ಸುಡು ಬಿಸಿಲಿಗೆ ನಿಮ್ಮ ಟ್ಯಾಂಕ್ ನೀರು ಬಿಸಿಯಾಗ್ತಿದ್ಯಾ? – ಚಿಂತೆ ಬಿಟ್ಟು ಈ ಸಿಂಪಲ್ ಟ್ರಿಕ್ಸ್ ಬಳಸಿ

ಸುಡು ಬಿಸಿಲಿಗೆ ನಿಮ್ಮ ಟ್ಯಾಂಕ್ ನೀರು ಬಿಸಿಯಾಗ್ತಿದ್ಯಾ? – ಚಿಂತೆ ಬಿಟ್ಟು ಈ ಸಿಂಪಲ್ ಟ್ರಿಕ್ಸ್ ಬಳಸಿ

ನ್ಯೂಸ್ ಆ್ಯರೋ‌ : ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರೂ ತಾಪಮಾನ ಕಡಿಮೆಯಾಗಿಲ್ಲ. ಮಿತಿ ಮೀರಿದ ಬಿಸಿಲಿನ ಝಳಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ಜೊತೆಗೆ ಇನ್ನು 5 ವರ್ಷ ವಾತಾವರಣದ ಉಷ್ಣತೆ ಹೆಚ್ಚಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಬಿಸಿಲಿನ ಇನ್ನೊಂದು ಸಮಸ್ಯೆ ಎಂದರೆ ಈ ಬಿಸಿಲಿನ ಬೇಗೆಗೆ ಟ್ಯಾಂಕ್ ನಲ್ಲಿರುವ ನೀರು ಕೂಡ ಬೆಚ್ಚಗಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಟ್ಯಾಂಕ್ ನಿರು ಸದಾ ತಂಪಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೆಣಬಿನ ಚೀಲ

ಸೆಣಬಿನ ಚೀಲ ಯಾರಿಗೆ ಗೊತ್ತಿಲ್ಲ ಹೇಳಿ? ಮನೆಯಲ್ಲಿ ಇಲ್ಲದಿದ್ದರೆ ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಈ ಸೆಣಬಿನ ಚೀಲವನ್ನು ಚೆನ್ನಾಗಿ ನೆನೆಸಿ ಟ್ಯಾಂಕ್ ಸುತ್ತಲೂ ಕಟ್ಟಿ. ಇದರಿಂದ ನೀರು ಬೇಗ ಬಿಸಿಯಾಗುವುದಿಲ್ಲ.

ಬಟ್ಟೆ

ಸೂರ್ಯನ ಬೆಳಕು ನೇರವಾಗಿ ಟ್ಯಾಂಕ್ ಮೇಲೆ ಬೀಳುವುದರಿಂದ ನೀರು ಬೇಗ ಬಿಸಿಯಾಗುತ್ತದೆ. ಆದ್ದರಿಂದ ಟ್ಯಾಂಕ್ ಸುತ್ತಲೂ ಬಟ್ಟೆ ಕಟ್ಟಿ ಟ್ಯಾಂಕ್ ಮೇಲೆ ನೇರವಾಗಿ ಸೂರ್ಯ ರಶ್ಮಿ ಬೀಳದಂತೆ ನೋಡಿಕೊಳ್ಳಿ.

ಥರ್ಮಾಕೋಲ್

ಥರ್ಮಾಕೋಲ್ ಶಾಖವನ್ನು ದಾಟಿಸುವುದಿಲ್ಲ. ಹೀಗಾಗಿ ಟ್ಯಾಂಕ್ ಸುತ್ತಲೂ ಥರ್ಮಾಕೋಲ್ ಅಳವಡಿಸಿ ಅದನ್ನು ಹಗ್ಗದ ಮೂಲಕ ಕಟ್ಟಿ. ಇದರಿಂದಲೂ ನೀವು ಟ್ಯಾಂಕ್ ನೀರು ಬಿಸಿಯಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *