
‘ಸ್ಮಾರ್ಟ್ ಕೀ’ ಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟ ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್ – ಇದರ ವಿನ್ಯಾಸ ಹೇಗಿದೆ ಗೊತ್ತಾ…!?
- ಆಟೋ ನ್ಯೂಸ್
- January 31, 2023
- No Comment
- 175
ನ್ಯೂಸ್ ಆ್ಯರೋ : ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ತನ್ನ ಅತ್ಯುತ್ತಮ ಮಾರಾಟವಾದ ಸ್ಕೂಟರ್ ಆಕ್ಟಿವಾದ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ. H-ಸ್ಮಾರ್ಟ್ ತಂತ್ರಜ್ಞಾನವನ್ನು ಇದರ ಉನ್ನತ ರೂಪಾಂತರದಲ್ಲಿ ನೀಡಲಾಗಿದ್ದು, ಈ ಸ್ಕೂಟರ್ ಹೊಂದಿರುವ ಹೊಸ ಅಪ್‍ಡೇಟ್ ಎಂದರೆ ಅದರ ಕೀ ಫೋಬ್.

ಹೌದು ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ‘ಸ್ಮಾರ್ಟ್ ಕೀ’ಯೊಂದಿಗೆ ಬರಲಿದ್ದು, ನಿರ್ದಿಷ್ಟವಾಗಿ 4 ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ. ಸ್ಮಾರ್ಟ್ ಅನ್ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಸೇಫ್ ಮತ್ತು ಸ್ಮಾರ್ಟ್ ಫೈಂಡ್ ಎಚ್-ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಹೊಸ ಆಕ್ಟಿವಾವನ್ನು ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಎಂಬ 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ‘ಸ್ಮಾರ್ಟ್ ಕೀ’ ಆರಂಭಿಕ 2 ರೂಪಾಂತರಗಳಾದ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ನಲ್ಲಿ ಲಭ್ಯವಿಲ್ಲ. ಈ ವೈಶಿಷ್ಟ್ಯವು ಅದರ ಸ್ಮಾರ್ಟ್ ರೂಪಾಂತರಕ್ಕೆ ಮಾತ್ರ ಕಾಯ್ದಿರಿಸಲಾಗಿದೆ. ಈ ರೂಪಾಂತರವು ಅತ್ಯಂತ ದುಬಾರಿಯಾಗಿದೆ. ಇದರ ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ 74,536 ರೂ. ಆದರೆ, ಡೀಲಕ್ಸ್ ವೇರಿಯಂಟ್ ಬೆಲೆ 77,036 ರೂ. ಮತ್ತು ಸ್ಮಾರ್ಟ್ ವೆರಿಯಂಟ್ ಬೆಲೆ 80,537 ರೂ. ಆಗಿದೆ.

ಹೊಸ ಹೋಂಡಾ ಆಕ್ಟಿವಾದಲ್ಲಿ 109.51cc ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ನೀಡಲಾಗುತ್ತಿದ್ದು, ಇದು 7.73 bhp ಪವರ್ ಮತ್ತು 8.9 Nm ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಸಿವಿಟಿಯೊಂದಿಗೆ ಬರುತ್ತದೆ.
ಸ್ಕೂಟರ್‌ನ ಕೀಲಿಯಲ್ಲಿ 2 ಬಟನ್‌ಗಳನ್ನು ನೀಡಲಾಗಿದೆ, ಇದರಲ್ಲಿ ಒಂದು ಬಟನ್ ಸ್ಮಾರ್ಟ್ ಫೈಂಡ್ ವೈಶಿಷ್ಟ್ಯಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ನಿಮ್ಮ ಸ್ಕೂಟರ್ ಕಿಕ್ಕಿರಿದ ಸ್ಥಳದಲ್ಲಿ ಅಥವಾ ದೊಡ್ಡ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆಯಾಗಿತ್ತು ಅಂದುಕೊಳ್ಳಿ. ಆದರೆ ನೀವು ಅದನ್ನು ಕಂಡುಹಿಡಿಯಲಾಗಲಿಲ್ಲವೆಂದರೆ ನಿಮ್ಮ ಸ್ಕೂಟರ್ ಹುಡುಕಲು ಸ್ಮಾರ್ಟ್ ಫೈಂಡ್ ಬಟನ್ ಬಳಸಬಹುದು. ಈ ವಿಶೇಷ ಗುಂಡಿಯನ್ನು ಒತ್ತಿದ ನಂತರ ಸ್ಕೂಟರ್‌ನ ಬ್ಲಿಂಕರ್‌ಗಳು ಮಿಟುಕಿಸುತ್ತವೆ.
ಇನ್ನೂ H-ಸ್ಮಾರ್ಟ್ ತಂತ್ರಜ್ಞಾನದಲ್ಲಿ ಸ್ಮಾರ್ಟ್ ಅನ್ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಸೇಫ್ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಸ್ಕೂಟರ್‌ನ ಸ್ಮಾರ್ಟ್ ಕೀ 2 ಮೀಟರ್ ವ್ಯಾಪ್ತಿಯಿಂದ ಹೊರಗೆ ಹೋದರೆ ಸ್ಕೂಟರ್ ಲಾಕ್ ಆಗುತ್ತದೆ. ನಂತರ ನೀವು ಸ್ಕೂಟರ್‌ನ ಕೀಲಿಯನ್ನು 2 ಮೀಟರ್ ವ್ಯಾಪ್ತಿಯೊಳಗೆ ತಂದ ತಕ್ಷಣ ಅದು ಅನ್‌ಲಾಕ್ ಆಗುತ್ತದೆ. ಇದು ಕೀಲಿರಹಿತ ಪ್ರವೇಶ ಹೊಂದಿರುವ ಕಾರುಗಳಲ್ಲಿರುವಂತೆಯೇ ವೈಶಿಷ್ಟ್ಯವನ್ನು ಹೊಂದಿದೆ.