ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ – ಮೂಲ ನಾಗ ಸನ್ನಿಧಿ, ವಾಸುಕಿ ನಾಗ ಸನ್ನಿಧಿಯಲ್ಲಿ ಅಭಿಷೇಕಾದಿಗಳು ಆರಂಭ
ನ್ಯೂಸ್ ಆ್ಯರೋ : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.9ರಂದು ನಾಗರ ಪಂಚಮಿ ವಿಶೇಷ ಕಾರ್ಯಕ್ರಮ ಬೆಳಿಗ್ಗೆ ಗಂಟೆ 5.30ಕ್ಕೆ ಆರಂಭಗೊಂಡಿದೆ.
ಬೆಳಿಗ್ಗೆ ಗಂಟೆ 5.30ಕ್ಕೆ ದೇವರಮಾರು ಗದ್ದೆಯಲ್ಲಿರುವ ಮೂಲ ನಾಗಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ವೈದಿಕತ್ವದಲ್ಲಿ ಅಭಿಷೇಕಗಳು ನಡೆದ ಬಳಿಕ ನಾಗತಂಬಿಲ ನಡೆಯಿತು.
ಇದೇ ಸಂದರ್ಭ ಬೆಳಿಗ್ಗೆ ಗಂಟೆ 6ರಿಂದ ದೇವಳದ ಎದುರು ಇರುವ ವಾಸುಕೀ ನಾಗನ ಗುಡಿಯಲ್ಲಿ ಅಭಿಷೇಕಗಳು ಆರಂಭಗೊಂಡಿತು. ಭಕ್ತರು ಸರದಿ ಸಾಲಿನಲ್ಲಿ ಬಂದು ನಾಗ ದೇವರಿಗೆ ಹಾಲು, ಸೀಯಾಳ ಸಮರ್ಪಣೆ ಮಾಡಿದರು.
ನಾಗರಪಂಚಮಿಯ ದಿನವಾದ ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಾಗದೇವರ ಪೂಜಾ ಕಾರ್ಯಗಳು ಆರಂಭವಾಗಿದ್ದು, ಕುಟುಂಬದ ಮೂಲಕ್ಷೇತ್ರಗಳತ್ತ ಸಾರ್ವಜನಿಕರು ತೆರಳುತ್ತಿದ್ದು ಜಿಲ್ಲಾದ್ಯಂತ ಜಾತ್ರಾ ಸಂಭ್ರಮ ಕಂಡುಬರುತ್ತಿದೆ.
Leave a Comment