ಛತ್ತೀಸ್ ಗಢದಲ್ಲಿ ನಕ್ಸಲರ ಎನ್ಕೌಂಟರ್: 9 ಉಗ್ರರ ಗುಂಡಿಕ್ಕಿ ಹತ್ಯೆ

Spread the love

ನ್ಯೂಸ್ ಆ್ಯರೋ : ಛತ್ತೀಸ್ ಗಢದ ದಾಂತೇವಾಡ-ಬಿಜಾಪುರ ಗಡಿ ಪ್ರದೇಶದ ಕಾಡಿನಲ್ಲಿ  ಇಂದು ಬೆಳಗ್ಗೆ ಜಿಲ್ಲಾ ರಿಸರ್ವ್ ಗಾರ್ಡ್  ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯು ಅಕ್ರಮವಾಗಿ ನುಸುಳಿದ ಉಗ್ರರನ್ನು ಎನ್ಕೌಂಟರ್ ಮಾಡಿದ್ದಾರೆ.

ಬೆಳಗ್ಗೆ ಸುಮಾರು 10:30 ಕ್ಕೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಪೊಲೀಸರು 9 ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ಚಕಮಕಿ ಮುಗಿದ ಬಳಿಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಶೋಧಕಾರ್ಯದಲ್ಲಿ ಒಂಬತ್ತು ನಕ್ಸಲರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಸಮವಸ್ತ್ರ ಧರಿಸಿದ್ದರು ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಸೆಲ್ಫ್-ಲೋಡಿಂಗ್ ರೈಫಲ್, 303 ರೈಫಲ್ ಮತ್ತು 315 ಬೋರ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ಪತ್ತೆಯಾಗಿದ್ದು,  ಪೊಲೀಸ್ ಇದನ್ನು ವಶಪಡಿಸಿಕೊಂಡಿದ್ದಾರೆ.

ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಯೋಧರು ಸುರಕ್ಷಿತವಾಗಿದ್ದಾರೆ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಹಾಗೆಯೇ ಈ ವರ್ಷ ಛತ್ತೀಸ್‌ಗಢದಲ್ಲಿ ವಿವಿಧ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು 154 ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!