ಆಕಸ್ಮಿಕವಾಗಿ ಚೂಯಿಂಗ್ ಗಮ್ ನುಂಗಿದ್ರೆ ಏನಾಗುತ್ತೆ? – ದೇಹದ ಮೇಲೆ ಇದರ ಪರಿಣಾಮ ಏನು?
ನ್ಯೂಸ್ ಆ್ಯರೋ : ಕೆಲವರಿಗೆ ಚೂಯಿಂಗ್ ಗಮ್ ಜಗಿಯುವ ಹವ್ಯಾಸ ಇರುತ್ತದೆ. ಅದರಲ್ಲೂ ಕ್ರಿಕೆಟ್ ಆಟಗಾರರಂತೂ ಚೂಯಿಂಗ್ ಗಮ್ ಬಾಯಲ್ಲಿ ಹಾಕಿಕೊಂಡು ಚಪಾಯಿಸುತ್ತಾ ಇರುತ್ತಾರೆ. ಅದನ್ನು ನೋಡಿ ಮಕ್ಕಳೂ ಕೂಡ ಅಂಟು ಅಂಟಾಗಿರುವ ಚೂಯಿಂಗ್ ಗಮ್ ತಿನ್ನೋದನ್ನ ಹವ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಆಕಸ್ಮಿಕವಾಗಿ ಚೂಯಿಂಗ್ ಗಮ್ ನುಂಗಿದರೆ ಏನಾಗುತ್ತೆ ಗೊತ್ತಾ?
ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಅದು ಹೊಟ್ಟೆಯ ಮೂಲಕ ಹಾದುಹೋದ ನಂತರ ಕರುಳನ್ನು ನಿರ್ಬಂಧಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಚೂಯಿಂಗ್ ಗಮ್ ಸುಮಾರು 7 ವರ್ಷಗಳ ಕಾಲ ಹೊಟ್ಟೆಯಲ್ಲಿ ಇರುತ್ತದೆ ಎಂಬ ಮಾತಿದೆ. ಆದಾಗ್ಯೂ, ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ.. ಇದು ಕರಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಆದರೂ, ಅದನ್ನು ನುಂಗಿದರೆ, ಅದು ಕೆಲವು ಗಂಟೆಗಳಲ್ಲಿ ಅಥವಾ ಕೆಲವು ದಿನಗಳ ನಂತರವೂ ಮಲದಲ್ಲಿ ಸ್ವತಃ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ಚೂಯಿಂಗ್ ಗಮ್ ಅನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಚೂಯಿಂಗ್ ಗಮ್ ಅನ್ನು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Leave a Comment