ಬೆಂಗಳೂರಿನಲ್ಲಿದೆ ₹ 20 ಕೋಟಿ ಬೆಲೆಯ ನಾಯಿ– ಶ್ವಾನ ಸ್ಪರ್ಧೆಯಲ್ಲಿ 32 ಪದಕ ಬಾಚಿಕೊಂಡ ಹೈದರ್‌

ಬೆಂಗಳೂರಿನಲ್ಲಿದೆ ₹ 20 ಕೋಟಿ ಬೆಲೆಯ ನಾಯಿ– ಶ್ವಾನ ಸ್ಪರ್ಧೆಯಲ್ಲಿ 32 ಪದಕ ಬಾಚಿಕೊಂಡ ಹೈದರ್‌

ನ್ಯೂಸ್‌ಆ್ಯರೋ: ಕಡಬೊಮ್ ಕೆನ್ನೆಲ್ಸ್​ ಸಂಸ್ಥೆ ಮಾಲೀಕ ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರಿಗೆ ಶ್ವಾನಗಳೆಂದರೆ ಎಲ್ಲಿಲ್ಲದ ಪ್ರೀತಿ. ದೇಶ– ವಿದೇಶಗಳಿಂದ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ಅವರು ನಿಸ್ಸಿಮರು. ಇತ್ತೀಚೆಗೆ ಅವರು ಬರೋಬ್ಬರಿ ₹ 20 ಕೋಟಿಯ ನಾಯಿಯನ್ನು ಖರೀದಿಸಿ ಗಮನ ಸೆಳೆದಿದ್ದಾರೆ. ಸತೀಶ್​ ಅವರು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಡಾಗ್​ ಬ್ರೀಡಿಂಗ್​ನಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ.

ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿಗಳು ಬಹಳ ವಿಶ್ವಾಸ, ಧೈರ್ಯ, ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು, ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು 10-12 ವರ್ಷ ಬದುಕಬಹುದು. ಈ ತಳಿಯ ನಾಯಿಯನ್ನು ‌ಸತೀಶ್ ಅವರು ₹ 20 ಕೋಟಿ ಕೊಟ್ಟು ತಂದಿದ್ದಾರೆ. ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಕಾಣುವುದು ವಿರಳ.

ಈ ಕಾಕೇಸಿಯನ್ ಷೆಪರ್ಡ್ಸ್ ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡಲು ಬಳಕೆ ಮಾಡುತ್ತಾರೆ. ಇತ್ತೀಚೆಗೆ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದಂತಹ ಕೆನಲ್ ಕ್ಲಬ್‌ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿದ್ದ ಸತೀಶ್‌ ಅವರು, ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದೆ.

ಸತೀಶ್ ಅವರು ಈ ಹಿಂದೆ ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ₹ 1 ಕೋಟಿ ಕೊಟ್ಟು ಖರೀದಿಸಿದ್ದರು. ಅದೇ ರೀತಿ ಅಲಾಶ್ಕನ್ ಮಾಲಾಮುಟೆ ₹ 8 ಕೋಟಿ, ಟಿಬೇಟನ್ ಮಾಸ್ಟಿಫ್ ₹ 10 ಕೋಟಿ ಕೊಟ್ಟು ಖರೀದಿಸಿದ್ದರಂತೆ. ಈ ₹ 20 ಕೋಟಿ ಬೆಲೆಯ ‘ಕಡಬೊಮ್ ಹೈದರ್’ಅನ್ನು ಖರೀದಿಸಿದ್ದು, ಅದಕ್ಕೆ ಈಗ ಒಂದೂವರೆ ವರ್ಷ. ಅದನ್ನು ಹೈದರಾಬಾದ್‌ನಲ್ಲಿರುವ ನಾಯಿಗಳ ಮಾರಾಟ ಮಾಡುವವರಿಂದ ಖರೀಸಿದ್ದಾರೆ.

ಹೈದರ್ ಇಷ್ಟೊಂದು ಪದಕಗಳು ಹಾಗೂ ಟ್ರೋಫಿಗಳನ್ನು ಗೆದ್ದಿರುವುದನ್ನು ನೋಡಿ ಆಶ್ಚರ್ಯವಾಯಿತು. ಕೇವಲ ಏಳು ದಿನಗಳಲ್ಲಿ ಈ ನಾಯಿ 32 ಪದಕಗಳನ್ನು ಗೆದ್ದಿದೆ. ಈ ನಾಯಿ ನೋಡಲು ಬೃಹತ್ ಗಾತ್ರವನ್ನು ಹೊಂದಿದೆ, ಆದರೆ ಬಹಳ ಸ್ನೇಹಪರ ಜೀವಿಯಾಗಿದೆ. ಪ್ರಸ್ತುತ ಇದು ನನ್ನ ಹವಾನಿಯಂತ್ರಿತ ಮನೆಯಲ್ಲಿ ನನ್ನ ಜೊತೆಯಲ್ಲೇ ಇದೆ ಎಂದು ಸತೀಶ್ ತಿಳಿಸಿದರು.

ಈ ವಿಶೇಷ ನಾಯಿಯನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿಗರಿಗೆ ಪರಿಚಯಿಸಬೇಕೆಂದುಕೊಂಡಿದ್ದೆ, ಆದರೆ ಆ ಸಮಯದಲ್ಲಿ ಈ ನಾಯಿಯ ಮೈಮೇಲಿನ ಕೂದಲು ಉದುರುತಿತ್ತು. ಹಾಗಾಗಿ, ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದೆ. ಈಗ ಫೆಬ್ರವರಿ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಅಲ್ಲಿ ಈ ನಾಯಿಯನ್ನು ಪ್ರದರ್ಶಿಸಬೇಕೆಂದು ಆಲೋಚಿಸಿದ್ದೇನೆ ಎಂದು ಸತೀಶ್ ತಿಳಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *