ಸ್ಕೂಟರ್ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್ ಸ್ಫೋಟ; ಓರ್ವ ಸಾವು, ಭಯಾನಕ ದೃಶ್ಯ ಸೆರೆ

ನ್ಯೂಸ್ ಆ್ಯರೋ: ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಸಾವನ್ನಪ್ಪಿರುವ ವ್ಯಕ್ತಿಯನ್ನು ಸುಧಾಕರ್ ಎಂದು ಗುರುತಿಸಾಗಿದೆ. ಸುಧಾಕರ್ ದೀಪಾವಳಿ ಹಬ್ಬದ ವಿಶೇಷವಾಗಿ ಸ್ನೇಹಿತನೊಂದಿಗೆ ತನ್ನ ಸ್ಕೂಟರ್ನಲ್ಲಿ ಈರುಳ್ಳಿ ಬಾಂಬ್ ಸಾಗಿಸುತ್ತಿದ್ದರು. ಹೀಗೆ ಸಾಗಿಸುತ್ತಿದ್ದಾಗ ಸ್ಕೂಟರ್ ಸ್ಥಳೀಯ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ.
ಈರುಳ್ಳಿ ಬಾಂಬ್ ಸಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನಾ 12.17ಕ್ಕೆ ಈ ದುರಂತ ಸಂಭವಿಸಿದೆ. ಕಿರಿದಾದ ರಸ್ತೆಯ ಪಕ್ಕ ನಿಂತಿದ್ದ ಜನರಿಗೂ ಸ್ಫೋಟದಿಂದ ಗಾಯಗಳಾಗಿವೆ.
ಬಾಂಬ್ ಸ್ಫೋಟಗೊಂಡತೆ ಹೊಗೆ ಆವೃತವಾಗಿದೆ. ಸ್ಕೂಟರ್ನ ಬಿಡಿ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿದೆ. ಇಬ್ಬರು ಆ ಸ್ಥಳದಿಂದ ಓಡೋಡಿ ಬರುವ ದೃಶ್ಯ ಸಿಟಿಕ್ಯಾಮೆರಾದಲ್ಲಿ ಸೆರೆಯಾಗಿದೆ.
Leave a Comment