ಬಿಜಾಪುರದಲ್ಲಿ ಸೇನಾ ವಾಹನ ಗುರಿಯಾಗಿಸಿ ಐಇಡಿ ಸ್ಫೋಟ; 8 ಯೋಧರು, ಓರ್ವ ಚಾಲಕ ಹುತಾತ್ಮ

Army
Spread the love

ನ್ಯೂಸ್ ಆ್ಯರೋ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ಬಿಜಾಪುರದಲ್ಲಿ ನಕ್ಸಲೀಯರು ದೊಡ್ಡ ಕುಕೃತ್ಯ ಎಸಗಿದ್ದಾರೆ. ಜಂಟಿ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ನಕ್ಸಲಿಯರು ಐಇಡಿಯಿಂದ ಸ್ಫೋಟಿಸಿದ್ದಾರೆ.

ಸ್ಫೋಟದಲ್ಲಿ 8 ಯೋಧರು ಮತ್ತು ಚಾಲಕ ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಎಲ್ಲಾ ಯೋಧರು ದಾಂತೇವಾಡ ಡಿಆರ್‌ಜಿಯವರು ಎಂದು ಹೇಳಲಾಗಿದೆ. ಈ ಘಟನೆಯನ್ನು ಬಸ್ತಾರ್ ಐಜಿ ಪಿ ಸುಂದರರಾಜ್ ಖಚಿತಪಡಿಸಿದ್ದಾರೆ.

ಬಸ್ತಾರ್ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಿಜಾಪುರದ ಕುಟ್ರು-ಬೇದ್ರೆ ರಸ್ತೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟ ನಡೆಸಿದ್ದಾರೆ. ದಂತೇವಾಡ, ನಾರಾಯಣಪುರ ಮತ್ತು ಬಿಜಾಪುರದ ಜಂಟಿ ಕಾರ್ಯಾಚರಣೆ ತಂಡವು ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿತ್ತು.

ಜನವರಿ 6ರ ಇಂದು ಮಧ್ಯಾಹ್ನ 2.15ರ ಸುಮಾರಿಗೆ ಬಿಜಾಪುರ ಜಿಲ್ಲೆಯ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಮಾವೋವಾದಿಗಳು ಐಇಡಿ ಸ್ಫೋಟಿಸುವ ಮೂಲಕ ಭದ್ರತಾ ಪಡೆಯ ವಾಹನವನ್ನು ಸ್ಫೋಟಿಸಿದ್ದಾರೆ. ಸ್ಫೋಟದಲ್ಲಿ 9ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!