ಕನ್ನಡಿ ಮೇಲೆ ಡೆತ್‌ನೋಟ್; ಆತ್ಮಹತ್ಯೆಗೆ ಶರಣಾದ ಡಿಸಿಪಿ ಪುತ್ರ, ಅಸಲಿಗೆ ಆಗಿದ್ದೇನು?

committed suicide
Spread the love

ನ್ಯೂಸ್ ಆ್ಯರೋ: ಡಿಸಿಪಿ ಪುತ್ರನೋರ್ವ ಕನ್ನಡಿ ಮೇಲೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಿಲ್ವಂತ್ ನಾಂದೇಡ್ಕರ್ ಅವರ ಏಕೈಕ ಪುತ್ರ ಸಾಹಿಲ್ ಶಿಲ್ವಂತ್ ನಾಂದೇಡ್ಕರ್(17) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 12ನೇ ತರಗತಿಯಲ್ಲಿ ಓದುತ್ತಿದ್ದ ಸೈನ್ಸ್‌ ವಿದ್ಯಾರ್ಥಿ ಸಾಹಿಲ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.

ತಮ್ಮ ನಿವಾಸದಲ್ಲಿಯೇ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಹಿಲ್ ಭಾನುವಾರ ಪತ್ತೆಯಾಗಿದ್ದಾನೆ. ಆತ ಯಾವುದೇ ಡೆತ್‌ನೋಟ್ ಬರೆದಿಲ್ಲ. ಆದರೆ ತನ್ನ ಮಲಗುವ ಕೋಣೆಯ ಕನ್ನಡಿಯ ಮೇಲೆ ಸ್ಕೆಚ್ ಪೆನ್ನಿನಿಂದ “ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆʼ ಅಂತಾ ಬರೆದಿದ್ದಾನೆ.

ಈ ಬಗ್ಗೆ ವೇದಾಂತ್ ನಗರ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಅಂತಾ ತನಿಖೆ ನಡೆಸುತ್ತಿದ್ದಾರೆ. ಸದ್ಯ ಶೈಕ್ಷಣಿಕ ಒತ್ತಡದಿಂದ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!