Bangalore : ಲಿಫ್ಟ್ ಕೇಳಿದ್ದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸಂತ್ರಸ್ತೆಯ ವಿರುದ್ಧವೂ ಎಫ್ಐಆರ್ ದಾಖಲು : ಕಾರಣ ಏನು?

Spread the love

ನ್ಯೂಸ್ ಆ್ಯರೋ : ಡ್ರಾಪ್ ಕೇಳಿದ್ದ ಯುವತಿ ಮೇಲೆ ಅಪರಿಚಿತನಿಂದ ಅತ್ಯಾಚಾರ ನಡೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಯುವತಿಯ ವಿರುದ್ಧವೇ ಎಫ್ ಐ ಆರ್ ದಾಖಲಾಗಿದೆ.

ಅತ್ಯಾಚಾರ ನಡೆಯುವುದಕ್ಕೂ ಮುನ್ನ ಕುಡಿದ ಮತ್ತಿನಲ್ಲಿ ಕಾರು ಓಡಿಸಿದ್ದ ಯುವತಿ ಮಂಗಳ ಜಂಕ್ಷನ್ ಬಳಿ 2 ಕಾರು ಒಂದು ಬೈಕ್ ಗೆ ಡಿಕ್ಕಿ ಹೊಡೆದು ನಂತರ ಎಸ್ಕೇಪ್ ಆಗಲು ಯತ್ನಿಸಿದ್ದಳು. ನಂತರ ವಾಹನ ಸವಾರರು ಈಕೆಯನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದರು.

ಇದಕ್ಕೂ ಮುನ್ನ ಕೋರಮಂಗಲದಲ್ಲಿ ಪಾರ್ಟಿ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದಳು. ಅಪಘಾತದ ಬಳಿಕ ಅಪರಿಚಿತನ ಬೈಕ್ ನಲ್ಲಿ ಡ್ರಾಪ್ ತೆಗೆದುಕೊಂಡಿದ್ದಾಳೆ. ಮಾರ್ಗ ಮಧ್ಯೆ ಕೆಳಗಿಳಿದಿದ್ದಾಳೆ.

ನಂತರ ಬೇರೆ ಬೈಕ್ ಹತ್ತಿದ್ದು ಯುವತಿ ಮದ್ಯದ ನಶೆಯಲ್ಲಿರುವುದನ್ನು ನೋಡಿದ ಆರೋಪಿ ಬೊಮ್ಮನಹಳ್ಳಿ ಸಮೀಪ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ‌.

ಯುವತಿ ಮೊಬೈಲ್ ನಲ್ಲಿ ಎಮರ್ಜೆನ್ಸಿ ಎಸ್‌ಒಎಸ್ ಬಟನ್ ಒತ್ತಿದ್ದು, ತಕ್ಷಣ ಆಕೆಯ ಸ್ನೇಹಿತರಿಗೆ ಮಾಹಿತಿ ಹೋಗಿದೆ. ಅವರು ಸ್ಥಳಕ್ಕೆ ಬಂದಾಗ ಅಪರಿಚಿತ ಅಲ್ಲಿಂದ ಓಡಿ ಹೋಗಿದ್ದ. ಪೊಲೀಸರು ಸಿಸಿಟಿವಿ ದೃಶ್ಯ, ಸ್ಕೂಟರ್ ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಿದ್ದು, ತಮಿಳುನಾಡು ಮೂಲದ ಕೊರಿಯೋಗ್ರಾಫರ್ ಮುಖೇಶ್ವರನ್ ಬಂಧಿತ ಆರೋಪಿ. ಇದೀಗ ಸಂತ್ರಸ್ತ ಯುವತಿಯ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *