ನಟ ದರ್ಶನ್ ನಿಂದ ಹೊಸ ಸಿಗ್ನಲ್; ಜೈಲಿನಿಂದ ದಾಸ ಕೊಟ್ಟ ಸಂದೇಶಕ್ಕೆ ಫ್ಯಾನ್ಸ್ ಖುಷ್
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದಲೇ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಸಂದೇಶ ಕೊಟ್ಟಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾನೇ ಕರೆಯುತ್ತಾರೆ. ಇಂದು ಬಳ್ಳಾರಿ ಜೈಲಿಗೆ ಸ್ನೇಹಿತರು ಭೇಟಿ ಕೊಡಲು ಬಂದಾಗ ಸೆಲೆಬ್ರಿಟಿಗಳನ್ನ ನೋಡಿ ಸಿಗ್ನಲ್ ಮಾಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಮುಂದುವರಿದಿದೆ. ದರ್ಶನ್ ಪರ ವಕೀಲರು ಹೇಗಾದ್ರು ಮಾಡಿ ಜಾಮೀನು ಕೊಡಿಸಲು ನಿರಂತರ ಹೋರಾಟ ಮಾಡುತ್ತಿದ್ದಾರೆ.
ಜಾಮೀನು ಅರ್ಜಿಯ ವಿಚಾರಣೆ ಮಧ್ಯೆಯೇ ಇಂದು ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕರು, ಆತ್ಮೀಯರಾದ ಶೈಲಜಾ ನಾಗ್ ಹಾಗೂ ಸ್ನೇಹಿತರು ಭೇಟಿ ಮಾಡಲು ಬಂದಿದ್ದರು.
ಜೈಲು ಸಿಬ್ಬಂದಿ ಭದ್ರತೆಯಲ್ಲಿ ಸೆಲ್‌ನಿಂದ ದರ್ಶನ್ ಅವರು ಹೊರಗೆ ಬಂದರು. ಎಂದಿನಂತೆ ಬ್ಯಾಗ್ ಹಿಡಿದು ಸೆಲ್‌ನಿಂದ ಬಂದ ದರ್ಶನ್ ಅವರು ಜೈಲಿನ ಹೊರಗೆ ನಿಂತಿದ್ದ ಅಭಿಮಾನಿಗಳನ್ನು ನೋಡಿದರು. ಅಭಿಮಾನಿಗಳ ಘೋಷಣೆಯನ್ನು ಗಮನಿಸಿದ ದರ್ಶನ್ ಅವರು ಕೈ ಸನ್ನೆಯಲ್ಲಿ ವಿಶೇಷ ಸಂದೇಶವನ್ನು ಕೊಟ್ಟಿದ್ದಾರೆ.
ಅಭಿಮಾನಿಗಳ ಘೋಷಣೆ ಕೇಳಿ ಖುಷ್ ಆದ ದರ್ಶನ್ ಅವರು ಅಭಿಮಾನಿಗಳ ಘೋಷಣೆಗೆ ಕೈಸನ್ನೆ ಮಾಡಿ ಡೋಂಟ್ ವರಿ ನಾನು ಚೆನ್ನಾಗಿದ್ದೇನೆ ಅನ್ನೋ ಸಂದೇಶ ನೀಡಿದ್ದಾರೆ.ಎದೆ ಮುಟ್ಟಿ ಅಭಿಮಾನಿಗಳತ್ತ ಕೈ ತೋರಿದ ದರ್ಶನ್ ಅವರು ನನ್ನ ಹೃದಯಲ್ಲಿ ನೀವು ಇದ್ದೀರಾ ಅಂತಾ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಬಳಿಕ ಸಂದರ್ಶಕರ ಕೊಠಡಿಗೆ ತೆರಳಿದ ದರ್ಶನ್ ಅವರು ಜೈಲಿಗೆ ಆಗಮಿಸಿದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಶೈಲಜಾ ನಾಗ್ ಇತರರನ್ನು ಭೇಟಿ ಮಾಡಿದರು.
Leave a Comment