ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ; ಸೂಚನೆ ಕೊಟ್ಟ ಕಿಚ್ಚ ಸುದೀಪ್

Kichha
Spread the love

ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸದ್ಯ 7 ಸ್ಪರ್ಧಿಗಳು ಇದ್ದಾರೆ. ಹನುಮಂತ, ರಜತ್, ತ್ರಿವಿಕ್ರಂ, ಭವ್ಯಾ, ಮೋಕ್ಷಿತಾ, ಭವ್ಯಾ ಹಾಗೂ ಗೌತಮಿ ಮಧ್ಯೆ ಸ್ಪರ್ಧೆ ಜೋರಾಗಿದೆ. ಇನ್ನು ಬಿಗ್ ಬಾಸ್ ಫಿನಾಲೆಗೆ ಉಳಿದಿರೋದು ಕೇವಲ 2 ವಾರ ಮಾತ್ರ. ಈ ಪೈಕಿ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ಸುದೀಪ್ ಅವರು ಪರೋಕ್ಷವಾಗಿ ಉತ್ತರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗಿದೆ. ಅವರು ದಿನ ಕಳೆದಂತೆ ಆಟದ ಶೈಲಿ ಬದಲಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಅವರು ಈಗಾಗಲೇ ಫಿನಾಲೆಗೆ ಕಾಲಿಟ್ಟಿದ್ದಾರೆ. ಟಾಪ್ ಐದರಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಇವರು ಕಪ್ ಗೆಲ್ಲುತ್ತಾರಾ? ಹೀಗೊಂದು ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಸುದೀಪ್ ಅವರು ಮಾತು.

ಯಾರು ಫಿನಾಲೆ ಸೇರುತ್ತಾರೆ, ಯಾರು ಅದಕ್ಕೂ ಮೊದಲೇ ಎಲಿಮಿನೇಟ್ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿತು. ಆಗ ಸುದೀಪ್ ಅವರು, ‘ಯಾರು ಹೋಗ್ತಾರೆ, ಯಾರು ಗೆಲ್ಲುತ್ತಾರೆ ಎಂಬುದು ನನ್ನ ಕಣ್ಣಿಗೆ ಸರಿಯಾಗಿ ಕಾಣುತ್ತಿದೆ. ಆದರೆ, ಅದನ್ನು ಹೇಳೋಕೆ ಆಗಲ್ಲ’ ಎಂದು ಸುದೀಪ್ ಹೇಳಿದರು. ಆ ಬಳಿಕ ಅವರು ಹನುಮಂತ ಆಟದ ಬಗ್ಗೆ ಮೆಚ್ಚುಗೆ ಹೊರಹಾಕಿದರು.

ಯಾವ ಆಟಗಾರರಲ್ಲಿ ಯಾರು ಏನನ್ನು ಬದಲಿಸಿಕೊಳ್ಳಬೇಕು ಎಂದು ಸುದೀಪ್ ಹೇಳಿದ್ದರು. ಈ ವೇಳೆ ಎಲ್ಲರಿಗೂ ಕಿವಿಮಾತು ಕೊಟ್ಟರು. ಆದರೆ, ಹನುಮಂತಗೆ ಮಾತ್ರ ‘ಹೀಗೆಯೇ ಆಟ ಆಡಿ’ ಎಂದರು. ಒಂದೊಮ್ಮೆ ಬೇರೆಯವರು ಆಟದ ವೈಖರಿಸಿ ಬದಲಿಸಿಕೊಳ್ಳದೆ ಇದ್ದರೆ ಗೆಲುವು ಹನುಮಂತನ ಪಾಲಾಗಲಿದೆ ಎಂದು ಸುದೀಪ್ ಪರೋಕ್ಷೆವಾಗಿ ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *