ತೆಲಂಗಾಣ ಕಾಂಗ್ರೆಸ್ ಜಯಭೇರಿಯ ಮಾಸ್ಟರ್ ಮೈಂಡ್ ಸುನಿಲ್ ಕನುಗೋಲು – “ರಾಜಕೀಯ ಮಾಂತ್ರಿಕ” ಹೆಣೆದ ಜಾಲ ಹೇಗಿತ್ತು ಗೊತ್ತಾ? KCR ಎಡವಿದ್ದೆಲ್ಲಿ?

ತೆಲಂಗಾಣ ಕಾಂಗ್ರೆಸ್ ಜಯಭೇರಿಯ ಮಾಸ್ಟರ್ ಮೈಂಡ್ ಸುನಿಲ್ ಕನುಗೋಲು – “ರಾಜಕೀಯ ಮಾಂತ್ರಿಕ” ಹೆಣೆದ ಜಾಲ ಹೇಗಿತ್ತು ಗೊತ್ತಾ? KCR ಎಡವಿದ್ದೆಲ್ಲಿ?

ನ್ಯೂಸ್ ಆ್ಯರೋ : ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸುನೀಲ್ ಕನುಗೋಲು ಅವರ ಕಾರ್ಯತಂತ್ರಕ್ಕೆ ಮತ್ತೆ ದೇಶದ ರಾಜಕೀಯ ಪಡಸಾಲೆ ಬೆಚ್ಚಿಬಿದ್ದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಜಯ ಗಳಿಸುವಲ್ಲಿ ಸುನೀಲ್ ಅವರ ಕಾರ್ಯತಂತ್ರ ಪ್ರಮುಖವಾಗಿತ್ತು. ಇದೀಗ ತೆಲಂಗಾಣದಲ್ಲೂ ತಮ್ಮ ಜಾಣ್ಮೆಯನ್ನು ಸುನೀಲ್ ಅವರು ತೋರಿಸಿಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರು ಸುನೀಲ್ ಕನುಗೋಲು ಅವರನ್ನು ಹೈದರಾಬಾದ್ ಬಳಿಯ ತಮ್ಮ ಫಾರ್ಮ್‌ಹೌಸ್‌ ಗೆ ಚುನಾವಣೆಗಳನ್ನು ನಿರ್ವಹಿಸಲು ಅವರನ್ನು ನೇಮಿಸಿಕೊಳ್ಳುವ ಸಾಧ್ಯತೆಯನ್ನು ಚರ್ಚಿಸಲು ಆಹ್ವಾನಿಸಿದ್ದರು. ತಮಿಳುನಾಡು ಚುನಾವಣೆಗೆ ಕೆಲಸ ಮುಗಿಸಿದ್ದ ಕನುಗೋಲು ಹೊಸ ಹುದ್ದೆ ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದು, ಸಭೆಯು ದಿನಗಟ್ಟಲೆ ನಡೆದಿತ್ತು.

ಆದರೆ ಕೊನೆಗೆ ಕೆಸಿಆರ್ ಪರ ಕೆಲಸ ಮಾಡದಿರಲು ಕನುಗೋಲು ನಿರ್ಧರಿಸಿದ್ದರು. ಇದಾಗಿ ಕೆಲವೇ ದಿನಗಳ ನಂತರ, ಅಚ್ಚರಿಯೆಂಬಂತೆ ಎಐಸಿಸಿಯ ಚುನಾವಣಾ ತಂತ್ರ ಸಮಿತಿಯ ಅಧ್ಯಕ್ಷರಾಗಿ ಕನುಗೋಲು ನೇಮಕವಾದರು.

ಕೆಸಿಆರ್ ಅಂದು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿರಬಹುದು, ಮತ್ತೊಂದೆಡೆ ತೆಲಂಗಾಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಿದ ಸುನಿಲ್ ಕನುಗೋಲು ಮತ್ತೊಂದು ಪ್ರಾಜೆಕ್ಟ್ ಗೆ ಸಿದ್ಧತೆ ನಡೆಸುತ್ತಿರಬಹುದು.

ಕಾಂಗ್ರೆಸ್ ಸೇರಿದ ನಂತರ ಕನುಗೋಲು ತೆಲಂಗಾಣ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡರಲ್ಲೂ ಕೆಲಸ ಮಾಡಲು ಪ್ರಾರಂಭಿಸಿದರು. ಕಳೆದ ಮೇನಲ್ಲಿ ಅವರು ತಮ್ಮ ತವರು ರಾಜ್ಯವಾದ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆ ಗೆಲುವು ತಂದುಕೊಡುವಲ್ಲಿ ತುಂಬಾನೇ ಶ್ರಮವಹಿಸಿದ್ದರು.

ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತುಂಬಾನೇ ಕೆಳಮಟ್ಟಕ್ಕೆ ಕುಸಿದಿತ್ತು. ಪಕ್ಷದೊಳಗೆ ಭರವಸೆಯ ಕೊರತೆ, ಒಗ್ಗಟ್ಟು ಎಲ್ಲವೂ ಸವಾಲಾಗಿತ್ತು. ಕನುಗೋಲು ಇದನ್ನು ಸವಾಲಾಗಿ ಸ್ವೀಕರಿಸಿ ಕೆಸಿಆರ್ ಅವರನ್ನು ಸೋಲಿಸಬಹುದು ಎಂದು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯರಿಗೆ ಮನವರಿಕೆ ಮಾಡಿದ್ದರು.

ಎರಡು ವರ್ಷಗಳ ಹಿಂದೆ ತೆಲಂಗಾಣದ ರಾಜಕೀಯ ಆಟದಲ್ಲಿ ಕಾಂಗ್ರೆಸ್ ಎಲ್ಲಿಯೂ ಇರಲಿಲ್ಲ. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳುವತ್ತ ಬಿಜೆಪಿ ಮಾಡಿತು.

ಕನುಗೋಲು ಅವರು ಸದ್ದಿಲ್ಲದೆ ಕೆಲಸ ಮಾಡುತ್ತಾ ಕೆಸಿಆರ್ ರನ್ನು ಹಿಮ್ಮೆಟ್ಟಿಸಲು ನೋಡಿದರು. ಎಚ್ಚೆತ್ತ ಕೆಸಿಆರ್ ಹೈದರಾಬಾದ್‌ನಲ್ಲಿರುವ ಕನುಗೋಲು ಕಚೇರಿ ಮೇಲೆ ದಾಳಿ ನಡೆಸಿ ಎಲ್ಲಾ ಉಪಕರಣಗಳನ್ನು ವಶಪಡಿಸಿಕೊಂಡರು. ಕನುಗೋಲು ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಇದಕ್ಕೆ ಬಗ್ಗೆ ಕನುಗೋಲು ಹೊಸ ಕಛೇರಿಯನ್ನು ಆರಂಭಿಸಿ ತಮ್ಮ ಕೆಲಸ ಮುಂದುವರೆಸಿದರು.

ಯಾವುದೇ ಪ್ರಚಾರವನ್ನು ಬಯಸದೇ ಸದ್ದಿಲ್ಲದೆಯೇ ಕೆಲಸ ಮಾಡಿ ಕನುಗೋಲು ಈಗ ಕಾಂಗ್ರೆಸ್‌ ನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಕರ್ನಾಟಕ ಚುನಾವಣೆ ಕಠಿಣವಾಗಿತ್ತು. ಆದರೆ ತೆಲಂಗಾಣ ಹೆಚ್ಚು ಸಂಕೀರ್ಣವಾಗಿತ್ತು. ಬಿಜೆಪಿಗೆ ಹೆಚ್ಚಿನ ಮತ ಹಂಚಿಕೆಯಾಗುವುದು ಕೆಸಿಆರ್ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎಂದು ಅರಿತುಕೊಂಡ ಕನುಗೋಲು ಮೊದಲು ರಾಜ್ಯದಲ್ಲಿ ಬಿಜೆಪಿ ಪ್ರಭಾವವನ್ನು ಮಿತಿಗೊಳಿಸಲು ಪ್ರಯತ್ನಿಸಿದರು. ನಂತರ, ಅವರು ತೆಲಂಗಾಣದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ವೈಎಸ್ಆರ್ ಅವರ ಪುತ್ರಿ ವೈಎಸ್ ಶರ್ಮಿಳಾ ಅವರನ್ನು ನೋಡಿಕೊಂಡರು.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೂಡ ತೆಲಂಗಾಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಕಣಗೋಲು ಅವರ ಕೆಲಸ ಸುಲಭವಾಯಿತು. ಬಿಜೆಪಿಯನ್ನು ಕೆಳಕ್ಕೆ ತಳ್ಳಿ, ಮತಗಳೂ ಛಿದ್ರವಾಗುವುದನ್ನು ತಡೆಯುವ ಮೂಲಕ ಕೆಸಿಆರ್ ಜತೆ ನೇರ ಹೋರಾಟ ನಡೆಸಿದರು.

ಸುನಿಲ್ ಕನುಗೋಲು ಅವರ ತಂತ್ರಗಾರಿಕೆಗೆ ಇದೀಗ ಉತ್ತಮ ಫಲ ಸಿಕ್ಕಿದೆ. ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಜತೆ ಭಾರತ್ ಜೋಡೋ ಯಾತ್ರೆಗೆ ಕಾರ್ಯತಂತ್ರ ರೂಪಿಸಿದ ಕೀರ್ತಿಯೂ ಕನುಗೋಲು ಅವರಿಗೆ ಸಲ್ಲುತ್ತದೆ.

ಕನುಗೋಲು ಅವರ ಹಿನ್ನೆಲೆ: ಕರ್ನಾಟಕದ ಬಳ್ಳಾರಿಯವರಾದ ಸುನಿಲ್ ಕನುಗೋಲು ಅಮೆರಿಕದಲ್ಲಿ ಉನ್ನತ ಶಿಕ್ಷಣ ಮುಗಿಸಿ ಕೆಲಸ ಮಾಡುತ್ತಿದ್ದರು.

ಭಾರತಕ್ಕೆ ಬಂದ ನಂತರ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ ಸಂಸ್ಥೆಯನ್ನು ಮುನ್ನಡೆಸಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಕಾರ್ಯತಂತ್ರ ರೂಪಿಸಿದವರಲ್ಲಿ ಇವರೂ ಒಬ್ಬರು. 2017 ರ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಅತ್ಯಂತ ಯಶಸ್ವಿಯಾಗಿ ಬಿಜೆಪಿ ಪ್ರಚಾರವನ್ನು ನಿಭಾಯಿಸಿದ್ದಾರೆ.

ಎಂಕೆ ಸ್ಟಾಲಿನ್ ಅವರೊಂದಿಗೆ 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅದರ ಪ್ರಚಾರದ ಮೇಲ್ವಿಚಾರಣೆ ಮಾಡಿದರು, ಇದರಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಒಟ್ಟು 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿತು. ಅವರ ಒಂದು ಕಾಲದ ಸಹೋದ್ಯೋಗಿ ಐಪಿಎಸಿಯ ಪ್ರಶಾಂತ್ ಕಿಶೋರ್, ಪ್ರಚಾರ ಕಾರ್ಯತಂತ್ರ ರೂಪಿಸಲು ಡಿಎಂಕೆ ಪಾಳಯಕ್ಕೆ ಸೇರಿದ ನಂತರ, ಕನುಗೋಲು ಸ್ಟಾಲಿನ್ ಕ್ಯಾಂಪ್ ತೊರೆದು ಬೆಂಗಳೂರಿಗೆ ತೆರಳಿದರು.

ತೆರೆಮರೆಯಲ್ಲಿಯೇ ಕೆಲಸ ಮಾಡುವ ಸುನಿಲ್ ಕನುಗೋಲು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರ ಪಡೆಯುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *