ಸೈಫ್ ಅಲಿ ಖಾನ್ಗೆ ಚಾಕುವಿನಿಂದ ಇರಿದ ಕೇಸ್ಗೆ ಟ್ವಿಸ್ಟ್; ಮತ್ತೊಂದು ಸ್ಫೋಟಕ ಸತ್ಯ ಬಯಲು
ನ್ಯೂಸ್ ಆ್ಯರೋ: ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ ಈ ಆರೋಪಿಗೂ, ಪ್ರಕರಣಕ್ಕೂ ಸಂಬಂಧವಿಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದು ತನಿಖೆ ಮುಂದುವರಿದಿದೆ. ಈ ಮಧ್ಯೆ ನಟ ಸೈಫ್ ಅಲಿ ಖಾನ್ ಸಾವಿನ ದವಡೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಚೇತರಿಸಿಕೊಳ್ತಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಅದ್ಯಾಕೋ ಸೇಫ್ ಸಿಟಿಯಲ್ಲ ಅನ್ನೋದು ಭಾಸವಾಗ್ತಿದೆ. ಇತ್ತೀಚೆಗೆ ರಾಜಕೀಯ ಗಣ್ಯರು, ಸೆಲೆಬ್ರಿಟಿಗಳ ಮೇಲೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಎನ್ಸಿಪಿಯ ಬಾಬಾ ಸಿದ್ಧಿಕಿ, ನಟ ಸಲ್ಮಾನ್ ಖಾನ್ ಮೇಲೆ ದಾಳಿ ಬಳಿಕ ಸದ್ಯ ನಟ ಸೈಫ್ ಅಲಿ ಖಾನ್ ಮೇಲಿನ ಡೆಡ್ಲಿ ಅಟ್ಯಾಕ್ ಬೆಚ್ಚಿ ಬೀಳಿಸಿದೆ.
ಬಾಲಿವುಡ್ ನವಾಬ ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಘಟನೆ ನಡೆದ 30 ಗಂಟೆಗಳ ಬಳಿಕ ಮುಂಬೈನ ಬಾಂದ್ರಾ ಪೊಲೀಸರು ಓರ್ವ ಶಂಕಿತ ಆರೋಪಿಯನ್ನ ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. ಈತನೇ ಸೈಫ್ ಅಲಿಖಾನ್ ಕೇಸ್ಗೆ ಸಂಬಂಧಿಸಿದ ಆರೋಪಿ ಎನ್ನಲಾಗ್ತಿತ್ತು. ಆದ್ರೆ ಆತ ಬೇರೊಂದು ಕೇಸ್ನ ಆರೋಪಿ ಎನ್ನಲಾಗ್ತಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಬಂಧಿತ ಆರೋಪಿಗೂ ಈ ಕೇಸ್ಗೆ ಸಂಬಂಧಪಟ್ಟವನಲ್ಲ ಅಂತ ಬಾಂದ್ರಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಇತ್ತ ಗಾಯಗೊಂಡಿರುವ ಸೈಫ್ ಅಲಿ ಖಾನ್ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು ಚೇತರಿಸಿಕೊಳ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ದಾಳಿ ನಡೆಸಿರುವ ಆರೋಪಿ ನಟ ಶಾರೂಖ್ ಖಾನ್ ಮನೆಗೂ ನುಗ್ಗಲು ಯತ್ನಿಸಿದ್ದ ಎನ್ನಲಾಗಿದೆ. ಕಳೆದ ಜನವರಿ 14ರಂದು ಮುಂಬೈನ ಶಾರೂಖ್ ಖಾನ್ ಮನ್ನತ್ ನಿವಾಸದ ಬಳಿ ಗಲಾಟೆ ನಡೆದಿತ್ತು. ಆತ ಶಾರೂಖ್ ಖಾನ್ ಮನೆಗೆ ನುಗ್ಗಲು ಯತ್ನಿಸಿದ್ದೇಕೆ ಅನ್ನೋದು ಇನ್ನೂ ನಿಗೂಢವಾಗಿ ಉಳಿದಿದೆ.
Leave a Comment