
ರಿಪ್ಲೆಕ್ಟಿವ್ ಟ್ಯಾಫ್, ರೇರ್ ಮಾರ್ಕೆಟಿಂಗ್ ಪ್ಲೇಟ್ ಜತೆ ಕ್ಯೂಆರ್ ಕೋಡ್ ಕಡ್ಡಾಯ – ಸಾರಿಗೆ ವಾಹನಗಳಿಗೆ ನಿಯಮ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ
- ಆಟೋ ನ್ಯೂಸ್
- March 2, 2023
- No Comment
- 107
ನ್ಯೂಸ್ ಆ್ಯರೋ : ರಾಜ್ಯದ ಎಲ್ಲ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ ‘ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್’ ಅಳವಡಿಕೆ ಮಾಡಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಆದೇಶವನ್ನು ಹೊರಡಿಸಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 104ರ ಅಡಿ ರಾಜ್ಯದ ಎಲ್ಲ ವಿಧದ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ನಿಯಮ ಪಾಲಿಸಬೇಕು. ಈ ವೇಳೆ ‘ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್’ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ.
ಸರ್ಕಾರ ಈ ನಿರ್ಧಾರ ಹಿಂದಿನ ಉದ್ದೇಶವೇನು?
ಸರ್ಕಾರ ಗಮನಕ್ಕೆ ಈಚೆಗೆ ಮಾರುಕಟ್ಟೆಗಳಲ್ಲಿ ಕಳಪೆ ತಯಾರಕರು/ ಮಾರಾಟಗಾರರು ಸಾರಿಗೆ ವಾಹನಗಳಿಗೆ ನಿಗದಿತ ಪರೀಕ್ಷಾ ಸಂಸ್ಥೆಗಳಲ್ಲಿ ತಪಾಸಣೆಗೆ ಒಳಪಡಿಸದೇ ‘ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್’ ಅಳವಡಿಸುತ್ತಿರುವುದು ತಿಳಿದುಬಂದಿದೆ. ಈ ಘಟನೆ ಮರುಕಳಿಸಬಾರದೆಂದು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಇನ್ಮುಂದೆ ಪ್ಲೇಟ್, ಕ್ಯೂಆರ್ ಕೋಡ್ ಖಚಿತವಾದ ನಂತರ ದೃಡೀಕರಣ ಪ್ರತ್ರ:
ಸರ್ಕಾರ ಆದೇಶದಂತೆ ‘ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್’ ಅಳವಡಿಸುವಾಗ ಅವುಗಳ ನೈಜತೆ ಖಚಿತಪಡಿಸಿಕೊಳ್ಳಲು ಕ್ಯೂ ಆರ್ ಕೋಡ್ ಅಗತ್ಯವಿರುತ್ತದೆ. ಈ ಸಂಬಂಧ ಮಾರ್ಕಿಂಗ್ ಪ್ಲೇಟ್ ತಯಾರಕರು ಕ್ಯೂ ಆರ್ ಕೋಡ್ ಅನ್ನು ವಾಹನಗಳಿಗೆ ಅಳವಡಿಕೆಯನ್ನೂ ಕಡ್ಡಾಯಗೊಳಿಸಲಾಗಿದೆ.
ಪ್ಲೇಟ್, ಕ್ಯೂಆರ್ ಅಳವಡಿಕೆಯನ್ನು ಖಚಿತಪಡಿಸಿಕೊಂಡು ತಪಾಸಣೆ ನಡೆಸಿ ವಾಹನಗಳಿಗೆ ಮಾತ್ರ ದೃಢೀಕರಣ ನೀಡುವಂತೆ ಸರ್ಕಾರವು ಎಲ್ಲ ಜಂಟಿ ಸಾರಿಗೆ ಆಯುಕ್ತರು, ಅವರ ಅಧೀನ ಹಿರಿಯ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.