ರಾಜ್ಯ ಪೋಲಿಸ್ ಇಲಾಖೆಗೆ ಭರ್ಜರಿ ಸರ್ಜರಿ – 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ : ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಯತೀಶ್ ಎನ್. ನೇಮಕ
ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಒಂದೇ ಆದೇಶದಲ್ಲಿ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಪೈಕಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಲಾಭೂರಾಮ್ ಅವರನ್ನು ಕೇಂದ್ರ ವಲಯ ಐಜಿಪಿ ಹುದ್ದೆಗೆ ಪದೋನ್ನತಿಗೊಳಿಸಲಾಗಿದ್ದು, ರವಿಕಾಂತೇಗೌಡ ಅವರಿಗೆ ಹೆಡ್ ಕ್ವಾರ್ಟರ್ಸ್1 ರ ಐಜಿಪಿ ಹೊಣೆ ಹೊರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದ ಸಿ.ಬಿ. ರಿಷ್ಯಂತ್ ಅವರನ್ನು ಬೆಂಗಳೂರಿನ ವೈರ್‌ಲೆಸ್ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಮಂಡ್ಯ ಎಸ್ಪಿಯಾಗಿದ್ದ ಯತೀಶ್ ಎನ್. ಅವರನ್ನು ನಿಯುಕ್ತಿಗೊಳಿಸಲಾಗಿದೆ. ಹಾಗೆಯೇ ತೆರವಾದ ಸ್ಥಾನಕ್ಕೆ ಮಲ್ಲಿಕಾರ್ಜುನ್ ಬಾಲದಂಡಿ ಅವರನ್ನು ಮಂಡ್ಯ ಜಿಲ್ಲೆ ಎಸ್ಪಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಇನ್ನುಳಿದಂತೆ ಮಂಗಳೂರಿನ ಮಾಜಿ ಕಮೀಷನರ್ ಶಶಿಕುಮಾರ್ ಅವರಿಗೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಹುದ್ದೆ ನೀಡಲಾಗಿದ್ದು, ಮೈಸೂರು ನಗರ ಕಮೀಷನರ್ ಆಗಿ ಸೀಮಾ ಲಾಟ್ಕರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ವರ್ಗಾವಣೆ ಪಟ್ಟಿ ಹೀಗಿದೆ..
ಲಾಭೂರಾಮ್ -ಐಜಿಪಿ-ಕೇಂದ್ರ ವಲಯ
ರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01
ತ್ಯಾಗರಾಜ್ – ಐಜಿಪಿ- ಐಎಸ್ ಡಿ
ಶಶಿಕುಮಾರ್ – ಕಮಿಷನರ್ – ಹುಬ್ಬಳ್ಳಿ ಧಾರವಾಢ
ರಮೇಶ್ – ಡಿಐಜಿ-ಪೂರ್ವ ವಲಯ-ದಾವಣಗೆರೆ
ಸೀಮಾ ಲಾಟ್ಕರ್ -ಕಮಿಷನರ್ – ಮೈಸೂರು ನಗರ
ರೇಣುಕಾ ಕೆ.ಸುಕುಮಾರ್ – ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು
ಸಿ.ಕೆ.ಬಾಬಾ-ಎಸ್ಪಿ – ಬೆಂಗಳೂರು ಗ್ರಾಮಾಂತರ
ವಿಷ್ಣುವರ್ಧನಾ- ಎಸ್ಪಿ – ಮೈಸೂರು ಜಿಲ್ಲೆ
ಸುಮನ್.ಡಿ.ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರು
ರಿಷ್ಯಂತ್ -ಎಸ್ಪಿ- ವೈರ್ ಲೆಸ್ – ಬೆಂಗಳೂರು
ಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿ
ನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆ
ಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗ
ಅರುಣಾಂಗ್ಷು ಗಿರಿ – ಎಸ್ಪಿ-ಸಿಐಡಿ-ಬೆಂಗಳೂರು
ನಾಗೇಶ್ ಡಿ.ಎಲ್ – ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ
ಪದ್ಮಿನಿ ಸಾಹಾ- ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು
ಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆ
ಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ
ಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆ
ಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆ
ಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆ
ನಿಖಿಲ್ .ಬಿ.- ಎಸ್ಪಿ – ಕೋಲಾರ ಜಿಲ್ಲೆ
ಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ
ಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ
Leave a Comment