ಟೈಟಾನಿಕ್ ರೀತಿ ದುರಂತ ನಡೆದಿದ್ದು ಗೋವಾದಲ್ಲಿ ಅಲ್ಲ; ಮತ್ತೆಲ್ಲಿ? ವಿಡಿಯೋ ನೋಡಿ

ನ್ಯೂಸ್ ಆ್ಯರೋ: ನೋಡ ನೋಡುತ್ತಿದ್ದಂತೆ ನೂರಾರು ಪ್ರಯಾಣಿಕರಿದ್ದ ಹಡಗು ಟೈಟಾನಿಕ್ ರೀತಿಯಲ್ಲಿ ಮುಳುಗಿ ಹೋಗಿರುವ ಭಯಾನಕ ಘಟನೆ ನಡೆದಿದೆ. ಹಡಗು ಮುಳುಗುತ್ತಿರುವ ವಿಡಿಯೋ ಮತ್ತೊಂದು ಬೋಟ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಡಗು ಮುಳುಗುತ್ತಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಡಗಿನಲ್ಲಿ ಸುಮಾರು 278 ಪ್ರಯಾಣಿಕರಿದ್ದು, 78 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 278ರಲ್ಲಿ ಇದುವರೆಗೂ 40 ಮಂದಿಯನ್ನು ರಕ್ಷಿಸಲಾಗಿದೆ. 23 ಮಂದಿ ಶವವಾಗಿ ಪತ್ತೆಯಾಗಿದ್ದು, 64 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಉಳಿದವರ ರಕ್ಷಣೆಗೆ ಹರಸಾಹಸ ಪಡಲಾಗಿದೆ.
278 ಪ್ರಯಾಣಿಕರು ಮುಳುಗುತ್ತಿರುವ ಈ ಘಟನೆ ನಡೆದಿರೋದು ಗೋವಾದಲ್ಲಿ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಟ್ಯಾಗ್ ಮಾಡಿ ಗೋವಾ ಎಂದು ದಾರಿ ತಪ್ಪಿಸಲಾಗಿದೆ. ಹಡಗಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಿವು ಸರೋವರದ ಗೋಮಾದಲ್ಲಿ ಹಡಗು ಮುಳುಗಡೆಯಾಗಿದೆ.
ಹಡಗು ಮುಳುಗಡೆಯಾಗಿರೋದು ಗೋವಾದಲ್ಲಿ ಅಲ್ಲ. ಈ ದುರಂತ ನಡೆದಿರೋದು ಕಾಂಗೊದಲ್ಲಿ. ಈ ವಿಡಿಯೋ ವೈರಲ್ ಆದ ಬಳಿಕ ಗೋವಾ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ದುರಂತದ ವಿಡಿಯೋ ಗೋವಾದ ಕಡಲ ತೀರದಲ್ಲಿ ಅಂತ ತಪ್ಪು ಮಾಹಿತಿ ನೀಡಲಾಗಿದೆ. ಈ ಅನಧಿಕೃತ ಸುದ್ದಿಯನ್ನು ಯಾರು ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ.
Leave a Comment