ಕೋಲ್ಕತಾ ವೈದ್ಯೆಯ ಕೊಲೆ ಕೇಸ್: ಮತ್ತೆ 100 ಹಿರಿಯ ವೈದ್ಯರ ರಾಜೀನಾಮೆ

Doctors say mass resignation
Spread the love

ನ್ಯೂಸ್ ಆ್ಯರೋ: ಇಲ್ಲಿನ ಆರ್​.ಜಿ.ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಿರಿಯ ವೈದ್ಯರು ಆರಂಭಿಸಿರುವ ಪ್ರತಿಭಟನೆಗೆ ಹಿರಿಯ ವೈದ್ಯರು ಕೂಡಾ ಕೈ ಜೋಡಿಸಿದ್ದು, ಇಂದು 100 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದರು.

ಕೋಲ್ಕತಾದ ಮೆಡಿಕಲ್​ ಕಾಲೇಜಿನ 70ಕ್ಕೂ ಹಿರಿಯ ಸಿಬ್ಬಂದಿ, ಡಾರ್ಜಿಲಿಂಗ್​ ಜಿಲ್ಲೆಯ ಸಿಲಿಗುರಿಯಲ್ಲಿರುವ ಉತ್ತರ ಬೆಂಗಾಲ್​ ಕಾಲೇಜು​ ಮತ್ತು ಆಸ್ಪತ್ರೆಯ 40 ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ.

ಮಾಹಿತಿ ಪ್ರಕಾರ, ಪಶ್ಚಿಮ ಮಿಡ್ನಾಪೊರ್​ ಜಿಲ್ಲೆಯ ಮಿಡ್ನಾಪೊರ್​ ಮೆಡಿಕಲ್​ ಕಾಲೇಜು​ ಮತ್ತು ಆಸ್ಪತ್ರೆಯ ವೈದ್ಯರೂ ಕೂಡ ಸಾಮೂಹಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮಂಗಳವಾರ ಮಧ್ಯಾಹ್ನ ಆರ್.​ಜಿ.ಕರ್​ ಆಸ್ಪತ್ರೆಯ 50ಕ್ಕೂ ಹೆಚ್ಚು ಹಿರಿಯ ವೈದ್ಯರು ರಾಜೀನಾಮೆ ನೀಡಿದ್ದರು.

ಆಮರಣಾಂತ ಉಪವಾಸಕ್ಕೆ ಮುಂದಾಗಿರುವ ಕಿರಿಯ ವೈದ್ಯರ ಪ್ರಾಣಕ್ಕೆ ತೊಂದರೆಯಾದರೆ ಯಾರು ಜವಾಬ್ದಾರಿ ಹೊರುತ್ತಾರೆ?. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಗಂಭೀರವಾಗುವ ಮೊದಲೇ ರಾಜ್ಯ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಮನವಿ ಮಾಡುತ್ತೇವೆ ಎಂದು ಆರ್‌.ಜಿ.ಕರ್ ವೈದ್ಯಕೀಯ ಕಾಲೇಜಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!