ಸಂಸದರ ಖುರ್ಚಿ ಕೆಳಗೆ ಕಂತೆ ಕಂತೆ ನೋಟು ಪತ್ತೆ; ಸಭಾಪತಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನ್ಯೂಸ್ ಆ್ಯರೋ: ಸಂಸತ್ ಚಳಿಗಾಲದ ಅಧಿವೇಶನ ದೆಹಲಿಯಲ್ಲಿ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯಸಭಾ ಸದಸ್ಯರ ಖುರ್ಚಿಯ ಕೆಳಗೆ ಕಂತೆ ಕಂತೆ ನೋಟು ಪತ್ತೆಯಾಗಿದೆ. ಸಂಸದರ ಸೀಟಿನ ಸಂಖ್ಯೆ 222ರ ಕೆಳಗೆ 500 ರುಪಾಯಿಯ ಬಂಡಲ್ ಪತ್ತೆಯಾಗಿದೆ. ಒಟ್ಟು 50ಸಾವಿರ ರುಪಾಯಿ ಹಣ ಪತ್ತೆಯಾಗಿದೆ.
ಆ ಸೀಟಿನಲ್ಲಿ ಕೂರುತ್ತಿದ್ದದ್ದು ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರ ಸೀಟಿನಲ್ಲಿ ಹಣವಿತ್ತು ಎಂದು ಹೇಳಲಾಗಿದೆ. ಸಭಾಪತಿ ಜಗದೀಪ್ ಧಂಖರ್ ಅವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ತನಿಖೆಗೆ ಮುನ್ನ ಹೆಸರು ಹೇಳಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.
ಅಭಿಷೇಕ್ ಮನು ಸಿಂಘ್ವಿ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಜ್ಯಸಭೆಗೆ ಹೋದಾಗಲೆಲ್ಲ 500 ರೂಪಾಯಿ ನೋಟು ಹಿಡಿದು ಬರುತ್ತೇನೆ ಎಂದ ಅವರು, ಈ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯ ಸದನವನ್ನು ಮುಂದೂಡಿಕೆ ಮಾಡಿದ ಬಳಿಕ ನಿತ್ಯ ತಪಾಸಣೆ ಮಾಡುವ ಸಮಯದಲ್ಲಿ ಅಧಿಕಾರಿಗಳಿಗೆ ನೋಟಿನ ಕಂತೆ ಸಿಕ್ಕಿತ್ತು. ಇದು ಅತ್ಯಂತ ಗಂಭೀರ ಆರೋಪ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಹೇಳಿದ್ದಾರೆ.
Leave a Comment