ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮೂವರು ಯುವಕರು ಜಲಸಮಾಧಿ ; ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೆಳೆಯನ ಮನೆಗೆ ಬಂದು ನಡೆಯಿತು ದುರಂತ
ಬೆಳ್ತಂಗಡಿ: ಮೂವರು ಯುವಕರು ದಕ್ಷಿಣ ಕನ್ನಡದ ಬೆಳ್ತಂಗಡಿಯ ವೇಣೂರಿನ ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಮೂಡುಬಿದಿರೆಯ ಎಡಪದವು ಮೂಲದ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ ಪಾರೆಂಕಿಯ ಸೂರಜ್ (19) ಹಾಗೂ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಜೈಸನ್ (19) ಮೃತ ಯುವಕರಾಗಿದ್ದು ವೇಣೂರು ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದೆ. ಮೂವರೂ ಮಂಗಳೂರಿನ ಕಾಲೇಜೊಂದರ ನರ್ಸಿಂಗ್ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಬಳಿಕ ನದಿಯಲ್ಲಿ ಸ್ನಾನ ಮಾಡಲು ಕಿಂಡಿ ಅಣೆಕಟ್ಟಿನ ಸಮೀಪ ನೀರಿಗೆ ಇಳಿದಿದ್ದು, ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Leave a Comment