ಮೌನಿ ಅಮಾವಾಸ್ಯೆ ಹಿನ್ನಲೆ: ಮಹಾಕುಂಭದಲ್ಲಿ ಇಂದು 10 ಕೋಟಿ ಜನರಿಂದ ಪುಣ್ಯಸ್ನಾನ

Kumba 1
Spread the love

ನ್ಯೂಸ್ ಆ್ಯರೋ: ಕಳೆದ 2 ವಾರಗಳಲ್ಲಿ ದೇಶ-ವಿದೇಶಗಳ ಕೋಟ್ಯಂತರ ಭಕ್ತರನ್ನು ಆಕರ್ಷಿಸಿರುವ ಪ್ರಯಾಗ್‌ರಾಜ್‌ನ ಕುಂಭಮೇಳ, ಇಂದು(ಬುಧವಾರ) ಹೊಸ ಇತಿಹಾಸವೊಂದನ್ನು ಸೃಷ್ಟಿಸುವ ಸಾಧ್ಯತೆ ಇದೆ. ಇಂದು ಮೌನಿ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ 10 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಸ್ಥಳದಲ್ಲಿ ಸಾವಿರಕ್ಕೂ ಅಧಿಕ ವೈದ್ಯ ಕೀಯ ಸಿಬ್ಬಂದಿಗಳನ್ನು ನಿಯೋಜಿಸಿದೆ. ಜೊತೆಗೆ ಮಹಾಕುಂಭ ಸ್ಥಳದಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮಹಾಕುಂಭ ನಗರದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ.

ಇತ್ತ ಕುಂಭಮೇಳ ಹಿನ್ನೆಲೆ ರಾಮ ಮಂದಿರಕ್ಕೆ ಲಕ್ಷಾಂತರ ಭಕ್ತರು ಆಗಮಿಸು ತಿದ್ದು, ಸುಲಭ ದರ್ಶನ ವ್ಯವಸ್ಥೆ ಕಲ್ಪಿಸಲು ಸ್ಥಳೀಯರಿಗೆ 15-20 ದಿನ ದೇಗುಲ ಭೇಟಿ ಮುಂದೂಡಿ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಸಲಹೆ ನೀಡಿದೆ.

ಗಣರಾಜ್ಯೋತ್ಸವದಂದು 25 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆ ದಿದ್ದರು. ಸೋಮವಾರ 15 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಜ.29 ರಂದು ಕುಂಭಮೇಳದಲ್ಲಿ ಮೌನಿ ಅಮಾ ವಾಸ್ಯೆ ಹಿನ್ನೆಲೆ ಹೆಚ್ಚಿನ ಭಕ್ತರು ಆಗಮಿ ಸಲಿದ್ದು ಆಯೋಧ್ಯೆಗೂ ಭೇಟಿ ನೀಡಲಿದ್ದಾರೆ. ಹೀಗಾಗಿ 15-20 ದಿನಗಳ ಕಾಲ ಸ್ಥಳೀಯರು ಭೇಟಿ ನೀಡದಿರುವುದು ಒಳಿ ತು ಎಂದಿದೆ. ಮೌನಿ ಅಮಾವಾಸ್ಯೆ ದಿನ ಕುಂಭಮೇಳದಲ್ಲಿ 10 ಕೋಟಿ ಜನರು ಪುಣ್ಯ ಸ್ನಾನ ಮಾಡುವ ನಿರೀಕ್ಷೆಯಿದೆ.

Leave a Comment

Leave a Reply

Your email address will not be published. Required fields are marked *