶುಲ್ಕವನ್ನು ಕೂಡ ವಾಪಸ್ ನೀಡಲಾಗುತ್ತದೆ.

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಕ್ಯಾನ್ ಪ್ರತಿ ಪಡೆಯಬೇಕು. ಸ್ಕ್ಯಾನ್ ಪ್ರತಿ ಪಡೆಯಲು ವಿದ್ಯಾರ್ಥಿಗಳು 530 ರೂ., ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು 1,670 ರೂ. ಸೇರಿ ಒಟ್ಟು 2,200 ರೂ. ಶುಲ್ಕ ಪಾವತಿಸಬೇಕು. ಈ ರೀತಿ 8,950 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಮರು ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಒಂದು ಅಂಕ ಹೆಚ್ಚು ಬಂದರೂ ಪರಿಗಣಿಸಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. 2023ರ ಮಾರ್ಚ್ ನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಿಂದ ಹೊಸ ನಿಯಮ ಅನ್ವಯವಾಗಿದೆ. ಪ್ರತಿಯೊಂದು ಅಂಕವು ಮುಖ್ಯವಾಗಿರುವುದರಿಂದ ಒಂದು ಅಂಕವನ್ನು ಪರಿಗಣಿಸುವ ವಿದ್ಯಾರ್ಥಿ ಸ್ನೇಹಿ ಕೈಗೊಳ್ಳಲಾಗಿದೆ. ಸಿಇಟಿ ಸೀಟು ಹಂಚಿಕೆಗೆ ಅಂಕಗಳನ್ನು ಪರಿಗಣಿಸುವ ಹಿನ್ನಲೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೊಂದು ಅಂಕ ಕೂಡ ಮುಖ್ಯವಾಗಿರುತ್ತದೆ. ಇದೀಗ ಈ ಕ್ರಮದಿಂದ ಹೆಚ್ಚಿನ ಅನುಕೂಲವಾದಂತಾಗಿದೆ.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *