ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್: 48 ಆರೋಪಿಗಳಿಗೆ ಜಾಮೀನು
ನ್ಯೂಸ್ ಆ್ಯರೋ: ದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸೆ.19ರಂದು ದಾವಣಗೆರೆಯ ಅರಳಿಮರ ಸರ್ಕಲ್ ಬಳಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು.
ಈ ಪ್ರಕರಣ ಸಂಬಂಧ ಇದೀಗ ಹಿಂದೂ-ಮುಸ್ಲಿಂ ಸೇರಿ 48 ಆರೋಪಿಗಳಿಗೆ ಕೋರ್ಟ್ ಇಂದು (ಅ.16) ಜಾಮೀನು ನೀಡಿದೆ. ಇನ್ನು ಗಲಭೆಗೆ ಸಂಬಂಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸತೀಶ್ ಪೂಜಾರಿಗೆ ಜಾಮೀನು ಸಿಕ್ಕಿದ್ದು, ಅವರನ್ನು ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಗಿದೆ.
ಜಾಮೀನು ಮಂಜೂರು ಆಗುತಿದ್ದಂತೆ ಸತೀಶ್ ಪೂಜಾರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಸತೀಶ್ ಪೂಜಾರಿ ಮನೆಯ ಏರಿಯಾದಲ್ಲಿ ಹಿಂದೂ ಯುವಕರು ಜೈಕಾರ ಹಾಕಿ ಬರ ಮಾಡಿಕೊಂಡರು. ಇನ್ನು ಕುಟುಂಬಸ್ಥರು ಸತೀಶ್ ಪೂಜಾರಿಗೆ ಆರತಿ ಎತ್ತಿ ತಿಲಕವಿಟ್ಟು ಮನೆಗೆ ಬರ ಮಾಡಿಕೊಂಡರು.
ಸೆ.19ರಂದು ನಗರದ ಅರಳಿ ಮರ ಸರ್ಕಲ್ ನಲ್ಲಿ ಮೆರವಣಿಗೆ ಸಾಗಿದ ನಂತರ ಅಜಾದ್ ನಗರ ಮುಖ್ಯ ರಸ್ತೆಯಿಂದ ಮೊದಲು ಕಲ್ಲು ತೂರಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಗಣೇಶ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು.
ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿದ್ದು, ಹಿಂದೂ -ಮುಸ್ಲಿಂ ಸೇರಿದಂತೆ ಒಟ್ಟು 48 ಮಂದಿಯನ್ನು ಬಂಧನ ಮಾಡಲಾಗಿತ್ತು.
Leave a Comment