ಹೊಸ ಲುಕ್‌ನಲ್ಲಿ ಮಾರುಕಟ್ಟೆಗೆ ಬಂದಿದೆ ಆಲ್ಟೊ K10 – 49 ಸಾವಿರ ರೂಪಾಯಿ ಭರ್ಜರಿ ಡಿಸ್ಕೌಂಟ್, ವಿವರ ಇಲ್ಲಿದೆ..

ಹೊಸ ಲುಕ್‌ನಲ್ಲಿ ಮಾರುಕಟ್ಟೆಗೆ ಬಂದಿದೆ ಆಲ್ಟೊ K10 – 49 ಸಾವಿರ ರೂಪಾಯಿ ಭರ್ಜರಿ ಡಿಸ್ಕೌಂಟ್, ವಿವರ ಇಲ್ಲಿದೆ..

ನ್ಯೂಸ್‌ ಆ್ಯರೋ : ಕಾರು ಮಾರಾಟ ಕ್ಷೇತ್ರದ ದೈತ್ಯ ಕಂಪೆನಿಯಾಗಿರುವ ಮಾರುತಿ ಸುಜುಕಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಮತ್ತು ನಂತರದ ಸೇವೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಕಂಪೆನಿಯು ಆಗಾಗ ಪ್ಯಾಕೇಜ್ ಅನ್ನು ಪರಿಚಯಿಸುತ್ತಿದೆ.

ಇದೀಗ ಆಲ್ಟೊ ಕಾರಿನಲ್ಲಿ ಹಳೆಯ ಏಕತಾನತೆಯ ನೋಟವನ್ನು ಬದಲಿಸಿರುವ ಮಾರುತಿ ಸುಜುಕಿ, ತನ್ನ K10 ವೆರಿಯಂಟ್‌ನಲ್ಲಿ ತಾಜಾ ನೋಟವನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಮೂಲಕ ಮಾರುತಿ ಕಂಪನಿಯು ತಮ್ಮ ಸಾಂಪ್ರದಾಯಿಕ ಕಾರಿಗೆ ಹೊಸ ಲುಕ್‌ ನೀಡಿ ಮಧ್ಯಮ ವರ್ಗದ ಮನಗೆದ್ದಿದೆ. ಅಲ್ಲದೆ, ಮಾರ್ಚ್‌ನಲ್ಲಿ ತನ್ನ ವಿವಿಧ ಕಾರುಗಳ ಮೇಲೆ ಮಾರುತಿ ಸುಜುಕಿ ಭಾರಿ ರಿಯಾಯಿತಿ ಕೂಡ ಘೋಷಿಸಿದೆ.

ಮಾರುತಿ ಸುಜುಕಿ ತನ್ನ ಹಲವು ವಾಹನಗಳ ಮೇಲೆ ಮಾರ್ಚ್ 2023ರಲ್ಲಿ ಭಾರಿ ರಿಯಾಯಿತಿ ಘೋಷಣೆ ಮಾಡಿದೆ. ಕಳೆದ ವರ್ಷದಿಂದ ಕಂಪನಿಯು ಗ್ರಾಹಕರನ್ನು ಸೆಳೆಯಲು ಹಲವಾರು ಕೊಡುಗೆ ನೀಡಿದೆ. ಮಾರುತಿಯ ಹೊಸ ಆಲ್ಟೊ ಬಿಡುಗಡೆಯಾದಾಗಿನಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈ ಹೊಸದಾಗಿ ವಿನ್ಯಾಸಗೊಳಿಸಲಾದ K10 ಮಾದರಿಯು, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಮಾರುತಿ ಆಲ್ಟೊ ಕೆ10 ಮೇಲೆ ಬರೋಬ್ಬರಿ ₹ 30,000 ರಿಯಾಯಿತಿ ಗ್ರಾಹಕ ಕೊಡುಗೆ ಮತ್ತು ₹ 15,000 ವಿನಿಮಯ ಬೋನಸ್ ಅನ್ನು ನೀಡುತ್ತಿದೆ. 40,000 ಕಾರ್ಪೊರೇಟ್ ರಿಯಾಯಿತಿಯೂ ಇದೆ. ಒಟ್ಟಾರೆಯಾಗಿ, ಈ ಪ್ರವೇಶ ಮಟ್ಟದ ಕಾರಿನ ಮೇಲೆ ನೀವು ಸುಮಾರು ₹ 49,000 ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಆಲ್ಟೊ ಕೆ10 ಮ್ಯಾನುವಲ್ ರೂಪಾಂತರದಲ್ಲಿ 24.39 ಕೆಎಂಪಿಎಲ್ ಮತ್ತು ಸ್ವಯಂಚಾಲಿತ ರೂಪಾಂತರದಲ್ಲಿ 24.90 ಕೆಎಂಪಿಎಲ್ ಮೈಲೇಜ್ ಪಡೆಯುತ್ತದೆ ಎಂದು ಕಂಪನಿ ತಿಳಿಸಿದೆ. ನೀವೇನಾದರೂ ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದರೆ, ನೀವು ಆಲ್ಟೊ ಕೆ10 ಅನ್ನು ಪರಿಗಣಿಸಬಹುದಾಗಿದೆ. ಯಾವುದಕ್ಕೂ ಒಮ್ಮೆ ಶೋರೂಂಗೆ ಭೇಟಿ ನೀಡಿ ಟ್ರಯಲ್‌ ನೋಡಬಹುದಾಗಿದೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *