ಹಿಂಡೆನ್ ಬರ್ಗ್ ವರದಿ ಭಾರತದ ಮೇಲಿನ ದಾಳಿಯ ಸೂಚನೆ – ಅದಾನಿ ಗ್ರೂಪ್ ಸಿದ್ಧಪಡಿಸಿದೆ 413 ಪುಟಗಳ ಉತ್ತರ : ಅದಾನಿ ಗ್ರೂಪ್ ಹೇಳಿದ್ದೇನು?

ಹಿಂಡೆನ್ ಬರ್ಗ್ ವರದಿ ಭಾರತದ ಮೇಲಿನ ದಾಳಿಯ ಸೂಚನೆ – ಅದಾನಿ ಗ್ರೂಪ್ ಸಿದ್ಧಪಡಿಸಿದೆ 413 ಪುಟಗಳ ಉತ್ತರ : ಅದಾನಿ ಗ್ರೂಪ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಇತ್ತೀಚೆಗೆ ಹಿಂಡೆನ್ ಬರ್ಗ್ ವರದಿಯಿಂದಾಗಿ ಪ್ರಪಂಚದ ಮೂರನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರ ಸಾಮ್ರಾಜ್ಯ ನಲುಗಿ ಹೋಗಿತ್ತು. ಬರೋಬ್ಬರಿ 4 ಲಕ್ಷ ಕೋಟಿ ನಷ್ಟವಾಗಿತ್ತು. ಇದೀಗ ಅದಾನಿ ಗ್ರೂಪ್ ಹಿಂಡೆನ್ ಬರ್ಗ್ ವರದಿಗೆ 414 ಪುಟಗಳ ಮರುತ್ತರ ತಯಾರಿಸಿದೆ.

ಹಿಂಡೆನ್ ಬರ್ಗ್ ಇತ್ತೀಚೆಗೆ ನಮ್ಮ 88 ಪ್ರಶ್ನೆಗಳಲ್ಲಿ ಕೇವಲ 62 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲು ಸಫಲವಾಗಿದೆ ಎಂದಿತ್ತು. ಇದಕ್ಕೆ ಮರುತ್ತರ ಒದಗಿಸಿರುವ ಅದಾನಿ‌ ಗ್ರೂಪ್ ‘ಹಿಂಡೆನ್ ಬರ್ಗ್ ವರದಿ ಸಂಪೂರ್ಣ ಸುಳ್ಳು, ಇದು‌ ಕೇವಲ ನಮ್ಮ ಮೇಲಷ್ಟೇ ಅಲ್ಲ ಇಡೀ ದೇಶದ ಮೇಲೆ ಮಾಡಿರುವ ನಿಯೋಜಿತ‌ ದಾಳಿ ಎಂದಿದೆ. ಅಮೇರಿಕಾದ ಕಂಪೆನಿಗಳಿಗೆ‌ ಮಾರುಕಟ್ಟೆ ಸೃಷ್ಟಿಸಿ ಭಾರತೀಯರನ್ನು ಆರ್ಥಿಕವಾಗಿ ಕುಗ್ಗಿಸುವಂತಹ ವಂಚನೆಯ ನಡೆಯಿದು’ ಎಂದು ಅದಾನಿ‌ ಗ್ರೂಪ್ ಕಿಡಿಕಾರಿದೆ.

ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಷೇರುಪೇಟೆಯಲ್ಲಿ ಗೊಂದಲ ಹುಟ್ಟಿಸುವುದು, ಹೂಡಿಕೆದಾರರಿಗೆ ನಷ್ಟ ಉಂಟು ಮಾಡುವುದು ಈ ವರದಿಯ ಉದ್ದೇಶವಾಗಿದೆ. ಇದರಿಂದ ಸಣ್ಣ ಮಾರಾಟಗಾರ ಕಂಪನಿಯಾಗಿರುವ ಹಿಂಡೆನ್‌ಬರ್ಗ್‌ ದೊಡ್ಡ ಆರ್ಥಿಕ ಲಾಭ ಪಡೆಯುವ ಉದ್ದೇಶ, ಅದಾನಿ ಗ್ರೂಪ್‌ ದೇಶದ ಕಾನೂನಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳೆಲ್ಲವೂ ಸುಳ್ಳುʼʼ ಎಂದು ಅದಾನಿ ಗ್ರೂಪ್‌ ತಿಳಿಸಿದೆ.

Adani-Response-to-Hindenburg-January-29-2023.pdf

ಭಾರತೀಯ ಕಾನೂನುಗಳು ಮತ್ತು ಲೆಕ್ಕಪರಿಶೋಧಕ ಮಾನದಂಡಗಳ ಅಡಿಯಲ್ಲಿ ‘ಸಂಬಂಧಿತ ಪಕ್ಷಗಳು’ ಎಂದು ಅರ್ಹತೆ ಹೊಂದಿರುವ ಘಟಕ ಹಾಗೂ ಸಂಸ್ಥೆಗಳೊಂದಿಗೆ ನಾವು ಎಲ್ಲಾ ವಹಿವಾಟುಗಳನ್ನು ನಾವು ಸರಿಯಾಗಿ ಬಹಿರಂಗಪಡಿಸಿದ್ದೇವೆ ಎಂದು ಅದಾನಿ ಗ್ರೂಪ್‌ 413 ಪುಟಗಳ ವರದಿಯಲ್ಲಿ ತಿಳಿಸಿದೆ.

ನಮ್ಮ 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ಉತ್ತರ ನೀಡಲು ಅದಾನಿ ಗ್ರೂಪ್‌ ವಿಫಲವಾಗಿದೆ ಎಂದು ಭಾನುವಾರ ಹಿಂಡೆನ್‌ಬರ್ಗ್‌ ತಿಳಿಸಿತ್ತು. ಇದಕ್ಕೆ ಉತ್ತರ ರೂಪವಾಗಿ 413 ಪುಟಗಳ ದಾಖಲೆಯನ್ನು ಅದಾನಿ ಗ್ರೂಪ್‌ ಬಿಡುಗಡೆ ಮಾಡಿತ್ತು.

“ಹಿಂಡೆನ್‌ಬರ್ಗ್‌ ವರದಿ ಸುಳ್ಳು, ಇದು ಭಾರತದ ವಿರುದ್ಧ ಮಾಡಿದ ಷಡ್ಯಂತ್ಯ. ಇದು ಯೋಜಿತ ದಾಳಿ, ಪಿತೂರಿಯುಕ್ತ ನಡವಳಿಕೆʼʼ ಎಂದು ಅದಾನಿ ಗ್ರೂಪ್‌ ತಿಳಿಸಿದೆ. ಅಮೆರಿಕ ಕಂಪನಿಗಳ ಆರ್ಥಿಕ ಲಾಭಕ್ಕಾಗಿ ಹೊಸ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ಈ ವರದಿ ಪ್ರಕಟಿಸಲಾಗಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

ಇದೀಗ ಬಂದ ಅಪ್‌ಡೇಟ್‌:

ಅದಾನಿ ಗ್ರೂಪ್‌ನ ಪ್ರತಿಕ್ರಿಯೆಗೆ ಹಿಂಡೆನ್‌ಬರ್ಗ್‌ ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಆ ವರದಿ ಇಲ್ಲಿದೆ.

ಹಿಂಡೆನ್‌ಬರ್ಗ್‌ ವರದಿಯು ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ. ಇದು ಭಾರತದ ಮೇಲಿನ ಯೋಜಿತ ದಾಳಿ. ಭಾರತೀಯ ಸಂಸ್ಥೆಗಳ ಸ್ವಾತಂತ್ರ್ಯ, ಸಮಗ್ರತೆ ಮತ್ತು ಗುಣಮಟ್ಟದ ಮೇಲಿನ ದಾಳಿ ಇದಾಗಿದೆ. ಭಾರತದ ಬೆಳವಣಿಗೆಯ ಮೇಲಿನ, ಮಹಾತ್ವಕಾಂಕ್ಷೆಯ ಮೇಲಿನ ದಾಳಿಯಾಗಿದೆ. ಇದು ತಪ್ಪು ಮಾಹಿತಿ ಹೊಂದಿರುವ ವರದಿ. ಅರೆಬೆಂದ ವಿಷಯಗಳಿಂದ ಕೂಡಿರುವ ವರದಿ. ಎಲ್ಲವೂ ಆಧಾರ ರಹಿತ ಆರೋಪಗಳು. ಅದಾನಿ ಗ್ರೂಪ್‌ ಮಾನಹಾನಿ ಮಾಡುವ ಉದ್ದೇಶದಿಂದ ಮಾಡಿರುವ ವರದಿ ಇದಾಗಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

ಈ ರೀತಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಷೇರುಪೇಟೆಯಲ್ಲಿ ಗೊಂದಲ ಹುಟ್ಟಿಸುವುದು, ಹೂಡಿಕೆದಾರರಿಗೆ ನಷ್ಟ ಉಂಟು ಮಾಡುವುದು ಈ ವರದಿಯ ಉದ್ದೇಶವಾಗಿದೆ. ಇದರಿಂದ ಸಣ್ಣ ಮಾರಾಟಗಾರ ಕಂಪನಿಯಾಗಿರುವ ಹಿಂಡೆನ್‌ಬರ್ಗ್‌ ದೊಡ್ಡ ಆರ್ಥಿಕ ಲಾಭ ಪಡೆಯುವ ಉದ್ದೇಶ ಹೊಂದಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

ಹಿಂಡೆನ್‌ಬರ್ಗ್‌ ವರದಿಯಿಂದಾಗಿ ಕಳೆದ ವಾರ ಅದಾನಿ ಗ್ರೂಪ್‌ಗೆ 40.4 ಶತಕೋಟಿ ಡಾಲರ್‌ಗಿಂತಲೂ ಅಧಿಕ ನಷ್ಟವಾಗಿತ್ತು. ಕಂಪನಿಯ ಷೇರು ಮೌಲ್ಯ ಕುಸಿದಿತ್ತು.

“ಅದಾನಿ ಗ್ರೂಪ್‌ ದೇಶದ ಕಾನೂನಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳೆಲ್ಲವೂ ಸುಳ್ಳುʼʼ ಎಂದು ಅದಾನಿ ಗ್ರೂಪ್‌ ತಿಳಿಸಿದೆ.

ಭಾರತೀಯ ಕಾನೂನುಗಳು ಮತ್ತು ಲೆಕ್ಕಪರಿಶೋಧಕ ಮಾನದಂಡಗಳ ಅಡಿಯಲ್ಲಿ ‘ಸಂಬಂಧಿತ ಪಕ್ಷಗಳು’ ಎಂದು ಅರ್ಹತೆ ಹೊಂದಿರುವ ಘಟಕ/ಸಂಸ್ಥೆಗಳೊಂದಿಗೆ ನಾವು ಎಲ್ಲಾ ವಹಿವಾಟುಗಳನ್ನು ನಾವು ಸರಿಯಾಗಿ ಬಹಿರಂಗಪಡಿಸಿದ್ದೇವೆ ಎಂದು ಅದಾನಿ ಗ್ರೂಪ್‌ 413 ಪುಟಗಳ ವರದಿಯಲ್ಲಿ ತಿಳಿಸಿದೆ.

ಸರಿಯಾದ ಸಾಕ್ಷಿಗಳು ಇಲ್ಲದೆ ಅದಾನಿ ಗ್ರೂಪ್‌ ಮೇಲೆ ಆರೋಪ ಮಾಡುವ ಮೂಲಕ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ಲಾಭ ಮಾಡುವ ಉದ್ದೇಶ ಹೊಂದಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

“ಇದು ಹಿತಾಸಕ್ತಿ ಸಂಘರ್ಷ ಮಾಡುವ ಉದ್ದೇಶ ಹೊಂದಿದೆ. ಅಸಂಖ್ಯಾತ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಆರ್ಥಿಕ ಲಾಭವನ್ನು ಪಡೆಯಲು, ಸುಳ್ಳು ಮಾರುಕಟ್ಟೆಯನ್ನು ಸೃಷ್ಟಿಸಲು ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಲಾಗಿದೆʼʼ ಎಂದು ಅದಾನಿ ಗ್ರೂಪ್‌ ತಿಳಿಸಿದೆ.

ಹಿಂಡೆನ್ ಬರ್ಗ್ ರಿಸರ್ಚ್ ಸೃಷ್ಟಿಸಿದ ಕೋಲಾಹಲದಿಂದಾಗಿ ದೇಶೀಯ ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಶೇರುಗಳು ಶೇ.5-20ರಷ್ಟು ನಷ್ಟ ಅನುಭವಿಸಬೇಕಾದಂತಾಯಿತು.

ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಹೂಡಿಕೆ ಸಂಸ್ಥೆಯು ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು.

ಈ ಬೆನ್ನಲ್ಲೇ ಬುಧವಾರ ಕುಸಿದ ಅದಾನಿ ಷೇರುಗಳು ಶುಕ್ರವಾರ ಪಾತಾಳಕ್ಕೆ ತಲುಪಿದವು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರ ಜೊತೆಗೆ ಏಷ್ಯಾದಲ್ಲೇ ನಂಬರ್ ಒನ್ ಶ್ರೀಮಂತ ಎಂಬ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನವನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಪಾಲಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *