ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯಿರಿ; ದಿನವಿಡೀ ಎನರ್ಜಿಟಿಕ್ ಆಗಿರ್ತೀರಿ

Sabja Water
Spread the love

ನ್ಯೂಸ್ ಆ್ಯರೋ: ಖಾಲಿ ಹೊಟ್ಟೆಯಲ್ಲಿ ಸಬ್ಜಾ ನೀರನ್ನು ಕುಡಿಯುವುದು ಹಸಿವನ್ನು ನಿಗ್ರಹಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹದ ಶಾಖವನ್ನು ಕಡಿಮೆ ಮಾಡುವುದರಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡುವವರೆಗೆ ನೆನೆಸಿದ ಸಬ್ಜಾ ಬೀಜಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಸಬ್ಬಾ ಅಥವಾ ಕಾಮ ಕಸ್ತೂರಿ ಬೀಜಗಳು ಹಲವು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಕಪ್ಪು ಎಳ್ಳು ಬೀಜಗಳನ್ನು ಹೋಲುವ ಈ ಚಿಕ್ಕ ಕಪ್ಪು ಬೀಜಗಳು ಪೌಷ್ಟಿಕಾಂಶದ ಆಗರವಾಗಿದೆ.

ಜೀರ್ಣಕ್ರಿಯೆಯ ಆರೋಗ್ಯಕ್ಕೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಲ್ಲಿರುವ ನಾರಿನಂಶವು ಕರುಳಿನ ಚಲನೆಯನ್ನು ಆರೋಗ್ಯಕರವಾಗಿಡಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಸಬ್ಬಾ ಬೀಜವನ್ನು ನೀರಿನಲ್ಲಿ ನೆನೆಸಿದಾಗ ಆ ಬೀಜಗಳು ಉಬ್ಬುತ್ತವೆ ಮತ್ತು ಅದರಲ್ಲಿರುವ ನಾರಿನಂಶ ಹೆಚ್ಚಾಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯಕರ ತೂಕ ಇಳಿಕೆಗೆ ಕಾರಣವಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಬ್ಬಾ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಸಬ್ಬಾ ಬೀಜಗಳಲ್ಲಿರುವ ನಾರಿನಂಶವು ಜೀರ್ಣಕ್ರಿಯೆ ಕಾರ್ಬೋಹೈಡ್ರೆಟ್‌ಗಳನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ.

ಚರ್ಮಕ್ಕೆ ಒಳ್ಳೆಯದು: ಸಬ್ಬಾ ಬೀಜದಲ್ಲಿ ಅಲರ್ಜಿ ವಿರೋಧಿ ಗುಣಗಳಿವೆ. ಮೊಡವೆಗಳಂತಹ ಸಮಸ್ಯೆಗಳಿಂದ ರಕ್ಷಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸಬ್ಬಾ ಬೀಜದ ನೀರನ್ನು ಕುಡಿದರೆ ಚರ್ಮವು ಹೊಳೆಯುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಸಬ್ಬಾ ಬೀಜದಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಸಬ್ಜಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಈ ಅಗತ್ಯ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡಲು, ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಸಜ್ಜಾ ಬೀಜವು ಒತ್ತಡವನ್ನು ನಿಯಂತ್ರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಮೆಗ್ನಿಸಿಯಮ್ ಮತ್ತು ಇತರ ಪೋಷಕಾಂಶಗಳು ನರಪ್ರೇಕ್ಷಕ ಕಾರ್ಯವನ್ನು ನಿಯಂತ್ರಿಸುತ್ತದೆ.

ಸಬ್ಜಾ ಬೀಜಗಳು ಅಗತ್ಯವಾದ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಅವು ಪ್ರೋಟೀನ್, ಅಗತ್ಯವಾದ ಕೊಬ್ಬಿನಾಮ್ಲಗಳು, ಆಹಾರದ ಫೈಬರ್ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ.

Leave a Comment

Leave a Reply

Your email address will not be published. Required fields are marked *