
ಮತ್ತೊಮ್ಮೆ ಕ್ಯಾಪ್ಟನ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್ – ಇನ್ಮುಂದೆ ಕ್ಯಾಪ್ಟನ್ ಗಳ ಸ್ಯಾಲರಿ ಎಷ್ಟು ಗೊತ್ತಾ?
- ವಾಣಿಜ್ಯ ಸುದ್ದಿ
- May 27, 2023
- No Comment
- 84
ನ್ಯೂಸ್ ಆ್ಯರೋ : ಸ್ಪೈಸ್‌ಜೆಟ್ ಕ್ಯಾಪ್ಟನ್‌ಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ 7.5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಕಂಪೆನಿ ಘೋಷಿಸಿದೆ.
ತನ್ನ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುಗ್ರಾಮ ಮೂಲದ ವಿಮಾನಯಾನ ಸಂಸ್ಥೆಯು ಈ ಹೆಚ್ಚಳವು 2023ರ ಮೇ 16ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ತರಬೇತುದಾರರ (ಡಿಇ, ಟಿಆರ್‌ಐ) ಮತ್ತು ಮೊದಲ ಹಂತದ ಅಧಿಕಾರಿಗಳ ವೇತನವನ್ನು ಸಹ ಹೆಚ್ಚಿಸುವ ಘೋಷಣೆ ಮಾಡಿದೆ.
ಈ ಹಿಂದೆ ನವೆಂಬರ್‌ನಲ್ಲಿ ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ವೇತನವನ್ನು ಪರಿಷ್ಕರಿಸಿತ್ತು. ಇದರಲ್ಲಿ ಕ್ಯಾಪ್ಟನ್‌ಗಳ ವೇತನವನ್ನು 80 ಗಂಟೆಗಳ ಹಾರಾಟಕ್ಕಾಗಿ ತಿಂಗಳಿಗೆ 7 ಲಕ್ಷ ರೂ. ನಿಗದಿ ಪಡಿಸಿತ್ತು. ಇಸಿಎಲ್‌ಜಿಎಸ್ ಯೋಜನೆಯಿಂದ ಮತ್ತು ಅದರ ಆಂತರಿಕ ನಗದು ಸಂಚಯದಿಂದ ಪಡೆದ 50 ಮಿಲಿಯನ್ ಡಾಲರ್ ನಿಧಿಯಿಂದ ಸ್ಪೈಸ್‌ಜೆಟ್ ತನ್ನ ಗ್ರೌಂಡ್ ವಿಮಾನಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದರು.
ಸ್ಪೈಸ್‌ಜೆಟ್ ಭಾರತದೊಳಗಿನ ಮತ್ತು ಅಂತಾರಾಷ್ಟ್ರೀಯ 48 ಸ್ಥಳಗಳಿಗೆ ಸುಮಾರು 250 ದೈನಂದಿನ ವಿಮಾನಗಳ ಸೇವೆ ನೀಡುತ್ತದೆ. ಇದರ ಫ್ಲೀಟ್ ಬೋಯಿಂಗ್ 737 ಮ್ಯಾಕ್ಸ್, ಬೋಯಿಂಗ್ 700 ಮತ್ತು ಕ್ಯೂ400 ಸೇರಿದಂತೆ ಹಲವು ವಿಮಾನಗಳನ್ನು ಕಾರ್ಯ ನಿರ್ವಹಿಸುತ್ತಿವೆ.