
ಓಝೋಟೆಕ್ ಭೀಮ್ : ಒಮ್ಮೆ ಚಾರ್ಜ್ ಮಾಡಿದರೆ 525 ಕಿ.ಮೀ. ಓಡುತ್ತೆ ಈ ಸ್ಕೂಟರ್ – ಇದರ ಫೀಚರ್ಸ್ ಹೇಗಿದೆ?
- ಆಟೋ ನ್ಯೂಸ್
- May 31, 2023
- No Comment
- 359
ನ್ಯೂಸ್ ಆ್ಯರೋ : ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದೀಗ ಎಲೆಕ್ಟ್ರಿಕ್ ವಾಹನ ತಯಾರಕ ಕಂಪೆನಿ ಓಝೋಟೆಕ್ ತಮ್ಮ ಹೊಸ ದ್ವಿಚಕ್ರ ವಾಹನ ‘ಭೀಮ್’ ಅನ್ನು ಬಿಡುಗಡೆ ಮಾಡಿದೆ. ಅತ್ಯುತ್ತಮ ರೇಂಜ್ ಹಾಗೂ ಪವರ್‌ಫುಲ್ ಬ್ಯಾಟರಿಯೊಂದಿಗೆ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲೂ ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಿರುವುದಾಗಿ ಸಂಸ್ಥೆ ಹೇಳಿದೆ.
ಓಝೋಟೆಕ್ ಭೀಮ್ ಬ್ಲೂಟೂತ್ ಸಂಪರ್ಕ ಮತ್ತು ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಜ್ಜುಗೊಂಡಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಜಿಪಿಎಸ್, ವೇಗ, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಷನ್, ಡಾಕ್ಯುಮೆಂಟ್, ಟ್ರಿಪ್ ಹಿಸ್ಟರಿ ಮತ್ತಿತರ ಪ್ರಮುಖ ಮಾಹಿತಿಯನ್ನು ಪ್ರದರ್ಶಿಸುತ್ತದೆ. 10 kWh ವರೆಗಿನ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಪ್ರತಿ ಚಾರ್ಜ್‌ಗೆ 525 ಕಿ.ಮೀ. ಸಂಚರಿಸಲಿದೆ. ಈ ಮೂಲಕ ಭೀಮ್ ಪ್ರಸ್ತುತ ಲಭ್ಯವಿರುವ ಎಲ್ಲಾ ದ್ವಿಚಕ್ರ ವಾಹನಗಳಿಗಿಂತ ಹೆಚ್ಚಿನ ಮೈಲೇಜ್ ಹೊಂದಿದೆ.
ಇದರ ಟ್ರೆಲ್ಲಿಸ್ ಟ್ಯೂಬ್ಯುಲರ್ ಫ್ರೇಮ್ ರಚನೆಯು ವಾಹನದ ಬಾಳಿಕೆಯನ್ನು ಹೆಚ್ಚಿಸುತ್ತದೆ. ಯಾವುದೇ ಭೂ ಪ್ರದೇಶದಲ್ಲೂ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚಿನ ಟಾರ್ಕ್ ಇರುವುದರಿಂದ ಸಾಕಷ್ಟು ಲಗ್ಗೇಜ್ ಗಳನ್ನೂ ಸಾಗಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್ ಮೆಂಟ್ ಸಿಸ್ಟಮ್ (BMS) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಂತ್ರಗಳನ್ನು ಅಳವಡಿಸಲಾಗಿದೆ.
ಓಝೋಟೆಕ್ ನ ಸ್ಥಾಪಕ ಮತ್ತು ಸಿಇಒ ಭರತನ್ ಮಾತನಾಡಿ, ”ನಾವು ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಫ್ಲಿಯೊವನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಗ್ರಾಹಕರು ಉತ್ತಮ ಬೆಂಬಲ ನೀಡಿದ್ದಾರೆ. ಈ ಬಾರಿ ಬ್ಯಾಟರಿ, ಮೋಟಾರ್ ಮತ್ತು ಚಾಸಿಸ್‌ಗಳಿಗೆ ಆದ್ಯತೆ ನೀಡಿದ್ದೇವೆ” ಎಂದಿದ್ದಾರೆ.