ಇನ್ಸ್​​ಸ್ಟಾದಲ್ಲಿ ಅನ್​ಫಾಲೋ.. ಫೋಟೋ​ ಡಿಲೀಟ್​; ಪಾಂಡ್ಯ, ಚಹಾಲ್ ಬೆನ್ನಲ್ಲೇ ಮತ್ತೊಬ್ಬ ಕ್ರಿಕೆಟಿಗನ ದಾಂಪತ್ಯದಲ್ಲಿ ಬಿರುಕು !

divorce
Spread the love

ನ್ಯೂಸ್ ಆ್ಯರೋ: ಟೀಮ್​ ಇಂಡಿಯಾ ಸ್ಪಿನ್ನರ್​​ ಯುಜುವೇಂದ್ರ ಚಹಲ್​ ಡಿವೋರ್ಸ್​ನ ಸುದ್ದಿ ಇನ್ನೂ ಮಾಸಿಲ್ಲ. ಅದಾಗಲೇ ಮತ್ತೊಬ್ಬ ಕ್ರಿಕೆಟಿಗನ ಬಾಳಲ್ಲಿ ಬಿರುಗಾಳಿ ಎದ್ದಿದೆ. ಟೀಮ್​ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮನೀಷ್​ ಪಾಂಡೆ ದಾಂಪತ್ಯ ಜೀವನದ ಹಳಿ ತಪ್ಪಿದೆ ಎಂಬ ಶಾಕಿಂಗ್​ ಸುದ್ದಿ ಇದೀಗ ಹೊರಬಿದ್ದಿದೆ.

Manish Pandey Ashrita Shetty

2019ರ ಡಿಸೆಂಬರ್​ನಲ್ಲಿ ಶುರುವಾಗಿದ್ದ ದಾಂಪತ್ಯಯಾನ 7 ವರ್ಷಕ್ಕೆ ಅಂತ್ಯದ ಹಾದಿ ಹಿಡಿದಿದೆ. ಮನೀಷ್​ ಪಾಂಡೆ – ಅಶ್ರಿತಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲಾ ಅನ್ನೋ ಶಾಕಿಂಗ್​ ಸುದ್ದಿ ಸದ್ಯ ಹೊರ ಬಿದ್ದಿದೆ.

Manish Pandey Ashrita Shetty 1736424559

ಕರ್ನಾಟಕದ ಕ್ರಿಕೆಟಿಗ ಮನೀಷ್​ ಪಾಂಡೆ ಬಾಳಲ್ಲಿ ಬಿರುಗಾಳಿ ಎದ್ದಿದೆ ಎಂಬ ರೂಮರ್ಸ್​​ ಸದ್ಯ ಕ್ರಿಕೆಟ್​ ಲೋಕದಲ್ಲಿ ಸದ್ದು ಮಾಡ್ತಿದೆ. ಕಳೆದ ಕೆಲ ತಿಂಗಳ ಹಿಂದೆಯೇ ಭಿನ್ನಾಭಿಪ್ರಾಯದ ಕಾರಣದಿಂದ ಇಬ್ಬರು ದೂರಾಗಿದ್ದು, ಪ್ರತೇಕವಾಗಿ ಜೀವನ ನಡೆಸ್ತಿದ್ದಾರೆ ಎನ್ನಲಾಗ್ತಿದೆ. ಮನೀಷ್​​ ಪಾಂಡೆ ಬೆಂಗಳೂರಿನಲ್ಲಿ ನೆಲೆಸಿದ್ರೆ, ಅಶ್ರಿತಾ ಶೆಟ್ಟಿ ಮುಂಬೈನಲ್ಲಿ ಬೀಡು ಬಿಟ್ಟುದ್ದಾರೆ ಎಂಬ ಮಾಹಿತಿ ಹರಿದಾಡ್ತಿದೆ.

Ashrita Shetty Manish Pandey Marriage

ಪಾಂಡೆ- ಅಶ್ರಿತಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲಾ ಅನ್ನೋ ರೂಮರ್ಸ್​ ಇನ್ಸ್​​ಸ್ಟಾಗ್ರಾಂ ಪುಷ್ಟಿ ನೀಡಿದೆ. ಇನ್ಸ್​​​ಸ್ಟಾಗ್ರಾಂನಲ್ಲಿ ಇಬ್ಬರು ಪರಸ್ಪರ ಅನ್​​ಫಾಲೋ ಮಾಡಿಕೊಂಡಿದ್ದಾರೆ. ಇಬ್ಬರು ಜೊತೆಗಿರುವ ಫೋಟೋಗಳನ್ನೂ, ಇಬ್ಬರೂ ತಮ್ಮ ತಮ್ಮ ಅಕೌಂಟ್​ನಿಂದ ಡಿಲೀಟ್​ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಸಾರ್ವಜನಿಕವಾಗಿಯೂ ಇಬ್ಬರೂ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳು ಡಿವೋರ್ಸ್​ ಗಾಸಿಪ್​ಗೆ ಪುಷ್ಟಿ ನೀಡಿವೆ.

Leave a Comment

Leave a Reply

Your email address will not be published. Required fields are marked *

error: Content is protected !!