ರಾಜಕೀಯ ಗುರು BSY ವಿರುದ್ಧ ತೊಡೆ ತಟ್ಟಿದ ಸುಕುಮಾರ್ ಶೆಟ್ಟಿ – ಬೈಂದೂರು ಮಾಜಿ ಶಾಸಕ ಕಾಂಗ್ರೆಸ್ ಗೆ : ರಾಘವೇಂದ್ರ ಪಾಲಿಗೆ ಬಿಸಿ ತುಪ್ಪವಾದ ಈಶ್ವರಪ್ಪ, BMS..!!

ರಾಜಕೀಯ ಗುರು BSY ವಿರುದ್ಧ ತೊಡೆ ತಟ್ಟಿದ ಸುಕುಮಾರ್ ಶೆಟ್ಟಿ – ಬೈಂದೂರು ಮಾಜಿ ಶಾಸಕ ಕಾಂಗ್ರೆಸ್ ಗೆ : ರಾಘವೇಂದ್ರ ಪಾಲಿಗೆ ಬಿಸಿ ತುಪ್ಪವಾದ ಈಶ್ವರಪ್ಪ, BMS..!!

ನ್ಯೂಸ್ ಆ್ಯರೋ : ಈ ಬಾರಿಯ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿದೆ. ಅತ್ತ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು‌ ಸಜ್ಜಾದರೆ ಇತ್ತ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ರಾಜಕೀಯ ಗುರು ಬಿಎಸ್ ವೈ ವಿರುದ್ಧ ತೊಡೆ ತಟ್ಟಿದ ಬಿ ಎಂ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರಿದ್ದು, ಯಡ್ಡಿ ವಿರುದ್ಧವೇ ಗುಡುಗಿದ್ದಾರೆ. ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿಗೆ ಬೈಂದೂರು ವಿಧಾನಸಭಾ ಕ್ಷೇತ್ರ ಭಾರೀ ಮುನ್ನಡೆ ನೀಡಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಬಿಎಂ ಸುಕುಮಾರ ಶೆಟ್ಟಿ ಹೇಳಿಕೆ ನೀಡಿದ್ದು, ಈ ಹಿಂದೆ ಬೈಂದೂರಲ್ಲಿ ಭಾರಿ ಅಂತರದಿಂದ ರಾಘವೇಂದ್ರರನ್ನು ಗೆಲ್ಲಿಸಿದ್ದೇವೆ‌. ಕಳೆದ ಎರಡು ಚುನಾವಣೆಯಲ್ಲಿ 14 ಸಾವಿರ ಲೀಡ್ ಇತ್ತು. ಕಳೆದ ಬಾರಿ 75 ಸಾವಿರ ಲೀಡ್ ಕೊಟ್ಟಿದ್ದೇವೆ ಎಂದರು.

ಈ ಬಾರಿ ಬೈಂದೂರಿನಲ್ಲಿ 14 ಸಾವಿರಕ್ಕಿಂತ ಹೆಚ್ಚು ಮತ ಬಿಜೆಪಿಗೆ ಸಿಗಲ್ಲ. ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿಲ್ಲ. ಪ್ರಾಮಾಣಿಕರು ಪಕ್ಷ ಬಿಟ್ಟು ಹೊರಗೆ ಹೋಗುವಂತಾಗಿದೆ. ಚುನಾವಣೆ ನಡೆದು 9 ತಿಂಗಳಾದರೂ ನನ್ನನ್ನು ಯಾರು ಮಾತನಾಡಿಸಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು, ಹಾಗಾಗಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ‌. ಪ್ರಾಮಾಣಿಕವಾಗಿ ಕೆಲಸ ಮಾಡಿ ಕಾಂಗ್ರೆಸ್ಸಿಗೆ ಅತಿ ಹೆಚ್ಚು ಮತ ಬೀಳುವಂತೆ ಮಾಡುತ್ತೇನೆ‌. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೋರಾಟ ಇದೆ ಎಂದರು.

ಈಶ್ವರಪ್ಪ ಬಿಜೆಪಿ ಪಕ್ಷ ಕಟ್ಟಿದ ನಾಯಕ, ಅವರಿಗೂ ಬೇಸರವಾಗಿದೆ. ಈಶ್ವರಪ್ಪ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಈಶ್ವರಪ್ಪ ಹಿಂದುತ್ವದ ಮತ ಪಡೆದರೆ ರಾಘವೇಂದ್ರ ಮೂರನೇ ಸ್ಥಾನಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಈಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬಿಎಮ್ಎಸ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Related post

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…

Leave a Reply

Your email address will not be published. Required fields are marked *