ಶಬರಿಮಲೆ ಅಯ್ಯಪ್ಪ ಸ್ವಾಮಿಯಿಂದ ನಡೆಯಿತು ಪವಾಡ; ಸ್ವಾಮಿ ದಯೆಯಿಂದ ಪುತ್ತೂರು ಯುವಕನಿಗೆ ಮಾತು ಬಂತು

Ayyappa Devotees Faith
Spread the love

ನ್ಯೂಸ್ ಆ್ಯರೋ: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತದೆ. ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಈಗ ಪುತ್ತೂರಿನಲ್ಲಿ ವರದಿಯಾಗಿದೆ. ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಯುವಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿಯೂ ಮತ್ತೆ ಶಬರಿಮಲೆಗೆ ಹೋಗಲು ಮಾಲೆ ಹಾಕಿರುವ ಆತ ಮಾತನಾಡಲು ಆರಂಭಿಸಿದ್ದಾನಂತೆ.

ಪುತ್ತೂರಿನ ಸಾಮೆತ್ತಡ್ಕದ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಓದುತ್ತಿರುವ ಪ್ರಸನ್ನ ವರ್ಷದ ಹಿಂದೆ ಮಾತನಾಡಲು ಬಹಳ ಕಷ್ಟಪಡುತ್ತಿದ್ದನಂತೆ. ಎಲ್ಲವನ್ನೂ ಕೈ ಸನ್ನೆಯ ಮೂಲಕವೇ ಹೇಳುತ್ತಿದ್ದ ಪ್ರಸನ್ನ ಈಗ ಮಾತನಾಡಲು ಆರಂಭಿಸಿದ್ದಾರಂತೆ. ಪ್ರಸನ್ನನಲ್ಲಾಗಿರುವ ಬದಲಾವಣೆಗೆ ಅಯ್ಯಪ್ಪ ಸ್ವಾಮಿಯ ದಯೆಯೇ ಕಾರಣ ಎನ್ನುವುದು ಹಿರಿಯ ಅಯ್ಯಪ್ಪ ಮಾಲಾಧಾರಿಗಳ ಅಭಿಪ್ರಾಯವಾಗಿದೆ.

ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಪ್ರಸನ್ನ ಕಳೆದ ವರ್ಷ ಐಯ್ಯಪ್ಪ ಮಾಲೆ ಹಾಕಿ 48 ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆಗೆ ಹೋಗಿದ್ದರಂತೆ. ಸುಮಾರು 48 ಮೈಲು ಕಾಡಿನ ದುರ್ಗಮ ಹಾದಿಯಲ್ಲಿ ಸಾಗಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದ ಪ್ರಸನ್ನ, ಈಗ ಮಾತನಾಡಲು ಆರಂಭಿಸಿದ್ದಾರಂತೆ. ಒಂದು ಶಬ್ದ ಉಚ್ಚರಿಸಲೂ ಚಡಪಡಿಸುತ್ತಿದ್ದ ಪ್ರಸನ್ನ ಇಂದು ಅಯ್ಯಪ್ಪ ಸ್ವಾಮಿಯ ಶರಣು ಹೇಳ್ತಿದ್ದಾರಂತೆ. ಪ್ರಸನ್ನ ಈಗ ಮಾತನಾಡುತ್ತಿದ್ದು, ಎಂಟು ಶರಣನ್ನು ಯಾವುದೇ ತೊಂದರೆಯಿಲ್ಲದೆ ಹೇಳುತ್ತಾರೆ.

ಮೊದಲ ಬಾರಿ ಮಾಲೆ‌ ಹಾಕಲು ಬಂದಾಗ ಕೈ ಸನ್ನೆಯ ಮೂಲಕವೇ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಈಗ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ‌ ತಂದಿದೆ. ಇಂತಹ‌ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ವಿವರಿಸುತ್ತಾರೆ. ಈ ಸಾಲಿಗೆ ಈಗ ಪ್ರಸನ್ನ ಕೂಡ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಭಕ್ತರ ಮಾತಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!