ಸ್ಟಾರ್ ನಟನ ಮನೆಯಲ್ಲಿ ಅಲ್ಲೋಲ ಕಲ್ಲೋಲ; ತಂದೆ, ಮಗನ ಮಧ್ಯೆ ಮಾರಾಮಾರಿ !
ನ್ಯೂಸ್ ಆ್ಯರೋ: ಸದಾ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ತೆಲುಗು ಹಿರಿಯ ನಟ ಮೋಹನ್ ಬಾಬು ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. ತನ್ನ ಅಭಿನಯದಿಂದಲೇ ಸೈ ಎನಿಸಿಕೊಂಡಿರೋ ನಟ ಮೋಹನ್ ಬಾಬು ಕುಟುಂಬದಲ್ಲಿ ಮನಸ್ಥಾಪ ಶುರುವಾಗಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಳೆದ ಒಂದು ವಾರದಿಂದ ಜಗಳ ನಡೆಯುತ್ತಲೇ ಇದೆ. ಮನೆಯ ವಿಚಾರಕ್ಕೆ ಶುರುವಾದ ಜಗಳದಿಂದ ಇಡೀ ಕುಟುಂಬ ಬೀದಿಗೆ ಬಂದಿದೆ. ಸದ್ಯ ಇರೋ ಮನೆ ವಿಚಾರಕ್ಕೆ ಕಿರಿಯ ಪುತ್ರ ಮಂಚು ಮನೋಜ್ ಹಾಗೂ ತಂದೆ ಮೋಹನ್ ಬಾಬು ಮಧ್ಯೆ ಗಲಾಟೆ ನಡೆಯುತ್ತಿದ್ದು, ಈಗ ತಾರಕಕ್ಕೇರಿದೆ.
ಇನ್ನು, ಈ ಸಂಬಂಧ ಮಾತಾಡಿರೋ ಮಂಚು ಮನೋಜ್, ನಾನು ಎಸ್ಟೇಟ್ ಮನೆಯಲ್ಲಿ 1 ವರ್ಷದಿಂದ ಕುಟುಂಬ ಸಮೇತ ವಾಸಿಸುತ್ತಿದ್ದೇನೆ. ಆದರೆ, ಇತ್ತೀಚೆಗೆ ನನ್ನ ತಂದೆ ತನ್ನ ಬೌನ್ಸರ್ಗಳಿಂದ ಹಲ್ಲೆ ಮಾಡಿಸಿದ್ದಾರೆ. ನನ್ನ ಮೇಲೆ ಮಾತ್ರವಲ್ಲ ಹೆಂಡತಿ ಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ. ಡಾಕ್ಟರ್ ಬಳಿ ಹೋದರೆ ಎಲ್ಲೆಲ್ಲಿ ಇಂಜುರಿ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಪೊಲೀಸರಿಗೆ 3 ಪುಟಗಳ ದೂರು ಕೂಡ ನೀಡಿದ್ದಾರೆ.
ಮತ್ತೊಂದೆಡೆ ತನ್ನ ಮೇಲಿನ ಆರೋಪವನ್ನು ನಟ ಮೋಹನ್ ಬಾಬು ತಳ್ಳಿ ಹಾಕಿದ್ದಾರೆ. ಅದು ನಮ್ಮ ಮನೆ. ನಾನು ಮನೆಗೆ ಹೋದರೆ ನನ್ನ ಮಗನ ಬಾಡಿಗಾರ್ಡ್ ನನ್ನ ಮೇಲೆ ಹಲ್ಲೆ ನಡೆಸಲು ಬರುತ್ತಿದ್ದಾರೆ. ನನಗೆ ಏನಾದರು ಆದರೆ ಯಾರು ಹೊಣೆ. ನನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕೌಂಟರ್ ಕಂಪ್ಲೈಂಟ್ ಕೊಟ್ಟಿದ್ದಾರೆ. ಸದ್ಯ, ಮನೆಯ ಕಾರಣಕ್ಕೆ ಶುರುವಾದ ಈ ಜಗಳ ಇಡೀ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೂ ಮೋಹನ್ ಬಾಬು ಹಲ್ಲೆ ನಡೆಸಿದ್ದಾರೆ.
Leave a Comment