3 ವರ್ಷದ ಮಗುವಿನ ಮೇಲೆ ಡಿಜಿಟಲ್ ರೇಪ್; ಡಿಜಿಟಲ್ ರೇಪ್ ಎಂದರೇನು ಗೊತ್ತಾ?
ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪ್ರೀ ಕೆಜಿ ತೆರಳುತ್ತಿರುವ ಮೂರು ವರ್ಷದ ಬಾಲಕಿಯ ಮೇಲೆ ಡಿಜಿಟಲ್ ರೇಪ್ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಶಾಲಾ ಸಿಬ್ಬಂದಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಬಾಲಕಿಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಬಂಧಿತ ಮೂರನೇ ವ್ಯಕ್ತಿ ಮೇಲೆ ಸಹಕರಿಸಿದ ಆರೋಪವಿದೆ.
ಅಕ್ಟೋಬರ್ 9 ರಂದು ನಡೆದ ಈ ಘಟನೆ, ಪ್ರಿ-ಪ್ರೈಮರಿ ವಿದ್ಯಾರ್ಥಿನಿಯ ಪೋಷಕರು ಹೊಟ್ಟೆ ನೋವಿನ ದೂರಿನ ಮೇರೆಗೆ ಆಸ್ಪತ್ರೆಗೆ ಕರೆದೊಯ್ದಾಗ ಬೆಳಕಿಗೆ ಬಂದಿದೆ. ಘಟನೆಯ ಮರುದಿನ ಅಕ್ಟೋಬರ್ 10 ರಂದು ನೋಯ್ಡಾ ಸೆಕ್ಟರ್ -20 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇತರ ಶಂಕಿತರ ಮೇಲೆ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಖ್ಯ ಆರೋಪಿಯ ಮೇಲೆ ಈಗಾಗಲೇ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಡಿಜಿಟಲ್ ರೇಪ್ ಎಂದರೇನು?
ಡಿಜಿಟಲ್ ರೇಪ್ ಒಂದು ರೀತಿಯ ಲೈಂಗಿಕ ಕಿರುಕುಳವಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯವಾಗಿದೆ. ಬಲಾತ್ಕಾರವಾಗಿ ಖಾಸಗಿ ಅಂಗದೊಳಗೆ ಬೆರಳು ಅಥವಾ ಇನ್ಯಾವುದೇ ವಸ್ತುಗಳನ್ನು ತುರುಕುವುದು. ಒಪ್ಪಿಗೆ ಇಲ್ಲದೆ ಉದ್ರೇಕಗೊಳಿಸುವುದು, ಕಿರುಕುಳ ನೀಡುವುದು ಡಿಜಿಟಲ್ ರೇಪ್ ಅಡಿಯಲ್ಲಿ ಬರಲಿದೆ.
2012ರಲ್ಲಿ ಡಿಜಿಟಲ್ ರೇಪ್ ಕುರಿತ ಕಾನೂನು ಜಾರಿಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ 2012ರಲ್ಲಿ ನಡೆದ ನಿರ್ಭಯ ಪ್ರಕರಣ. ನಿರ್ಭಯ ಪ್ರಕರಣದ ಬಳಿಕ ಸಂಸತ್ತು ಡಿಜಿಟಲ್ ರೇಪ್ ಕಾನೂನು ಜಾರಿಗೆ ತಂದಿದೆ. ಇದಕ್ಕೂ ಮೊದಲು ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗಿತ್ತು. ಡಿಜಿಟಲ್ ರೇಪ್ ಅಡಿಯಲ್ಲಿ ಹೆಣ್ಣು ಮಕ್ಕಳ ಖಾಸಗಿ ಅಂಗದೊಳಗೆ ಬೆರಳು ಅಥವಾ ಇನ್ಯಾವುದೇ ವಸ್ತುಗನ್ನು ಬಲವಂತವಾಗಿ ತುರುಕುವುದಾಗಿದೆ. ಇದನ್ನು ಲೈಂಗಿಕ ಅಪರಾಧ ಎಂದು ಪರಿಗಣಸಲಾಗುತ್ತದೆ. ಇನ್ನು ಪೋಕ್ಸ್ ಕಾಯ್ಡೆಯಡಿ ಕೇಸ್ ದಾಖಲಾಗಿದ್ದರೆ, ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ 50,000 ರೂ. ದಂಡ ಹಾಗೂ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ವಾಸ್ತವವಾಗಿ, ಡಿಜಿಟಲ್ ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಮಹಿಳೆಯ ಖಾಸಗಿ ಭಾಗದಲ್ಲಿ ಬೆರಳುಗಳನ್ನು ಬಳಸಲಾಗುತ್ತದೆ. ನಿರ್ಭಯಾ ಪ್ರಕರಣದ ನಂತರ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಘಟನೆಗಳನ್ನು ತಡೆಯಲು ಡಿಜಿಟಲ್ ರೇಪ್ನಲ್ಲಿ ಕಠಿಣ ಶಿಕ್ಷೆಯನ್ನು ಸಹ ರೂಪಿಸಲಾಗಿದೆ.
ಭಾರತದಲ್ಲಿ ಡಿಜಿಟಲ್ ಅತ್ಯಾಚಾರದ ಇತರ ಪ್ರಕರಣಗಳು:
ಕಳೆದ ವರ್ಷ ನೋಯ್ಡಾದ 50 ವರ್ಷದ ಮನೋಜ್ ಲಾಲಾ ಎಂಬಾತನನ್ನು, ಏಳು ತಿಂಗಳ ಹೆಣ್ಣು ಮಗುವನ್ನು ಡಿಜಿಟಲ್ ಅತ್ಯಾಚಾರ ಮಾಡಿದ್ದಾಕ್ಕಾಗಿ ಬಂಧಿಸಲಾಯಿತು. ಇನ್ನೊಂದು ಪ್ರಕರಣದಲ್ಲಿ, ನೋಯ್ಡಾದ ಒಬ್ಬ ತಂದೆ ಜೂನ್ 2022 ರಲ್ಲಿ ತನ್ನ ಐದು ವರ್ಷದ ಮಗುವಿನ ಮೇಲೆ ಡಿಜಿಟಲ್ ಅತ್ಯಾಚಾರವನ್ನು ಮಾಡಿದ್ದಾನೆ ಎಂದು ಆರೋಪವಿದೆ.
ಆಕೆಯ ತಾಯಿಯು ನೀಡಿದ ದೂರಿನ ನಂತರ ಆ ಪ್ರಕರಣವನ್ನು ಎಫ್ಐಆರ್ ಮಾಡಿ ಅತ್ಯಾಚಾರಿಯನ್ನು ಬಂಧಿಸಲಾಯಿತು. 2021 ರಲ್ಲಿ, 80 ವರ್ಷದ ಕಲಾವಿದ ಏಳು ವರ್ಷಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ಡಿಜಿಟಲ್ ಅತ್ಯಾಚಾರವನ್ನು ಮಾಡಿದ್ದ ಎಂಬ ಆರೋಪವಿತ್ತು.
Leave a Comment