“ಇದು ಮಾಜಿ ಪತ್ನಿ ಬಟ್ಟೆ, ಮುಟ್ಟಿದ್ಮೇಲೆ ಪ್ಲೀಸ್ ಕೈ ತೊಳೆಯಿರಿ”; ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ವಿಚಿತ್ರ ಬ್ಯಾಗ್

ನ್ಯೂಸ್ ಆ್ಯರೋ: ಬೆಂಗಳೂರು ನಗರದ ಕಸದ ತೊಟ್ಟಿಯಲ್ಲೊಂದು ವಿಚಿತ್ರ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ಮೇಲೆ ಮುಟ್ಟಿದ್ಮೇಲೆ ದಯವಿಟ್ಟು ಕೈ ತೊಳೆಯಿರಿ ಎಂದು ಬರೆಯಲಾಗಿದೆ. ಆರಂಭದಲ್ಲಿ ಈ ಬರಹ ಕಂಡು ಜನರು ಶಾಕ್ ಆಗಿದ್ದರು.
ಹೌದು. . ಬೆಂಗಳೂರಿನ ಉತ್ತರಹಳ್ಳಿ, ಬನಂಶಂಕರಿಯಲ್ಲಿ ಈ ರೀತಿಯಲ್ಲಿ ಬರಹದ ಪ್ಲಾಸ್ಟಿಕ್ ಕವರ್ ಪತ್ತೆಯಾಗಿದೆ. ಈ ಪ್ಲಾಸ್ಟಿಕ್ ಕವರ್ ಮೇಲಿನ ಬರಹ ಕಂಡು ಸ್ಥಳೀಯ ನಿವಾಸಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟು ಮೂರು ಬ್ಯಾಗ್‌ಗಳ ಮೇಲೆ ಈ ರೀತಿಯ ಬರಹ ಬರೆಯಲಾಗಿದೆ.
ಇದು ಸುಳ್ಳು ಕೇಸ್ ಹಣ ಪಡೆದ, ಮಾಜಿ ಪತ್ನಿಯ ಹೊಲಸು ಬಟ್ಟೆ. ಮುಟ್ಟಿದ್ಮೇಲೆ ದಯವಿಟ್ಟು ಕೈ ತೊಳೆಯಿರಿ ಎಂದು ಗಂಡ ಬರೆದಿದ್ದಾನೆ. ಬ್ಯಾಗ್‌ನಲ್ಲಿ ಮಹಿಳೆಯ ಬಟ್ಟೆಗಳು ಸಿಕ್ಕಿವೆ. ಮತ್ತೊಂದು ಬ್ಯಾಗ್ ಮೇಲೆ ದುಡ್ಡು ಮಾಡಲು ಮದುವೆಯಾದ ಮಹಿಳೆಯ ಬಟ್ಟೆ ಎಂದು ಬರೆಯಲಾಗಿದೆ.
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣದ ಬಳಿಕ ಹಲವರು ಪತ್ನಿಯರಿಂದ ತಮಗಾಗುತ್ತಿರುವ ನೋವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆರಂಭಿಸಿದ್ದರು. ಬಹುಶಃ ಪತ್ನಿಯಿಂದ ಡಿವೋರ್ಸ್ ಪಡೆದ ನಂತರ ಪುರುಷರು ಮನೆಯಲ್ಲಿರೋ ಬಟ್ಟೆಗಳನ್ನು ಕಸದ ತೊಟ್ಟಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.
Leave a Comment