ಮಹೀಂದ್ರ ಥಾರ್ ಎದುರಿಸಲು ಸಜ್ಜಾಗಿದೆ ಮಾರುತಿ ಜಿಮ್ನಿ. – ಟೆಕ್ ಸಾಮ್ರಾಜ್ಯದ ಸೆನ್ಸೆಷನಲ್ ಸುದ್ದಿಯಿದು..!!

ಮಹೀಂದ್ರ ಥಾರ್ ಎದುರಿಸಲು ಸಜ್ಜಾಗಿದೆ ಮಾರುತಿ ಜಿಮ್ನಿ. – ಟೆಕ್ ಸಾಮ್ರಾಜ್ಯದ ಸೆನ್ಸೆಷನಲ್ ಸುದ್ದಿಯಿದು..!!

ನ್ಯೂಸ್ ಆ್ಯರೋ : ಅಂತರಾಷ್ಟೀಯ ವಾಹನ ಮಾರುಕಟ್ಟೆಯಲ್ಲಿ ಮಾರುತಿ‌ ಜಿಮ್ನಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದ್ದು ಹೊಸ ದಾಖಲೆ ನಿರ್ಮಿಸುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಮಾರಾಟ ವಿಚಾರದಲ್ಲಿ ರಾಕೆಟ್ ವೇಗ ಪಡೆದಿರುವ ಮಾರುತಿ ಜಿಮ್ನಿ 2018ರಲ್ಲಿ ಪರಿಚಯವಾಗಿತ್ತು. ಮಾರುತಿ ಸುಜುಕಿ ಜಿಮ್ನಿಯ ವಿಸ್ತೃತ ವೀಲ್ ಬೇಸ್ ಆವೃತ್ತಿಯು ಭಾರತದಲ್ಲಿ ದೀರ್ಘಕಾಲದ ಪರೀಕ್ಷೆಯಲ್ಲಿದೆ. ಸದ್ಯ ಈ ಹೊಸ ಮಾದರಿಯು ಇದೇ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

ನೂತನ ತಲೆಮಾರಿನ ಈ ವಾಹನದ ಬೆಲೆ ಹಾಗೂ ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಮಾರುತಿ ಸುಜುಕಿ ಜಿಮ್ನಿ ಆಫ್ ರೋಡ್ ಎಸ್ ಯೂವಿ ಮಾದರಿಯಾಗಿದೆ ಎಂದು ತಿಳಿದು ಬಂದಿದೆ. ಇದು ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಇತರ ಕಾಂಪ್ಯಾಕ್ಟ್ ಎಸ್ ಯುವಿಗಳಿಗಿಂತ ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ. ಈ ವಾಹನವು 2023ರ ಆಗಸ್ಟ್ ವೇಳೆಗೆ ಜನ ಬಳಕೆಗೆ ಕೈಗೆಟುಕುವ ಸಾಧ್ಯತೆಯಿದೆ.

ಐದು ಬಾಗಿಲುಗಳಿರುವ (ಡೋರ್) ಮಾರುತಿ ಜಿಮ್ನಿ ಸುಮಾರು 5 ರಿಂದ 6 ಸಾವಿರ ಯುನಿಟ್ ಉತ್ಪಾದಿಸುವ ಗುರಿ ಹೊಂದಿದ್ದು, ಮಾರುತಿ ಸುಜುಕಿ ಜಿಪ್ಸಿ ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ ಎನ್ನಲಾಗಿದೆ.

1985ರಲ್ಲಿ ದೇಶದ ಅಟೋ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ ಬರೋಬ್ಬರಿ 35 ವರ್ಷಗಳ ಕಾಲ ಭಾರತೀಯ ರಸ್ತೆಗಳ ರಾಯಭಾರಿಯಂತೆ ರಾರಾಜಿಸಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಇದರ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು.

ಸದ್ಯ ಇದೀಗ ಮಾರುಕಟ್ಟೆಗೆ ಕಾಲಿಡಲಿರುವ ಮಾರುತಿ ಜಿಮ್ನಿ 3 ಡೋರಿನ ಆವೃತ್ತಿಗಿಂತ 300 ಎಂಎಂ ಉದ್ದವಾಗಿರಲಿದೆ. ಜೊತೆಗೆ ಇದರ ವಿ಼ಲ್ ಬೇಸ್ ಕೂಡ 300 ಎಂಎಂ ವಿಸ್ತರಿಸಲಿದೆ. ಈ ಆಫ್-ರೋಡ್ ಎಸ್‍ಯುವಿ 3850 ಎಂಎಂ ಉದ್ದ, 1645 ಎಂಎಂ ಅಗಲ ಮತ್ತು 1730 ಎಂಎಂ ಎತ್ತರವನ್ನು 2550mm ವ್ಹೀಲ್‌ಬೇಸ್‌ ಹೊಂದಿದೆ ಎಂಬ ಮಾಹಿತಿ ಇದೆ.

ಒಟ್ಟಾರೆಯಾಗಿ ಈ ನೂತನ ಮಾರುತಿ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಒಳಗೊಂಡಿದೆ. ಇದರಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಇದ್ದು, ಡೋರುಗಳ ಎಸ್‍ಯುವಿಯು ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿರುತ್ತದೆ. ಈ ಆಫ್-ರೋಡ್ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿರುತ್ತದೆ ಎಂದು ತಿಳಿದು ಬಂದಿದೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *