ಕುಸಿಯುತ್ತಿರುವ ಅದಾನಿ ಗ್ರೂಪ್‌ನಲ್ಲಿ SBI, LIC ಭಾರೀ ಹೂಡಿಕೆ – ಕೊನೆಗೂ ತುಟಿ ಬಿಚ್ಚಿದ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಕುಸಿಯುತ್ತಿರುವ ಅದಾನಿ ಗ್ರೂಪ್‌ನಲ್ಲಿ SBI, LIC ಭಾರೀ ಹೂಡಿಕೆ – ಕೊನೆಗೂ ತುಟಿ ಬಿಚ್ಚಿದ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಅಮೇರಿಕಾದ ಹಿಂಡನ್ ಬರ್ಗ್ ವರದಿಯಿಂದ ಜಗತ್ತಿನ ಮೂರನೇ ಶ್ರೀಮಂತ ಎನಿಸಿಕೊಂಡಿದ್ದ ಅದಾನಿ ಗ್ರೂಪ್ ಅಕ್ಷರಶಃ ಮುಳುಗುತ್ತಿದೆ. ಜಗತ್ತಿನೆಲ್ಲೆಡೆ ಇರುವ ಅದಾನಿ ಸಮೂಹದ ಕಂಪನಿಗಳು ಕಳೆದ ಆರು ದಿನಗಳಲ್ಲಿ ಶೇ.46% ನಷ್ಟ ಅನುಭವಿಸಿದೆ‌. ಇದರೊಂದಿಗೆ ಅದಾನಿ ಶ್ರೀಮಂತರ ಪಟ್ಟಿಯಲ್ಲಿ 21ನೇ ಸ್ಥಾನಕ್ಕೆ ಕುಸಿದಿದ್ದಾರೆ‌.

ಇನ್ನು ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಲ್.ಐ.ಸಿ ಕುಸಿತ ಕಂಡಿದ್ದು, ಹೂಡಿಕೆದಾರರು ಆತಂಕದಲ್ಲಿದ್ದಾರೆ. ಈ ಬಗ್ಗೆ ಸಂಸತ್ತಿಲ್ಲೂ ಚರ್ಚೆಯಾಗಿತ್ತು. ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಚಾರವಾಗಿ ಮಾತನಾಡಿದ್ದಾರೆ.

ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಈ ವಿಚಾರದ ಬಗ್ಗೆ ಮಾತನಾಡಿದ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ. ಅದಾನಿ ಸಮೂಹದಲ್ಲಿ ಎಸ್‌ಬಿಐ ಮತ್ತು ಎಲ್‌ಐಸಿ ಹೂಡಿಕೆಯು ಮಿತಿಯಲ್ಲಿದೆ, ಬ್ಯಾಂಕ್ ಮತ್ತು ಎಲ್‌ಐಸಿ ಎರಡೂ ಲಾಭದಾಯಕವಾಗಿದ್ದು, ಹೂಡಿಕೆದಾರರು ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಮುಂದುವರೆದು ‘ನನ್ನ ತಿಳುವಳಿಕೆ ಪ್ರಕಾರ ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆಯು ನಿಗದಿತ ಮಿತಿಯಲ್ಲಿದೆ. ಎಸ್‌ಬಿಐ ಮತ್ತು ಎಲ್‌ಐಸಿ ಎರಡೂ ತಮ್ಮ ವಿವರವಾದ ಮಾಹಿತಿಯನ್ನು ಆಯಾ ಸಿಎಂಡಿಗಳೊಂದಿಗೆ ಹಂಚಿಕೊಂಡಿರುವುದನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ ಎಂದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಎನ್ ಪಿಎಗಳ ಹೊರೆ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದು ಸದೃಢ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.

ಎಸ್‌ಬಿಐ ಮತ್ತು ಎಲ್‌ಐಸಿಯಿಂದ ಮಾಹಿತಿ ನೀಡಿದ್ದಾರೆ. ಇಬ್ಬರೂ ಓವರ್ ಎಕ್ಸ್ ಪೋಸ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಾನಿ ಗ್ರೂಪ್‌ನ ಷೇರುಗಳಿಗೆ ಅವರ ಮಾನ್ಯತೆ ಮಿತಿಯೊಳಗೆ ಇದೆ ಎಂದು ಇಬ್ಬರ ಪರವಾಗಿ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಅವರ ಮೌಲ್ಯಮಾಪನದಲ್ಲಿ ಕುಸಿತದ ನಂತರವೂ ಅವು ಇನ್ನೂ ಲಾಭದಾಯಕವಾಗಿವೆ.

ಪ್ರಸ್ತುತ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಎನ್‌ಪಿಎಗಳ ಹೊರೆಯನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಬ್ಯಾಂಕ್ ಬಲವಾದ ಡ್ಯುಯಲ್ ಬ್ಯಾಲೆನ್ಸ್ ಶೀಟ್ ಹೊಂದಿದೆ. ಎನ್‌ಪಿಎ ಮತ್ತು ಚೇತರಿಕೆಯ ಸ್ಥಿತಿ ಉತ್ತಮವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *