Mudra Yojana Explained : ಮುದ್ರಾ ಯೋಜನೆಯಡಿ ಹೊಸ ಉದ್ಯಮ ಆರಂಭಿಸಲು ಸಾಲ ಲಭ್ಯ – ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ..

Mudra Yojana Explained : ಮುದ್ರಾ ಯೋಜನೆಯಡಿ ಹೊಸ ಉದ್ಯಮ ಆರಂಭಿಸಲು ಸಾಲ ಲಭ್ಯ – ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ‌ : ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರ ರೂಪಾಯಿವರೆಗೆ ಸಾಲ ಪಡೆಯುವ ಫಲಾನುಭವಿಗಳಿಗೆ ಬಡ್ಡಿದರದಲ್ಲಿ ಶೇ 2ರಷ್ಟು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಶಿಶು ಸಾಲ ಯೋಜನೆಯಡಿ ಸಾಲ ಪಡೆದ ಸುಮಾರು 9 ಕೋಟಿ 35 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಈ ನಿರ್ಣಯದ ಲಾಭ ಸಿಗಲಿದೆ.

ಬಡ್ಡಿದರದಲ್ಲಿ ಸಬ್ಸಿಡಿ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ, ಶಿಶು ಸಾಲದ ಜೊತೆಗೆ ಮುದ್ರಾ ಸಾಲದಲ್ಲಿ ಇನ್ನೂ 2 ವಿಧದ ಸಾಲಗಳಿವೆ. ಇವುಗಳನ್ನು ಕಿಶೋರ್ ಸಾಲ ಮತ್ತು ತರುಣ್ ಸಾಲ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ಉದ್ಯಮ ಪ್ರಾರಂಭಿಸಲು ₹50 ಸಾವಿರದಿಂದ 10 ಲಕ್ಷ ರೂಪಾಯಿ ವರೆಗೆ ಸಾಲ ಲಭ್ಯವಿದೆ. ಮುದ್ರಾ ಯೋಜನೆಯಡಿ ಹೇಗೆ ಸಾಲ ಪಡೆಯಬೇಕೆಂಬ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಯಾರು ಸಾಲ ಪಡೆಯಬಹುದು?

ತನ್ನದೇ ಸ್ವಂತ ಉದ್ಯಮ ಆರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ ಯೋಜನೆಯಡಿ ಸಾಲ ಪಡೆಯಬಹುದು. ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ರೂ.ವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ 2015ರಿಂದಲೇ ಜಾರಿಯಲ್ಲಿದೆ.

ವಿವಿಧ ಸಾಲ ಸೌಲಭ್ಯ

ಮುದ್ರಾ ಯೋಜನೆಯಡಿ ಶಿಶು ಸಾಲ, ಕಿಶೋರ್ ಸಾಲ ಹಾಗೂ ತರುಣ್ ಸಾಲ ಎಂಬ ಮೂರು ರೀತಿ ಸಾಲ ಸೌಲಭ್ಯಗಳಿದ್ದು, ಶಿಶು ಸಾಲ ಯೋಜನೆಯ ಅಡಿ 50,000 ರೂ. ಸಾಲ ನೀಡಲಾಗುತ್ತದೆ. ಕಿಶೋರ್ ಸಾಲದ ಯೋಜನೆಯ ಅಡಿ 50,000 ರಿಂದ 5 ಲಕ್ಷದವರೆಗೆ ಸಾಲ ದೊರೆಯಲಿದ್ದು, ತರುಣ್ ಸಾಲ ಯೋಜನೆಯಡಿ 5 ಲಕ್ಷದಿಂದ 10 ಲಕ್ಷ ವರೆಗಿನ ಸಾಲವನ್ನು ನೀಡಲಾಗುತ್ತದೆ.

ಈ ದಾಖಲೆಗಳು ಅಗತ್ಯ

ಐಡಿ ಪ್ರೂಫ್‌: ಆಧಾರ್‌/ ವೋಟರ್‌ ಐಡಿ/ ಪ್ಯಾನ್‌ ಕಾರ್ಡ್‌/ ಡ್ರೈವಿಂಗ್‌ ಲೈಸೆನ್ಸ್‌
ಅಡ್ರೆಸ್‌ ಪ್ರೂಫ್‌: ವಿದ್ಯುತ್‌ ಬಿಲ್‌/ ಟೆಲಿಫೋನ್‌ ಬಿಲ್‌/ ವಾಟರ್‌ ಬಿಲ್‌/ ಗ್ಯಾಸ್‌ ಬಿಲ್‌
ಪ್ರೂಫ್‌ ಆಫ್‌ ಬ್ಯುಸಿನೆಸ್‌: ಉದ್ಯಮ ನೋಂದಣಿ ಪ್ರಮಾಣಪತ್ರ

ಮುದ್ರಾ ಸಾಲ ಪಡೆಯುವುದು ಹೇಗೆ?

ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಾಲಕ್ಕಾಗಿ, ನೀವು ಸರ್ಕಾರ ಅಥವಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸುತ್ತಿದ್ದರೆ, ನಂತರ ನೀವು ಮಾಲೀಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ ಮತ್ತು ಇತರ ಹಲವು ದಾಖಲೆಗಳನ್ನು ಒದಗಿಸಬೇಕು. ಮುದ್ರಾ ಯೋಜನೆಯ ವೆಬ್‌ಸೈಟ್‌ನಲ್ಲಿ ಸಾಲ ನೀಡುವ ಎಲ್ಲ ಬ್ಯಾಂಕುಗಳ ವಿವರಗಳನ್ನು ನೀಡಲಾಗಿದ್ದು, ಫಾರ್ಮ್ ಅನ್ನು ನೀವು ಆನ್‌ಲೈನ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಕೆ ಹೇಗೆ?

ಸಾಲದ ಅರ್ಜಿಯನ್ನು https://www.mudra.org.in/ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್ ಮಾಡಬೇಕು. ಶಿಶು ಸಾಲದ ಅರ್ಜಿ ಪ್ರತಿ, ತರುಣ್ ಮತ್ತು ಕಿಶೋರ್ ಸಾಲಕ್ಕೆ ಫಾರ್ಮ್ ಗಿಂತ ಭಿನ್ನವಿದ್ದು, ಸಾಲದ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳ ಮಾಹಿತಿಯನ್ನು ಒದಗಿಸಿ. ಹಾಗೇ ನೀವು ಎಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತೀರಿ ಎಂಬುದರ ಮಾಹಿತಿ ನೀಡಿ. ಒಬಿಸಿ, ಎಸ್‌ಸಿ / ಎಸ್‌ಟಿ ವಿಭಾಗಗಳ ಅಡಿಯಲ್ಲಿ ಬರುವ ಅರ್ಜಿದಾರರು ಜಾತಿ ಪ್ರಮಾಣಪತ್ರ ಸಲ್ಲಿಸಬೇಕು.

ಜೊತೆಗೆ 2 ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ನೀಡಿ. ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗೆ ಹೋಗಿ ಉಳಿದ ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ. ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಬಳಿಕ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮಿಂದ ಕೆಲಸದ ಬಗ್ಗೆ ಮಾಹಿತಿ ಪಡೆದು, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ, ನಿಮ್ಮ ಪಿಎಂಎಂವೈ ಸಾಲಕ್ಕೆ ಅನುಮೋದನೆ ನೀಡುತ್ತಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *