Ghar Vapsi : ಮತ್ತೆ ಬಿಜೆಪಿಗೆ ಸೇರಿದ ಜಗದೀಶ್ ಶೆಟ್ಟರ್ – ಕಾಂಗ್ರೆಸ್ ಗೆ ಕೈಕೊಟ್ಟು ಕಮಲಕ್ಕೆ ಜೈ ಎಂದ ಮಾಜಿ ಸಿಎಂ..!!

Ghar Vapsi : ಮತ್ತೆ ಬಿಜೆಪಿಗೆ ಸೇರಿದ ಜಗದೀಶ್ ಶೆಟ್ಟರ್ – ಕಾಂಗ್ರೆಸ್ ಗೆ ಕೈಕೊಟ್ಟು ಕಮಲಕ್ಕೆ ಜೈ ಎಂದ ಮಾಜಿ ಸಿಎಂ..!!

ನ್ಯೂಸ್ ಆ್ಯರೋ : ಕಳೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಶೆಟ್ಟರ್ ಅವರು ಕೇಂದ್ರ ಸಚಿವರಾದ ಭೂಪೇಂದರ್ ಯಾದವ್, ರಾಜೀವ್ ಚಂದ್ರಶೇಖರ್, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದು, ಶೆಟ್ಟರ್ ಘರ್ ವಾಪ್ಸಿಯಾದಂತಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಕೇಂದ್ರ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ರಿಂದ ಸದಸ್ಯತ್ವದ ರಸೀದಿ ನೀಡಿ, ಬಿಜೆಪಿ ಶಾಲು ಹಾಗೂ ಹೂಗುಚ್ಛ ನೀಡಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಸ್ವಾಗತಿಸಲಾಯಿತು. ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷಕ್ಕೆ ಮರಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮತ್ತೆ ಬಿಜೆಪಿಗೆ ಸೇರ್ಪಡೆ ಆಗರುವುದು ಸಂತೋಷದ ಸಂಗತಿಯಾಗಿದೆ. ಈಗ ನಾನು ಕಾಂಗ್ರೆಸ್ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜಿನಾಮೆ ನೀಡುತ್ತಿದ್ದೇನೆ. ನಾನು ಈಗ ಕಾಂಗ್ರೆಸ್‌ ಪಕ್ಷದ ಎಂಎಲ್‌ಸಿ ಆಗಿದ್ದರಿಂದ ಕೂಡಲೇ ಆ ಸ್ಥಾನಕ್ಕೂ ರಾಜಿನಾಮೆ ನೀಡುತ್ತಿದ್ದೇನೆ. ಈ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಫೋನಿನ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ನಾನು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರಿಂದಲೂ ಲೋಕಸಭಾ ಚುನಾವಣೆ ಮುನ್ನೆಲೆಗೆ ಬಂದ ಇತ್ತೀಚಿನವರೆಗೂ 9 ತಿಂಗಳ ಅವಧಿಯಲ್ಲಿ ನಮ್ಮ ಕಾರ್ಯಕರ್ತರು, ಬಿಜೆಪಿ ನಾಯಕರು ಬಿಜೆಪಿ ಸೇರುತ್ತಾರೆ ಎಂಬ ಅಪೇಕ್ಷೆ ಇಟ್ಟುಕೊಂಡಿದ್ದರು. ಇನ್ನು ರಾಷ್ಟ್ರೀಯ ನಾಯಕರ ಆಪೇಕ್ಷೆ ಕೂಡ ಇತ್ತು. ಈ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿದಾಗ ಅವರು ಕೂಡ ಸಂತಸದಿಂದ ಸ್ವಾಗತ ಮಾಡಿ ಬಿಜೆಪಿ ಸೇರ್ಪಡೆಗೆ ಪ್ರೋತ್ಸಾಹಿಸಿದರು.

ಈಗ ಬಿಜೆಪಿ ಗೆ ಸೇರಿದ್ದು ಸಂತೋಷ ಆಗಿದೆ. ಎಮ್ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಡಿಕೆಶಿ ಅವರಿಗೂ ಕಾಂಗ್ರೆಸ್ ಪಕ್ಷ ರಾಜೀನಾಮೆ ಕೊಟ್ಟಿದ್ದೇನೆ. ಇವತ್ತು ದೇಶದ ಮುಂದೆ ಸವಾಲಾಗಿರುವುದು ದೇಶದ ರಕ್ಷಣೆ ಮುಖ್ಯವಾಗಿದೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಹಾಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಇದುವರೆಗೆ ಕಾಂಗ್ರೆಸ್ ಪಕ್ಷದ ಜೊತೆ ಇದ್ದಾಗ ನನಗೆ ಸಹಕಾರ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೂ ಧನ್ಯವಾದ ಹೇಳುವುದಾಗಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *