ಕೆಂಪೇಗೌಡ ಏರ್​​ಪೋರ್ಟ್​ಗೆ ಮತ್ತೊಂದು ಹಿರಿಮೆ; ಟರ್ಮಿನಲ್ 2ನ 080 ಲಾಂಜ್​​ಗೆ ಪ್ರಶಸ್ತಿ

Bengaluru Airport
Spread the love

ನ್ಯೂಸ್ ಆ್ಯರೋ: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀವು ಟರ್ಮಿನಲ್ 2 ಅನ್ನು ನೋಡಿರುತ್ತೀರಿ. ಇಲ್ಲಿ ನಮ್ಮ ಸಂಸ್ಕೃತಿ ಮತ್ತು ಕಲೆ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ಕಾರ್ಯವನ್ನು ಮಾಡಲಾಗಿದೆ.

ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿಯೇ ಇಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡಿದ್ದು, 13 ವಿವಿಧ ಸ್ಥಳದಲ್ಲಿ 60ಕ್ಕೂ ಆಟಗಳು, ವಿಮಾನ ಗೋಪುರ, ಹಂಪಿಯ ಕಲೆ, ಅನೆಗಳು, ಬೃಹತ್ ಗಾರ್ಡನ್ ಕೂಡ ನಿರ್ಮಾಣ ಮಾಡಲಾಗಿದೆ.

ಹೌದು, ಇದನ್ನು ನಾವು ನೋಡಿದ್ದೀವಿ ಅಲ್ವಾ! ಮತ್ತೆ ಯಾಕೆ ಇವರು ಇದನ್ನೆಲ್ಲಾ ಹೇಳ್ತಿದ್ದಾರೆ ಎಂಬ ನಿಮ್ಮ ಅನುಮಾನಕ್ಕೆ ನಾವು ಉತ್ತರ ಕೊಡ್ತೀವಿ. ವಿಚಾರ ಏನಪ್ಪಾ ಎಂದರೆ, ಬೆಂಗಳೂರಿನ ಹೆಮ್ಮೆಯ ಕೆಂಪೇಗೌಡ ಏರ್ಪೋರ್ಟ್ ಗೆ ಮತ್ತೊಂದು ಹಿರಿಮೆ ಸಿಕ್ಕಿದ್ದು, ಅತ್ಯುತ್ತಮ ದೇಶಿಯಾ ಏರ್ಪೋಟ್ ಲಾಂಜ್ ಪ್ರಶಸ್ತಿಯನ್ನು ಕೆಐಎಬಿ ಮುಡಿಗೇರಿಸಿಕೊಂಡಿದೆ.

ಕೆಐಎಬಿಯ 080 ಲಾಂಜ್ ಗೆ ಟ್ರಾವೆಲ್ ಹಾಗೂ ಲೀಶರ್ ಇಂಡಿಯಾ ವತಿಯಿಂದ ನೀಡುವ ಪ್ರಶಸ್ತಿ ಕೆಂಪೇಗೌಡ ಏರ್ಪೋಟ್ ನ ಟರ್ಮಿನಲ್ 2 ರ 080 ಲಾಂಜ್ ಗೆ ಒಲಿದಿದ್ದು, ಪ್ರಯಾಣಿಕರಿಗೆ ಲಭ್ಯವಿರುವ ಆತಿಥ್ಯ, ಅತ್ಯಾಧುನಿಕ ಸೌಲಭ್ಯಗಳ ಮನ್ನಣೆಗೆ ಪ್ರಶಸ್ತಿ ನೀಡಲಾಗಿದೆ.

ಹೆಚ್ಚಿನ ಪ್ರಯಾಣಿಕರು 080 ಲಾಂಜ್‌ ಬಗ್ಗೆ ಉತ್ತಮ ರಿವ್ಯೂ ನೀಡಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಸಿಕ್ಕಿದ್ದು, ಬೆಂಗಳೂರಿನ 080 ಕೋಡ್ ವರ್ಡ್ ಮೇಲೆ 2 ವರ್ಷಗಳಿಂದೆ ಮಾಡಿದ್ದ 080 ಲಾಂಜ್ ನಿರ್ಮಾಣ ಮಾಡಲಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!