ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್; ಬ್ಲಾಕ್ ಆ್ಯಂಡ್ ವೈಟ್ ಥೀಮ್ ನಲ್ಲಿ ಮಿಂಚಿದ ದೀಪ್ ವೀರ್..!
ನ್ಯೂಸ್ ಆ್ಯರೋ : ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವರ್ಷದ ಆರಂಭದಲ್ಲಿಯೇ, ದೀಪ್ ವೀರ್ ದಂಪತಿಗಳು ಮೊದಲು ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.
ಈ ವಿಷಯದ ಕುರಿತು ಅನೇಕರು ದೀಪಿಕಾ ನಿಜವಾಗಿಯೂ ಗರ್ಭಿಣಿಯಾಗಿಲ್ಲ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಿದ್ದಾರೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ದೀಪಿಕಾ ಪ್ರೆಗ್ನೆನ್ಸಿ ಫೋಟೋ ಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರೋದು ಹೇಟರ್ಸ್ ಗಳ ಬಾಯಿಮುಚ್ಚುವಂತೆ ಮಾಡಿದೆ.
ಇದರ ಬೆನ್ನಲ್ಲೇ ದೀಪಿಕಾ ಈ ತಿಂಗಳೇ ತಾಯಿಯಾಗಲಿದ್ದು, ಇದೇ ತಿಂಗಳ 28ಕ್ಕೆ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಡೆಲಿವರಿ ಡೇಟ್ ಮಾಡಿದ್ದಾರೆ. ಈ ಮೆಟರ್ನಿಟಿ ಫೋಟೋಶೂಟ್ ಅಲ್ಲಿ ದೀಪಿಕಾ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಬ್ಲಾಕ್ ಆ್ಯಂಡ್ ವೈಟ್ ಟೀಮ್ ನಲ್ಲಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಫೋಟೋಶೂಟ್ ಮಾಡಿಸಿದ್ದಾರೆ. ಇದೀಗ ದೀಪಿಕಾ ಹೆರಿಗೆಗಾಗಿ ಲಂಡನ್ ಗೆ ತೆರಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಸದ್ಯ ದೀಪ್ ವೀರ್ ದಂಪತಿಗಳ ಪ್ರೆಗ್ನೆನ್ಸಿ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
Leave a Comment