ಯುವ ದಸರಾ ವೇದಿಕೆ ʼಬಾದ್ ಶಾʼ ನ ಕನ್ನಡ ಪ್ರೇಮ: ಅಪ್ಪು ಹಾಡು ಕೇಳಿ ಎಮೋಷನಲ್ ಆದ ಬಾಲಿವುಡ್ ಸ್ಟಾರ್
ನ್ಯೂಸ್ ಆ್ಯರೋ: ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್ಶಾ ಆಗಮಿಸಿದ್ದರು.
ಕನ್ನಡದಲ್ಲಿ ಮಾತನಾಡಿದ್ದೂ ಅಲ್ಲದೆ, ಕನ್ನಡದ ಒಂದು ಹಾಡು ಕೇಳಿ ಅವರು ಸಖತ್ ಎಮೋಷನಲ್ ಆದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ. ಅವರು ರ‍್ಯಾಪರ್, ಸಿಂಗರ್, ಗೀತ ಸಾಹಿತಿ, ನಿರ್ಮಾಪಕ ಕೂಡ ಹೌದು.
ಕನ್ನಡದಲ್ಲಿ ಮಾತನಾಡಿದ ಬಾದ್ಶಾ, ‘ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್ಸ್ಟಾರ್ ಕೂಡ ಅಲ್ಲ. ನಾನು ಸಿಂಗರ್ ಅಲ್ಲ, ನಾನು ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದು ಗೊತ್ತಷ್ಟೇ. ನಾನು ಫೀಲೀಂಗ್ಸ್ನ ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಕನ್ನಡದಲ್ಲಿ ಮಾತನಾಡಿದರು ಬಾದ್ಶಾ. ಅವರ ಈ ಮಾತು ಕೇಳಿ ನೆರೆದಿದ್ದವರು ಥ್ರಿಲ್ ಆದರು.
ಆ ಬಳಿಕ ಪುನೀತ್ ರಾಜ್ಕುಮಾರ್ ಅವರ ನಟನೆಯ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡನ್ನು ಹಾಕಲಾಯಿತು. ಈ ವೇಳೆ ಬಾದ್ಶಾ ಅವರು ಎಮೋಷನಲ್ ಆದರು. ಅವರಿಗೆ ಹಾಡಲೂ ಆಗದೆ ಒಂದು ಕಡೆಯಲ್ಲಿ ಕುಳಿತು, ಕೈ ಮುಗಿದು ಬಿಟ್ಟರು. ಪುನೀತ್ ರಾಜ್ಕುಮಾರ್ ಮೇಲೆ ಅವರಿಗೆ ಇರೋ ಗೌರವವನ್ನು ಇದು ತೋರಿಸುತ್ತದೆ.
Leave a Comment