ವಾಲ್ಮೀಕಿ ನಿಗಮದ 187 ಕೋಟಿ ಹಗರಣ ಪ್ರಕರಣ – ಮಾಜಿ ಸಚಿವ ನಾಗೇಂದ್ರ ವಶಕ್ಕೆ ಪಡೆದ ಇಡಿ : ಕೋಟಿ ಲೂಟಿಯಲ್ಲಿ ಮಾಜಿ ಸಚಿವನ ಕೈವಾಡ ಪತ್ತೆ

N621700303172075636539414301cff34d6b55aee8288411269a15f265028bba248321b17fb82020001fcf3
Spread the love

ನ್ಯೂಸ್ ಆ್ಯರೋ : ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯೇ ಇಡಿ ದಾಳಿ‌ ಆರಂಭಿಸಿದ್ದು, ನಾಗೇಂದ್ರ ಅವರ ನಿವಾಸ ಸೇರಿ ಅವರಿಗೆ ಸೇರಿದ ಸ್ಥಳಗಳಲ್ಲಿ ಸತತ 48 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್‌ನಲ್ಲಿ ನಾಗೇಂದ್ರ ಖಾತೆ ಹೊಂದಿದ್ದರು ಎನ್ನಲಾಗಿದೆ.ಹೀಗಾಗಿ ಇ.ಡಿ.ಯ ಮತ್ತೊಂದು ತಂಡ 2 ವಾಹನಗಳಲ್ಲಿ ಬ್ಯಾಂಕ್‌ ಅಧಿಕಾರಿಗಳನ್ನೇ ನಾಗೇಂದ್ರ ಫ್ಲ್ಯಾಟ್‌ಗೆ ಕರೆತಂದಿತ್ತು. ಬ್ಯಾಂಕ್ ಅಧಿಕಾರಿಗಳ ಮುಂದೆ ನಾಗೇಂದ್ರ ಅವರನ್ನು ಕೂರಿಸಿ ವಿಚಾರಣೆ ನಡೆಸಲಾಗಿದ್ದು, ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಗೇಂದ್ರ ಅವರನ್ನು ಇಡಿ ಕಚೇರಿಗೆ ಕರೆತಂದು ಅವರ ವಿಚಾರಣೆ ನಡೆಸಿ ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ವಾಲ್ಮೀಕಿ ನಿಗಮಕ್ಕೆ ಸೇರಿದ ದುಡ್ಡು ಅಕ್ರಮವಾಗಿ ಆಂಧ್ರದ ಫ‌ಸ್ಟ್‌ ಫೈನಾನ್ಸ್‌ ಸೊಸೈಟಿಗೆ ವರ್ಗವಾಗಿದೆ. ಅಲ್ಲಿಂದ ಐಟಿ ಕಂಪೆನಿ, ಸೆಕ್ಯೂರಿಟಿ ಏಜೆನ್ಸಿ, ಡಿಟೆಕ್ಟಿವ್‌ ಕಂಪೆನಿ, ಚಿನ್ನದಂಗಡಿ, ಬಾರ್‌, ಖಾಸಗಿ ವ್ಯಕ್ತಿಗಳ ಖಾತೆ ಸೇರಿದಂತೆ ಒಟ್ಟಾರೆ 200 ಖಾತೆಗಳಿಗೆ ತಲಾ 10ರಿಂದ 20 ಲಕ್ಷ ರೂ. ವರೆಗೆ ವರ್ಗಾವಣೆ ಮಾಡಲಾಗಿದೆ

Leave a Comment

Leave a Reply

Your email address will not be published. Required fields are marked *

error: Content is protected !!