19 ವಿದೇಶಿ ತಳಿ ನಾಯಿಗಳು ಪೊಲೀಸರ ವಶಕ್ಕೆ; 81 ಜನರ ಬಂಧನ! ಅಷ್ಟಕ್ಕೂ ಆಗಿದ್ದೇನು?
ನ್ಯೂಸ್ ಆ್ಯರೋ: ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಬರೋಬ್ಬರಿ 81 ಜನರು ಬಂಧನವಾಗಿದ್ದು 19 ವಿದೇಶಿ ತಳಿ ಶ್ವಾನಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದಲ್ಲಿ ಸದ್ಯ ಡಾಗ್ ಫೈಟ್ ಬೆಟ್ಟಿಂಗ್ಗಳು ಜೋರಾಗಿದ್ದು. ಅಂತಹ ಬೆಟ್ಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದು ಒಟ್ಟು 81 ಜನರನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಹನುಮಾನಗಢ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ಒಟ್ಟು 19 ವಿದೇಶಿ ತಳಿ ಶ್ವಾನಗಳು ಹಾಗೂ 15 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು 81 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಎಸ್ಪಿ ಅರ್ಷದ್ ಅಲಿ ಹೇಳಿದ್ದಾರೆ.
ಪೊಲೀಸರ ದಾಳಿಯನ್ನು ನೋಡಿದ ಇನ್ನೂ ಅನೇಕರು ಗೋಡೆಯನ್ನೆಲ್ಲಾ ಜೀಗಿದು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲೈಸನ್ಸ್ ಹೊಂದಿದ್ದ ಒಂದಿಷ್ಟು ಗನ್ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾಗ್ ಫೈಟ್ ಬೆಟ್ಟಿಂಗ್ನಲ್ಲಿ ಬಂಧನಕ್ಕೊಳಗಾದವರು ಬಹುತೇಕ ಹರಿಯಾಣ ಪಂಜಾಬ್ನಿಂದ ವಾಹನ ಮಾಡಿಕೊಂಡು ಇಲ್ಲಿಗೆ ಬಂದವರೇ ಹೆಚ್ಚು ಇದ್ದಾರೆ ಎಂದು ಎಸ್ಪಿ ಅರ್ಷದ್ ಅಲಿ ಹೇಳಿದ್ದಾರೆ. ಅಲ್ಲಿಂದ ಬರುವಾಗ ಅವರು ತಮ್ಮ ಶ್ವಾನಗಳನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಬಂದಿದ್ದರಂತೆ. ಪೊಲೀಸರ ವಶದಲ್ಲಿರುವ ಕೆಲವು ಶ್ವಾನಗಳಿಗೆ ಕಾದಾಟದ ವೇಳೆ ಗಾಯಗಳಾಗಿದ್ದು ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಅವು ಪೊಲೀಸ್ ಇಲಾಖೆಯ ಕಾವಲಿನಲ್ಲಿವೆ ಎಂದು ಎಸ್ಪಿ ದೃಢಪಡಿಸಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲೆ ಕ್ರೌರ್ಯತೆ ನಿಯಂತ್ರಣ ಹಾಗೂ ಜೂಜಾಟದ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.
Leave a Comment