Rare Case : ಆಟವಾಡುತ್ತಿದ್ದ ಮಗುವಿಗೆ ಹಾವು ಬಲಿ – ಹಾವನ್ನೇ ಕಚ್ಚಿ ಸಾಯಿಸಿದ ಮಗುವಿನ ಸುದ್ದಿ ವೈರಲ್..!

N627322699172421172781017aad0f909a85960e6db29e041dd6ac1aeec65384422fab7221a6ce77a5fff0b
Spread the love

ನ್ಯೂಸ್ ಆ್ಯರೋ : ಇದೊಂದು ವಿಚಿತ್ರ ಘಟನೆ. ಒಂದು ವರ್ಷದ ಮಗು ಆಟವಾಡುತ್ತಿದ್ದಾಗ, ತನ್ನ ಬಾಯಲ್ಲಿ ಹಾವಿನ ಮರಿಯನ್ನು ಜಗಿದು ಕೊಂದಿದೆ. ಹಾವಿನ ಮರಿ ಮಗುವನ್ನು ಜಗಿಯುತ್ತಿರುವುದನ್ನು ಕಂಡ ಮಗುವಿನ ತಾಯಿ ಕೂಡಲೇ ಮಗುವಿನ ಬಾಯಲ್ಲಿದ್ದ ಹಾವನ್ನು ಹೊರತೆಗೆದು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ವೈದ್ಯರ ಬಳಿ ಮಗುವನ್ನು ಕರೆದೊಯ್ದು ತಪಾಸಣೆ ನಡೆಸಿದಾಗ ಭಯಪಡುವ ಅಗತ್ಯವಿಲ್ಲ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಅದನ್ನು ನಂಬಲು ಕುಟುಂಬದವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಮಗುವನ್ನು ಪುನಃ ಪರೀಕ್ಷಿಸುವಂತೆ ವೈದ್ಯರಿಗೆ ಪದೇ ಪದೇ ಕೇಳಿಕೊಂಡರು. ಗಾಯವನ್ನು ನೋಡಿದ ವೈದ್ಯರು, ಈ ಗಾಯವು ವಿಷಕಾರಿಯಲ್ಲ ಎಂದು ಹೇಳಿದ್ದಾರೆ‌.

ಬಿಹಾರದ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಶನಿವಾರ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿತ್ತು‌ ಈ ವೇಳೆ ಹಾವು ಮರಿ ಮನೆಯ ಟೆರೇಸ್ ಮೇಲೆ ಹರಿದಾಡುತ್ತಾ, ಮಗು ಇದ್ದ ಕಡೆ ಬಂದಿದೆ.

ಈ ವೇಳೆ ಮಗು ಮರಿ ಹಾವನ್ನು ಹಿಡಿದು ಅದರೊಂದಿಗೆ ಆಟವಾಡಲು ಆರಂಭಿಸಿದ್ದು, ಆಟವಾಡುತ್ತಲೇ ಹಾವಿನ ಮರಿಯನ್ನು ಬಾಯಲ್ಲಿ ಒತ್ತಿಕೊಂಡು ಜಗಿಯಲು ಆರಂಭಿಸಿದ್ದು ಮಕ್ಕಳಿಗೆ ಗೊತ್ತೇ ಆಗಲಿಲ್ಲ. ಇನ್ನು ಹಾವಿನ ಮರಿ ಮಗು ಜಗಿದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ.

ಇನ್ನು ಹಾವನ್ನು ಕಚ್ಚಿದ ಬಾಲಕ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಅವರ 1 ವರ್ಷದ ಮಗು ರಿಯಾನ್ಸ್ ಕುಮಾರ್ ಎಂದು ಗುರುತಿಸಲಾಗಿದ್ದು, ಈಗ ಅದು ಸಂಪೂರ್ಣವಾಗಿ ಆರೋಗ್ಯವಾಗಿದೆ.

ಒಂದು ವರ್ಷದ ಮಗುವಿಗೆ ಮಾತ್ರ ಇದು ಹಾವು ಎಂದು ತಿಳಿದಿರಲಿಲ್ಲ, ಬೇರೆ ಯಾರಾದರೂ ಈ ಹಾವನ್ನು ಕಂಡರೆ ಓಡಿಹೋಗುತ್ತಿದ್ದರು ಮತ್ತು ಈ ಹಾವು ಯಾರಿಗಾದರೂ ಕಚ್ಚಿದ್ದರೆ ಅವರ ಆರೋಗ್ಯವು ಹದಗೆಡುತ್ತಿತ್ತು.
ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಮ್ಮನೆ ಒಂದು ಕಡೆ ಕೂರುವುದಿಲ್ಲ. ಅವರಿಗೆ ಆಟವಾಡಲು ಏನಾದರೂ ಬೇಕು. ಕೈಗೆ ಸಿಕ್ಕಿದನೆಲ್ಲ‌ ಆಟಿಕೆಯಂದು ಭಾವಿಸಿ ಅದರ ಜೊತೆ ಆಟವಾಡುತ್ತಾರೆ. ಅದೇ ರೀತಿ ಮಗು ಹಾವಿನ ಜೊತೆ ಆಟವಾಡುವಾಗ ಈ ವಿಚಿತ್ರ ಘಟನೆ ನಡೆದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!