ಸೆಪ್ಟೆಂಬರ್ ತಿಂಗಳಲ್ಲಿ 16 ದಿನ ಬ್ಯಾಂಕ್ ಗಳಿಗೆ ರಜೆ – ಸರಣಿ ಹಬ್ಬಗಳ ನಡುವೆ ಸಾರ್ವತ್ರಿಕ ರಜೆಯೂ ಹೆಚ್ಚು..!

ಸೆಪ್ಟೆಂಬರ್ ತಿಂಗಳಲ್ಲಿ 16 ದಿನ ಬ್ಯಾಂಕ್ ಗಳಿಗೆ ರಜೆ – ಸರಣಿ ಹಬ್ಬಗಳ ನಡುವೆ ಸಾರ್ವತ್ರಿಕ ರಜೆಯೂ ಹೆಚ್ಚು..!

ನ್ಯೂಸ್‌ ಆ್ಯರೋ : ಆಷಾಢ ಮುಗಿದು ಶ್ರಾವಣ ಶುರುವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ಇದೀಗ ಆರ್​ಬಿಐ ಪ್ರಕಟಿಸಿರುವ ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 16 ದಿನ ಬ್ಯಾಂಕ್‌ಗಳಿಗೆ ರಜೆ ಇದೆ ಎಂದು ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್​ನಲ್ಲಿ ಭಾರತದಾದ್ಯಂತ ಒಟ್ಟು 16 ದಿನಗಳ ಕಾಲ ಬ್ಯಾಂಕ್ ರಜಾವಿದ್ದರೆ ಕರ್ನಾಟಕದಲ್ಲಿ ಒಟ್ಟು 8 ದಿನ ಬ್ಯಾಂಕ್ ರಜೆ ಇದೆ. ಇದರಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳು ಒಳಗೊಂಡಿವೆ. ಈ ಲೇಖನದಲ್ಲಿ ಡಿಸೆಂಬರ್‌ ವರೆಗೆ ಒಟ್ಟು ಎಷ್ಟು ಬ್ಯಾಂಕ್ ರಜೆ ಎಂಬುದರ ಬಗ್ಗೆ ತಿಳಿಸಲಾಗಿದೆ.

16 ದಿನಗಳ ರಜೆಯಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳೂ ಸೇರಿವೆ. ಪ್ರಾದೇಶಿಕ ವಿಶೇಷ ರಜೆಗಳಿದ್ದು, ಅದು ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ, ಒಂದೊಂದು ಪ್ರದೇಶದಲ್ಲಿ ರಜಾ ದಿನಗಳ ಸಂಖ್ಯೆ ಭಿನ್ನವಾಗಿರಬಹುದು. ಆ ತಿಂಗಳಲ್ಲಿ ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ ಮತ್ತು ವಿನಾಯಕ ಚತುರ್ಥಿ ಪ್ರಮುಖ ಹಬ್ಬಗಳಾಗಿದ್ದು, ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ದಿನ ಅದರ ಆಚರಣೆ ಇದೆ. ಆರ್​ಬಿಐ ಕ್ಯಾಲಂಡರ್​ನಲ್ಲಿ 16 ದಿನ ರಜೆ ಇದ್ದರೂ ಎಂಟು ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಭಾರತದಲ್ಲಿ 2023ರ ಸೆಪ್ಟೆಂಬರ್ ತಿಂಗಳಲ್ಲಿ ಇರುವ ರಜಾ ದಿನಗಳ ಪಟ್ಟಿ

  • 2023ರ ಸೆಪ್ಟೆಂಬರ್ 3: ಭಾನುವಾರ
  • 2023ರ ಸೆಪ್ಟೆಂಬರ್ 6: ಶ್ರೀಕೃಷ್ಣ ಜನ್ಮಾಷ್ಟಮಿ (ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 7: ಜನ್ಮಾಷ್ಟಮಿ, ಶ್ರೀ ಕೃಷ್ಣ ಅಷ್ಟಮಿ (ಅಹ್ಮದಾಬಾದ್, ಚಂದೀಗಡ, ಡೆಹ್ರಾಡೂನ್, ಗ್ಯಾಂಗ್​ಟೋಕ್, ತೆಲಂಗಾಣ, ಜೈಪುರ್, ಜಮ್ಮು, ಕಾನಪುರ್, ಲಕ್ನೋ, ರಾಯಪುರ್, ರಾಂಚಿ, ಸಿಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 9: ಎರಡನೇ ಶನಿವಾರ
  • 2023ರ ಸೆಪ್ಟೆಂಬರ್ 10: ಭಾನುವಾರ
  • 2023ರ ಸೆಪ್ಟೆಂಬರ್ 17: ಭಾನುವಾರ
  • 2023ರ ಸೆಪ್ಟೆಂಬರ್ 18: ವರಸಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ (ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 19: ಗಣೇಶ ಚತುರ್ಥಿ (ಅಹ್ಮದಾಬಾದ್, ಬೇಲಾಪುರ್, ಭುನವೇಶ್ವರ್, ಮುಂಬೈ, ನಾಗಪುರ್ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 20: ಗಣೇಶ ಚತುರ್ಥಿ ಎರಡನೇ ದಿನ (ಕೊಚ್ಚಿ) ಮತ್ತು ನುವಾಖಾಯ್ (ಒಡಿಶಾ)
  • 2023ರ ಸೆಪ್ಟೆಂಬರ್ 22: ಶ್ರೀ ನಾರಾಯಣಗುರು ಸಮಾಧಿ ದಿನ (ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂ)
  • 2023ರ ಸೆಪ್ಟೆಂಬರ್ 23: ನಾಲ್ಕನೇ ಶನಿವಾರ ಮತ್ತು ಮಹಾರಾಜ ಹರಿಸಿಂಗ್ ಜನ್ಮದಿನ (ಜಮ್ಮು ಮತ್ತು ಕಾಶ್ಮೀರ)
  • 2023ರ ಸೆಪ್ಟೆಂಬರ್ 24: ಭಾನುವಾರ
  • 2023ರ ಸೆಪ್ಟೆಂಬರ್ 25: ಶ್ರೀಮಂತ್ ಶಂಕರದೇವರ ಜನ್ಮೋತ್ಸವ (ಗುವಾಹಟಿಯಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 27: ಪ್ರವಾದಿ ಮೊಹಮ್ಮದ್ ಜನ್ಮದಿನ (ಮಿಲಾದ್ ಇ ಷರೀಫ್) – ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
  • 2023ರ ಸೆಪ್ಟೆಂಬರ್ 28: ಈದ್ ಮಿಲಾದ್ (ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಕಾನಪುರ್, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್ ರಜೆ)
  • 2023ರ ಸೆಪ್ಟೆಂಬರ್ 29: ಇಂದ್ರಜಾತ್ರ, ಈದ್ ಇ ಮಿಲಾದ್ ಉಲ್ ನಬಿ (ಗ್ಯಾಂಗ್​ಟಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ)

ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳು ಸಾರ್ವತ್ರಿಕವಾಗಿದ್ದು ದೇಶದ ಎಲ್ಲಾ ಬ್ಯಾಂಕುಗಳು ಬಂದ್ ಆಗಿರುತ್ತವೆ. ಇನ್ನು, ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಹಬ್ಬಗಳೂ ಇವೆ.

ಬೆಂಗಳೂರಿನಲ್ಲಿ 2023ರ ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ.

  • ಸೆಪ್ಟೆಂಬರ್ 3: ಭಾನುವಾರ
  • ಸೆಪ್ಟೆಂಬರ್ 9: ಎರಡನೇ ಶನಿವಾರ
  • ಸೆಪ್ಟೆಂಬರ್ 10: ಭಾನುವಾರ
  • ಸೆಪ್ಟೆಂಬರ್ 17: ಭಾನುವಾರ
  • ಸೆಪ್ಟೆಂಬರ್ 18: ವಿನಾಯಕ ಚತುರ್ಥಿ
  • ಸೆಪ್ಟೆಂಬರ್ 23: ನಾಲ್ಕನೇ ಶನಿವಾರ
  • ಸೆಪ್ಟೆಂಬರ್ 24: ಭಾನುವಾರ
  • ಸೆಪ್ಟೆಂಬರ್ 28: ಈದ್ ಮಿಲಾದ್

2023ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ಇರುವ ಸಾರ್ವತ್ರಿಕ ಬ್ಯಾಂಕ್ ರಜೆಗಳು

  • ಅಕ್ಟೋಬರ್ 1: ಮಹಾತ್ಮ ಗಾಂಧಿ ಜಯಂತಿ
  • ಅಕ್ಟೋಬರ್ 8: ಭಾನುವಾರ
  • ಅಕ್ಟೋಬರ್ 14: ಎರಡನೇ ಶನಿವಾರ
  • ಅಕ್ಟೋಬರ್ 15: ಭಾನುವಾರ
  • ಅಕ್ಟೋಬರ್ 22: ಭಾನುವಾರ
  • ಅಕ್ಟೋಬರ್ 24: ದಸರಾ
  • ಅಕ್ಟೋಬರ್ 28: ನಾಲ್ಕನೇ ಶನಿವಾರ
  • ಅಕ್ಟೋಬರ್ 29: ಭಾನುವಾರ
  • ನವೆಂಬರ್ 5: ಭಾನುವಾರ
  • ನವೆಂಬರ್ 11: ಎರಡನೇ ಶನಿವಾರ
  • ನವೆಂಬರ್ 12: ಭಾನುವಾರ
  • ನವೆಂಬರ್ 14: ದೀಪಾವಳಿ
  • ನವೆಂಬರ್ 19: ಭಾನುವಾರ
  • ನವೆಂಬರ್ 25: ನಾಲ್ಕನೇ ಶನಿವಾರ
  • ನವೆಂಬರ್ 26: ಭಾನುವಾರ
  • ನವೆಂಬರ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 3: ಭಾನುವಾರ
  • ಡಿಸೆಂಬರ್ 9: ಎರಡನೇ ಶನಿವಾರ
  • ಡಿಸೆಂಬರ್ 10: ಭಾನುವಾರ
  • ಡಿಸೆಂಬರ್ 17: ಭಾನುವಾರ
  • ಡಿಸೆಂಬರ್ 23: ನಾಲ್ಕನೇ ಶನಿವಾರ
  • ಡಿಸೆಂಬರ್ 24: ಭಾನುವಾರ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ
  • ಡಿಸೆಂಬರ್ 31: ಭಾನುವಾರ

ಸಾಲು ಸಾಲು ರಜೆಗಳಿರುವ ಕಾರಣ ಬ್ಯಾಂಕ್ ವ್ಯವಹಾರ ನಡೆಸುವವರು ರಜೆಗಳನ್ನು ನೆನಪಿನಲ್ಲಿಟ್ಟುಕೊಂಡು ಬ್ಯಾಂಕ್ ಹೋಗುವುದು ಉತ್ತಮ. ಅದಲ್ಲದೆ ವ್ಯವಹಾರಕ್ಕೆ ಬೇಕಾಗುವಷ್ಟು ಹಣವನ್ನು ತೆಗೆದಿಟ್ಟುಕೊಳ್ಳುವುದು ಒಳ್ಳೆಯದು.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *