ಫ್ರೆಂಚ್​ ಫ್ರೈಸ್ ತಿನ್ನುವ ಮುನ್ನ ಇತ್ತ ಗಮನಿಸಿ: ಇದರಲ್ಲಿದೆ ನೂರಾರು ಆಪತ್ತುಗಳು

Eating French Fries
Spread the love

ನ್ಯೂಸ್ ಆ್ಯರೋ: ಫ್ರೆಂಚ್​ಫ್ರೈಸ್ ಕೇವಲ ಭಾರತದಲ್ಲಿಯೇ ಅಲ್ಲ ಇಡೀ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಸ್ನ್ಯಾಕ್ಸ್.ಬರ್ಗರ್ ಜೊತೆ ಸೈಡ್ಸ್​ ಆಗಿ ಅದನ್ನು ತಿಂದು ಎಂಜಾಯ್ ಮಾಡುವವರು ವಿಶ್ವಾದ್ಯಂತವಿದ್ದಾರೆ. ಈ ರುಚಿಕರವಾದ ತಿಂಡಿ ತಿನ್ನುವುದರಿಂದ ಅದು ತನ್ನೊಂದಿಗೆ ಅನೇಕ ರೋಗಗಳನ್ನು ಕೂಡ ನಿಮ್ಮ ದೇಹಕ್ಕೆ ಸೇರಿಸುತ್ತದೆ.

ಹೌದು. . ಒಂದು ಫ್ರೆಂಚ್​ ಫ್ರೈಸ್ 25 ಸಿಗರೇಟ್​ಗೆ ಸಮ ಎಂದೇ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನಗಳು ಫ್ರೆಂಚ್​ ಫ್ರೈಸ್​ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಅನ್ನೋ ಆತಂಕಕಾರಿ ವಿಷಯವನ್ನು ಆಚೆ ತೆರೆದಿಟ್ಟಿದೆ.ಇದು ನಿಮ್ಮ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಕ್ಯಾನ್ಸರ್​​ನಂತಹ ಮಾರಕ ರೋಗ ತಂದಿಡುವ ದೊಡ್ಡ ಅಪಾಯ ಫ್ರೆಂಚ್​ ಫ್ರೈಸ್​ನಲ್ಲಿದೆ. ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವೂ ಕೂಡ ಈ ಫ್ರೆಂಚ್​ ಫ್ರೈಸ್​ ತಿನ್ನುವುದರಿಂದ ಇದೆ.

ಫ್ರೆಂಚ್​ ಫ್ರೈಸ್​ನ್ನು ಅತಿಯಾದ ಉರಿಯಲ್ಲಿ, ಕಾಯ್ದ ಎಣ್ಣೆಯಲ್ಲಿ ಕುರುಕುರು ಆಗುವವರೆಗೂ ಫ್ರೈ ಮಾಡುವುದರಿಂದ, ಆರೋಗ್ಯಕ್ಕೆ ಅಪಾಯ ತಂದಿಡಬಲ್ಲ ಅಂಶಗಳು ಅದರಲ್ಲಿ ಸೇರಿಕೊಳ್ಳುತ್ತವೆ. ಹೃದ್ರೋಗ ತಜ್ಞ ರವೀಂದ್ರ ಸಿಂಗ್ ರಾವ್​ ಅವರು ಹೇಳುವ ಪ್ರಕಾರ, ಆಲೂಗಡ್ಡೆಯನ್ನು ಫ್ರೈ ಮಾಡುವ ಎಣ್ಣೆಯೇ ದೊಡ್ಡ ಅಪಾಯ ಎಂದಿದ್ದಾರೆ. ಫ್ರೆಂಚ್​ ಫ್ರೈಸ್ ಮಾಡುವಾಗ ಯಾರು ಯಾವ ಬಗೆಯ ಎಣ್ಣೆಯನ್ನು ಉಪಯೋಗಿಸುತ್ತಾರೆ ಅನ್ನೋದು ನಮಗೆ ಗೊತ್ತಿರುವುದಿಲ್ಲ. ಅದೇ ಎಣ್ಣೆಯನ್ನು ಪದೇ ಪದೇ ಎಷ್ಟು ಬಾರಿ ಉಪಯೋಗಿಸುತ್ತಾರೆ ಎಂಬುವುದು ಕೂಡ ಗೊತ್ತಿರುವುದಿಲ್ಲ. ಪ್ರತಿ ಬಾರಿ ಎಣ್ಣೆಯನ್ನು ಮರು ಕಾಯಿಸಿದಾಗ ಅದು ಫ್ಯಾಟಿ ಆ್ಯಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಹೃದಯಕ್ಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ.

ಇನ್ನು ಡಾ ರಾವ್ ಅವರು ಹೇಳುವ ಪ್ರಕಾರ, ನೀವು ಒಂದು ಭಾರಿ ತಿನ್ನುವ ಫ್ರೆಂಚ್ ಫ್ರೈಸ್ 25 ಸಿಗರೇಟ್​ಗಳಿಗೆ ಸಮ ಎಂದಿದ್ದಾರೆ. ಈ ತರದ ತಿಂಡಿಯನ್ನು ಕರಿದ ಎಣ್ಣೆಯಲ್ಲಿಯೇ ಹಲವು ಬಾರಿ ಕರಿಯುವುದರಿಂದ ಅದರಲ್ಲಿ ಬೊಜ್ಜಿನ ಪ್ರಮಾಣ ವಿಪರೀತವಾಗಿ ಹೆಚ್ಚುತ್ತದೆ.ಹೀಗಾಗಿ ಫ್ರೆಂಚ್ ಫ್ರೈಸ್ ಆರೋಗ್ಯ ದೃಷ್ಟಿಯಿಂದ ಅಷ್ಟೊಂದು ಸರಿಯಾದ ಪದಾರ್ಥವಲ್ಲ ಎಂದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!