ಮತ್ತಷ್ಟು ಗಮನ ಸೆಳೆಯುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ – ಹೊಸ ಲುಕ್‌ನ 9 ಸೀಟರ್‌ ವಾಹನಕ್ಕೆ ಭಾರೀ ಮೆಚ್ಚುಗೆ

ಮತ್ತಷ್ಟು ಗಮನ ಸೆಳೆಯುತ್ತಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ – ಹೊಸ ಲುಕ್‌ನ 9 ಸೀಟರ್‌ ವಾಹನಕ್ಕೆ ಭಾರೀ ಮೆಚ್ಚುಗೆ

ನ್ಯೂಸ್‌ ಆ್ಯರೋ : ದೇಶದಾದ್ಯಂತ ನವೀಕರಿಸಿದ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಯು ಗಟ್ಟಿಮುಟ್ಟಾದ ನಿರ್ಮಾಣ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸಿಗ್ನೇಚರ್ ಬೋಲ್ಡ್ ಲುಕ್‌ನೊಂದಿಗೆ ಗ್ರಾಹಕರನ್ನು ಮತ್ತಷ್ಟು ಸೆಳೆದಿದೆ. ಇದರ ಜನಪ್ರಿಯತೆಯಿಂದಾಗಿ ಸ್ಕಾರ್ಪಿಯೊ ಎನ್, ಮಹೀಂದ್ರಾ ಎರಡನೇ ತಲೆಮಾರಿನ ಮಾದರಿಯನ್ನು ಕೂಡ ಮಾರಾಟಕ್ಕೆ ತಂದಿದೆ. ಕಳೆದ ವರ್ಷದ 2022ಆಗಸ್ಟ್ ತಿಂಗಳಿನಲ್ಲಿ ಈ ಮಾದರಿಗೆ ಸ್ಕಾರ್ಪಿಯೊ ಕ್ಲಾಸಿಕ್ ಎಂದು ಮರುನಾಮಕರಣ ಮಾಡಿದ್ದಾರೆ.‌

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ರಿಫ್ರೆಶ್ ಲುಕ್ ಮತ್ತು ಪವರ್‌ಟ್ರೇನ್ ಅಪ್‌ಗ್ರೇಡ್‌ಗಳು ಎಸ್‌ಯುವಿಯ ಮಾರಾಟಕ್ಕೆ ಒಲವು ತೋರುತ್ತಿವೆ. ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಸಹ ಖರೀದಿದಾರರಿಂದ ಪ್ರಶಂಸೆಯ ಮಾತುಗಳು ಬರುತ್ತಿದೆ. ಏಕೆಂದರೆ ಇದು ಜನಪ್ರಿಯ ನೋಟ ಮತ್ತು ಭಾವನೆಯನ್ನು ಉಳಿಸಿಕೊಂಡಿದೆ.

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ಯುವಿಯನ್ನು ಆರ್‌ಡಿಇ ಕಂಪ್ಲೈಂಟ್ ಎಂಜಿನ್‌ನೊಂದಿಗೆ ಅಪ್‌ಗ್ರೇಡ್ ಮಾಡಲಿದೆ. ಇದಲ್ಲದೆ, ಈ ಎಸ್‍ಯುವಿ ಹೊಸ ಮಿಡ್-ಸ್ಪೆಕ್ S5 ರೂಪಾಂತರವನ್ನು ಪಡೆಯುತ್ತದೆ.‌

9 ಸೀಟ್‌ನ ಮಾದರಿಯಲ್ಲಿ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿ:

ಹೊಸ S5 ರೂಪಾಂತರವು ಬೇಸ್-ಸ್ಪೆಕ್ S ಮತ್ತು ಟಾಪ್-ಸ್ಪೆಕ್ S11 ರೂಪಾಂತರದ ನಡುವೆ ಇರುತ್ತದೆ. ಬೇಸ್-ಸ್ಪೆಕ್ S ರೂಪಾಂತರವು ಕೇವಲ 9-ಸೀಟ್ ಆಯ್ಕೆಯನ್ನು ಹೊಂದಿದ್ದರೆ, S5 ಮತ್ತು S11 ರೂಪಾಂತರಗಳು, 7 ಮತ್ತು 9 ಸೀಟ್ ಆಯ್ಕೆಗಳೊಂದಿಗೆ ಬರುತ್ತವೆ.

ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿಯ ಬೇಸ್-ಸ್ಪೆಕ್ S 9-ಸೀಟರ್ ಮಾದರಿಯು ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಮತ್ತು ಹಿಂಭಾಗದಲ್ಲಿ 2×2 ಸೈಡ್ ಫೇಸಿಂಗ್ ಬೆಂಚ್ ಸೀಟ್‌ಗಳೊಂದಿಗೆ ಬರುತ್ತದೆ.

ಟಾಪ್-ಸ್ಪೆಕ್ ಮಾಡೆಲ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಮತ್ತು ಬೆಂಚ್ ಮಾದರಿಯ ಸೀಟುಗಳೆರಡರಲ್ಲೂ ಲಭ್ಯವಿದೆ. ಇದೇ ರೀತಿಯ ಸೀಟ್ ವಿನ್ಯಾಸವನ್ನು S5 ಟ್ರಿಮ್‌ನಲ್ಲಿಯೂ ನೀಡಲಾಗುತ್ತದೆ. ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಹೊಸ ರೂಪಾಂತರವು ಕವರ್, ಆಡಿಯೊ ಸಿಸ್ಟಮ್, ಚಾಲಿತ ORVM ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು, ABS ಜೊತೆಗೆ EBD ಮತ್ತು ಬ್ರೇಕ್ ಅಸಿಸ್ಟ್ ಅನ್ನು ಪಡೆಯುವ ಸಾಧ್ಯತೆಯಿದೆ.

ಮಹೀಂದ್ರಾ ಕಂಪನಿಯು ಹಳೆಯ ಸ್ಕಾರ್ಪಿಯೋ ಮಾದರಿಯಲ್ಲಿ ಕೆಲ ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ಬದಲಾವಣೆ ಮಾಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್ ಸಹ ಸ್ಕಾರ್ಪಿಯೋ ಕ್ಲಾಸಿಕ್ ಎಸ್‍ಯುವಿಯನ್ನು ನೀಡಲಾಗಿದೆ. ಹೊಸ ಬದಲಾವಣೆಯ ನಂತರ ನವೀಕರಿಸಿದ ಮಾದರಿಯು ಹಳೆಯ ಮಾದರಿಯ ವಿನ್ಯಾಸವನ್ನೇ ನೆನಪಿಸುತ್ತದೆ. ಈ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹೊಸದಾಗಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಎಸ್‌ಯುವಿನಲ್ಲಿ 6 ಸ್ಪೀಡ್‌ ಮ್ಯಾನುವಲ್ ಗೇರ್‌ಬಾಕ್ಸ್‌:

ಎಸ್‍ಯುವಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿದ್ದು, ಇದು 132 ಬಿಎಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಮಾದರಿಯು ಈ ಹಿಂದಿನಿಂತೆ ಕಂಡರೂ ಕೆಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಹೊಸ ಲುಕ್‌ನಲ್ಲಿ ಮಾರುಕಟ್ಟೆಗೆ ಬಂದಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *